
ಶಿವಮೊಗ್ಗ : ಭಾರತ ದೇಶದಲ್ಲಿ ನಡೆಯುತ್ತಿರುವ “ಗೋಲ್ಡ್ ಸ್ಮಗ್ಲಿಂಗ್”ಗಳ ಬಗ್ಗೆ ಸಮರ್ಪಕ ತನಿಖೆಯಾಗಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ರನ್ಯಾ ರಾವ್ ವಿಚಾರ ಕ್ಕೆ ಸಂಬಂದಿಸಿದಂತೆ, ಇದೊಂದು ದೊಡ್ಡ ಗೋಲ್ಡ್ ಸ್ಮಗ್ಲಿಂಗ್ ಆಗಿದೆ. ಇದರ ಹಿಂದೆ ಯಾರು ಯಾರು ಇದ್ದಾರೆ ಎಂದು ಸಂಪೂರ್ಣವಾಗಿ ಹೊರಬರಬೇಕಾಗಿದೆ. , ಸರ್ವೇ ರಿಪೂರ್ಟ್ ಪ್ರಕಾರ ಗೋಲ್ಡ್ ಸ್ಮಗ್ಲಿಂಗ್ ಭಾರತದಲ್ಲಿ ಬಾಂಬೆ ನಂಬರ್ ಒನ್ ಸ್ಥಾನದಲ್ಲಿದೆ. ಇದೊಂದು ಪ್ರಕರಣ ಬಿಟ್ಟರೆ ಇಡೀ ಭಾರತ ದೇಶದಲ್ಲಿ ಯಾವ ಯಾವ ಏರ್ಪೋರ್ಟ್ನಲ್ಲಿ ಎಷ್ಟು ಗೋಲ್ಡ್ ಬಂದಿದೆ ಎಂದು ಅಂದಾಜು ಮಾಡಬೇಕಿದೆ. ಇದು ಸಮರ್ಪಕವಾಗಿ ತನಿಖೆ ಆಗಲಿ ಎಂದರು.

ಡಿಜಿಪಿ ರಾಮಚಂದ್ರ ರಾವ್ ರಜೆ ತೆಗೆದುಕೊಂಡಿರುವ ಉದ್ದೇಶ ನನಗೆ ಗೊತ್ತಿಲ್ಲ. ಏರ್ಪೋರ್ಟ್ ನಲ್ಲಿ ಯಾವ ಆಫೀಸರ್ ಇದ್ದಾರೆ, ಡಿಜಿಪಿ ರಾಮಚಂದ್ರ ರಾವ್ ಏರ್ಪೋರ್ಟ್ನಲ್ಲಿ ಇರುವುದಿಲ್ಲ. ಏರ್ಪೋರ್ಟ್ನಲ್ಲಿ ಇರುವ ಅಧಿಕಾರಿಗಳು ಕೇಂದ್ರ ಸರ್ಕಾರದ ಅಧಿಕಾರಿಗಳು.
ಪ್ರೋಟು ಕಾಲ್ ದುರ್ಬಳಕೆ ಕುರಿತು, ನಾನೊಬ್ಬ ಎಂ ಎಲ್ ಎ, ಸಚಿವನಿದ್ದೇನೆ. ಪ್ರೊಟೊ ಕಾಲ್ ನಲ್ಲಿ ಆಫೀಸರ್ಸ್ ಬೇರೆ ಏನು ಹೆಲ್ಪ್ ಮಾಡಲು ಸಾಧ್ಯ. ಪೋಟೋ ಕಾಲ್ ನಲ್ಲಿ ಏನು ಮಿಸ್ ಆಪರೇಶನ್ ಆಗಿದೆ ಅದು ತನಿಖೆ ಆಗಲಿ. ಒಂದು ಬಾರಿ ಅಲ್ಲ ಎರಡು ಬಾರಿ ಅಲ್ಲ, ೩೦ ರಿಂದ ೪೦ ಬಾರಿ ಆಕೆ ಹೋಗಿ ಬಂದಿರುವುದರ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇಲ್ಲವಾ? ಎಂದು ಪ್ರಶ್ನೆ ಮಾಡಿದರು.

