
ಸಾಗರ : ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ೨೦೬ರ ಹೊಸಗುಂದ ಕ್ರಾಸ್ ಬಳಿ ಬೈಕ್, ಶಿಪ್ಟ್ ಕಾರು ಮತ್ತು ಆಟೋ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಬೈಕ್ ಸವಾರ ಸುಧೀರ್ (೩೦) ಮತ್ತು ಆಟೋದಲ್ಲಿದ್ದ ರಾಘವೇಂದ್ರ (೪೨) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಹೊಸಗುಂದ ಕ್ರಾಸ್ನಲ್ಲಿ ಹಣಗೆರೆ ಕಟ್ಟೆಯಿಂದ ಸಾಗರದ ಕಡೆ ಬರುತ್ತಿದ್ದ ಆಟೋಗೆ ಸಾಗರದಿಂದ ಆನಂದಪುರಂ ಕಡೆ ಹೋಗುತ್ತಿದ್ದ ಶಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಶಿಫ್ಟ್ ಕಾರಿಗೆ ಹಿಂದಿನಿಂದ ಬರುತ್ತಿದ್ದ ರಾಯಲ್ ಎನ್ಫೀಲ್ಡ್ ಬೈಕ್ ಡಿಕ್ಕಿಯಾಗಿದೆ.

ಅಪಘಾತದಲ್ಲಿ ಬೈಕ್ ಚಾಲಕ ಸುಧೀರ್ ಸ್ಥಳದಲ್ಲಿಯೆ ಮೃತಪಟ್ಟಿದ್ದರೇ, ಕಾರು ಚಾಲಕ ರಾಘವೇಂದ್ರ ಅವರನ್ನು ಸಾಗರ ಆಸ್ಪತ್ರೆಗೆ ಕರೆತರುತ್ತಿರುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಆಟೋದಲ್ಲಿದ್ದ ನಾಗರಾಜ್, ಪ್ರಣವ, ಪವನ್, ರಾಘವೇಂದ್ರ ಹಾಗೂ ಎನ್ಫೀಲ್ಡ್ ಬೈಕ್ ಹಿಂಭಾಗದಲ್ಲಿ ಕುಳಿತಿದ್ದ ಕುಶಾಲ್ ಅವರಿಗೆ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಆನಂದಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