
ಹಾವೇರಿ : ಮಾಸೂರಿನಲ್ಲಿ ನಡೆದ ಸ್ವಾತಿ ಕೊಲೆ ಪ್ರಕರಣ ಸಂಬಂಧ ಇಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾಸೂರಿನ ಕೊಪ್ಪಿಹೊಂಡ ಗ್ರಾಮದಲ್ಲಿರುವ ಮೃತೆ ಸ್ವಾತಿ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟದ ಅಡುಗೆ ಸಹಾಯಕರಾಗಿ ಕೆಲಸ ಮಾಡಿಕೊಂಡಿರುವ ಸ್ವಾತಿ ತಾಯಿ ಶಶಿರೇಖಾರವರನ್ನು ಭೇಟಿ ಮಾಡಿ ಆರ್ಥಿಕ ಸಹಾಯ ನೀಡಿ ಸಾಂತ್ವಾನ ಹೇಳಿದರು.

*ಪರಿಹಾರಕ್ಕಾಗಿ ಒತ್ತಾಯ.*
ಹಾವೇರಿ ಜಿಲ್ಲಾಧಿಕಾರಿ ಹಾಗು ಜಿಲ್ಲಾ ರಕ್ಷಣಾಧಿಕಾರಿಗಳ ಜೊತೆ ಫೋನ್ ಮೂಲಕ ಮಾತನಾಡಿದ ಕೆ.ಎಸ್.ಈಶ್ವರಪ್ಪ ಹಿಂದುಳಿದ ವರ್ಗದ ಸ್ವಾತಿ ಕುಟುಂಬಕ್ಕೆ ಸರ್ಕಾರದ ವತಿಯಿಂದ ಅತಿ ಶೀಘ್ರದಲ್ಲಿ ಪರಿಹಾರ ದೊರಕಿಸಿಕೊಡುವಂತೆ ತಾಕೀತು ಮಾಡಿದರು.

*ಮಗಳ ಸಾವಿಗೆ ನ್ಯಾಯ ಕೊಡಿಸಿ.*
ಮಗಳ ದುರಂತ ಸಾವಿನಿಂದ ಕಂಗಾಲಾಗಿರುವ ಸ್ವಾತಿ ತಾಯಿ ಶಶಿರೇಖಾ ಎಲ್ಲಿಯೂ ಇಂತಹ ಘಟನೆ ಮತ್ತೊಮ್ಮೆ ನಡೆಯಬಾರದು ನನಗೆ ಯಾವುದೇ ರೀತಿಯ ಹಣದ ಸಹಾಯ ಬೇಡ ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು.