
ಈ ಜಗತ್ತಿನ ಸ್ವಸ್ಥ ಸಮಾಜದಲ್ಲಿ ಇರುವ ಕೆಲವೇ ಕೆಲವು ಬೆರಳೆಣಿಕೆಯ ನಯವಂಚಕ ಮನಸ್ಸುಗಳ ಬಗ್ಗೆ ಹೊರ ಬರುತ್ತಿರುವ ನೆಗೆಟಿವ್ ಥಿಂಕಿಂಗ್ ವಾರದ ಅಂಕಣ ಬರೋಬ್ಬರಿ 36 ವಾರಗಳನ್ನು ಮುಗಿಸಿದ್ದು ಈಗ 37ನೇ ವಾರದ ಮತ್ತೊಂದು ವಿಭಿನ್ನಕಥನ ನಿಮ್ಮ ಕಣ್ಣ ಮುಂದೆ ಇದೆ.

ವಿಶೇಷವೆಂದರೆ ಇದರಲ್ಲಿ ನಾವು ಅತ್ಯಂತ ಸ್ಪಷ್ಟವಾಗಿ ಯಾರನ್ನು ಹೋಲಿಕೆ ಮಾಡಿಕೊಂಡು, ಯಾರನ್ನು ಮುಖ್ಯ ಉದ್ದೇಶ ಮಾಡಿಕೊಂಡು ಬರೆದ ವಿಷಯ ಇದಲ್ಲ. ಇಲ್ಲಿ ನೊಂದವನ ಕಥನವನ್ನು ಹೇಳಿದ್ದೇನೆ. ನೊಂದ ಮನಸ್ಸುಗಳು ತನದಾದ ನೋವಿನ ಅಂಶವನ್ನು ನನ್ನದೇ ಕಥನವೆಂದು ಓದಿ ಕನಿಷ್ಠ ಇಷ್ಟರ ಮಟ್ಟಿಗಾದರೂ ಪಾಪಿಗಳ ಕರ್ಮ ಕಥೆ ಬಂತಲ್ಲ ಎಂದು ಮನದಲ್ಲೇ ಸಂತೋಷಪಟ್ಟಿದ್ದರೆ, ಮತ್ತೆ ಕೆಲವೇ ಕೆಲವರು (ಒಂದಿಬ್ಬರು) ನಾನೇ ಆ ಪಾತ್ರದಾರಿ, ನನ್ನ ಬಗ್ಗೇನೇ ಬರೆದಿರೋದು ಅಂದ್ರೆ ನಾವೇನು ಎಂದುಕೊಳ್ಳೋಣ.

ಅವರು ಈ ನೆಗೆಟಿವ್ ಥಿಂಕಿಂಗ್ ಅಂಕಣದ ಪಾತ್ರಧಾರಿ ನಾನೇ ಎಂದುಕೊಂಡು ತನ್ನನ್ನು ತಾನು ಅಲ್ಲೇ ರೂಪಿಸಿಕೊಂಡು ತಮ್ಮ ಕರ್ಮ ಕಥನವನ್ನು ಮೆಲುಕು ಹಾಕುತ್ತಿರುವುದು ದುರಂತವೇ ಹೌದು.
ಈ ಪಾತ್ರಧಾರಿ ನೀನಾಗಿದ್ದರೆ ನಿನ್ನ ಮನಸ್ಸು ಎಷ್ಟು ಮೈಲಿಗೆ ಆಗಿರಬೇಕು. ಅದರೊಳಗಿನ ಕಲ್ಮಶ ಅದೆಷ್ಟು ದೊಡ್ಡ ಪ್ರಮಾಣದಲ್ಲಿರಬೇಕು. ಗುಮ್ಮಣ್ಗುಸ್ಕರ ಸಾವಾಸ ಮಾಡಬೇಡಿ ಎಂಬ ಅಂಕಣ ಬರೆದ ಹೊತ್ತಿನಿಂದ ಇದರ ಪಾತ್ರಧಾರಿ ನಾನೇ ಎಂದುಕೊಂಡು ಕೆಲವರ ಮನದ ಮಾತನ್ನ ಅವರು ಅವರ ಗೆಳೆಯರ ಬಳಿ ಹೇಳಿ ನಂತರ ಬಿಚ್ಚೋಲೇ ಗೌರಮ್ಮನ ಕಥೆ ಕೇಳಿದರೆ ನಗು ಬರುತ್ತದೆ.
ಇಲ್ಲಿ ವಿಷಯವನ್ನು ಮುಖ್ಯವಾಗಿ ತೆಗೆದುಕೊಂಡಿದ್ದೇವೆಯೇ, ಹೊರತು ಯಾವುದೇ ವ್ಯಕ್ತಿಯನ್ನು ಆಧರಿಸಿ ಈ ಕಥನಗಳು ರೂಪಿತಗೊಂಡಿಲ್ಲ. ಅಂತಹ ಬರಹ ಬರೆಯುವ ಅವಶ್ಯಕತೆ ಇಲ್ಲ. ನಾಳೆ ಇದು ಬರುತ್ತದೆ ಎಂದು ಹೇಳುವ ಅನಿವಾರ್ಯತೆ ನಮಗಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇವೆ.

ಸಂತೆಯಲ್ಲಿ ವ್ಯಾಪಾರ ಮಾಡುವಾಗ ಅಥವಾ ಕೊಳ್ಳುವಾಗ ಎಷ್ಟು ಎಚ್ಚರಾವಸ್ಥೆ ಇರುತ್ತದೆಯೋ ಹಾಗೆ ಎಚ್ಚರದ ಭಾಷೆಗಳಿಂದ ಅಂಕಣವನ್ನು ಬರೆಯಲಾಗಿದೆ. ಪಾತ್ರಧಾರಿ ಅಥವಾ ನೊಂದವನು ನೀನಾಗಿದ್ದರೆ ಅದು ನಿನ್ನ ಬದುಕಿನ ಒಂದು ಭಾಗವಾಗಿರಬೇಕು ಅಷ್ಟೇ. ಸಮಾಜದ ನಮ್ಮ ನಡುವಿನ ನೋವುಗಳು, ವಂಚನೆಗಳು, ಮೋಸಗಳು, ಅನ್ಯಾಯಗಳು ಹಾಗೂ ನಂಬಿಕೆಯ ದ್ರೋಹವನ್ನು ಬಿಂಬಿಸುವುದಷ್ಟೇ ನಮ್ಮ ಉದ್ದೇಶ.

ನೀವಿಲ್ಲಿ ಓದುವವರಾಗಿ ಒಂದು ಕಥನವನ್ನು ಕಥೆಯನ್ನಾಗಿ ಹಾಗೂ ಬದುಕಿನ ಅಂಶವನ್ನಾಗಿ ನೋಡಿ ಓದಿ. ನೀವೇ ಅಲ್ಲಿ ಪಾತ್ರಧಾರಿಗಳಾಗದಿರಿ ಅಂತಹ ಕರ್ಮ ನಿಮಗೆ ಬಂದಿದ್ದರೆ ಅದಕ್ಕೆ ನಾವೇನು ಮಾಡಕ್ಕಾಗುತ್ತೆ ಸಿವಾ., ಕಾಪಾಡು ತಂದೆ ಶಿವೇಶ್ವರ..!