ಪೊಲೀಸ್ ಆಫೀಸರ್ ಏನು ಮಾಡಲು ಸಾಧ್ಯ, ಪೊಲೀಸ್ ಆಫೀಸರ್ ಹೇಳಿದ ತಕ್ಷಣ ಕಸ್ಟಮ್ ಅಧಿಕಾರಿಗಳು ಬಿಟ್ಟು ಬಿಡುತ್ತಾರಾ. ಪೊಲೀಸ್ ಆಫೀಸರ್ಸ್ ಬ್ಯಾಗ್ ಹಿಡಿದುಕೊಂಡು ಕಸ್ಟಮ್ ಅಧಿಕಾರಿಗಳನ್ನು ಬೈ ಪಾಸ್ ಮಾಡಿ ಕರೆದುಕೊಂಡು ಬರುತ್ತಾರಾ. ಕಸ್ಟಮ್ಸ್ ಅಧಿಕಾರಿಗಳು ಯಾರು, ಅವರನ್ನು ಹೇಗೆ ಬಿಟ್ಟರು ಎಂದು ಬಿಜೆಪಿಯವರೇ ಹೇಳಬೇಕು ಎಂದರು.
ಒಂದು ಬಾರಿ ಓಕೆ ಎರಡು ಬಾರಿ ಓಕೆ ೩೦-೪೦ ಬಾರಿ ಹೋಗಿ ಬಂದಿದ್ದಾರೆ ಇದರಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಎಂದು ಗೊತ್ತಾಗುತ್ತದೆ. ಇದನ್ನು ತನಿಖೆ ಮಾಡುವವರು ಯಾರು. ಕಸ್ಟಮ್ ಅಧಿಕಾರಿ ಬಗ್ಗೆ ಯಾರು ಮಾತನಾಡುವುದೇ ಇಲ್ಲ. ಪ್ರೋಟೊ ಕಾಲ್ ಉಲ್ಲಂಘನೆ ಆಗಿದೆ ಎಂದು ಪದೇ ಪದೇ ನಮಗೆ ಕೇಳುತ್ತಿರಾ, ಕಸ್ಟಮ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ನೀವ್ಯಾರು ಮಾತನಾಡುವುದೇ ಇಲ್ಲ ಎಂದರು.
ಇದರಲ್ಲಿ ರಾಜ್ಯ ಸರ್ಕಾರ ಬರುವುದಿಲ್ಲ. ಲೋಪ ಆಗಿರುವುದು ಕಸ್ಟಮ್ ಅಧಿಕಾರಿಗಳಿಂದ ಎಂದ ಅವರು ಕಾರ್ಮಿಕ ಇಲಾಖೆಯಲ್ಲಿ ಆಗಿರುವ ಅವ್ಯವಹಾರದ ಕಿಟ್ ಆರೋಪಕ್ಕೆ ದಾಖಲೆ ಇದ್ದರೆ ಕೊಡಲಿ ಎಂದರು.

ರನ್ಯಾ ಪ್ರಕರಣದಲ್ಲಿ ಇಬ್ಬರು ಸಚಿವರ ಭಾಗಿಯ ಬಗ್ಗೆ ಕುರಿತು ಮಾತನಾಡಿದ ಅವರು ಮಾಜಿ ಸಚಿವ ಮುನಿರತ್ನ ಏನು ಮಾತನಾಡಿದ್ದಾರೆ ಎಂದು ನಾನು ಟೀಕೆ ಮಾಡಲು ಹೋಗುವುದಿಲ್ಲ. ಆದರೆ ಯಾರು ಭಾಗಿಯಾಗಿದ್ದಾರೆ ಎಂದು ಗುತ್ತಾಗಬೇಕು ಅಲ್ವಾ. ರಾಜ್ಯ ಸರ್ಕಾರದಿಂದ ಯಾರೇ ಅಧಿಕಾರಿ ಭಾಗಿಯಾಗಿದ್ದರೂ ಕ್ರಮ ಕೈಗೊಳ್ಳಬೇಕು ಎಂದರು.

ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಬಿಜೆಪಿಯವರು ಎಲ್ಲದಕ್ಕೂ ವಿರೋಧ ಮಾಡುತ್ತಾರೆ. ಕ್ರಮಿಲೇಯರ್ ಶೇ.೧೦ರಷ್ಟು ಮೀಸಲಾತಿ ಕೊಟ್ಟಿದ್ದಾರೆ ಅಲ್ವಾ. ಕೇಂದ್ರ ಸರ್ಕಾರವೇ ಮೀಸಲಾತಿ ಕೊಟ್ಟಿದೆ. ಬಸವಣ್ಣನವರೇ ಹೇಳಿದಂತೆ ಎಲ್ಲರಿಗೂ ಸಮಬಾಳು, ಸಮಪಾಲು ಅಲ್ವಾ ಎಂದರು.