

ನೆಗಿಟೀವ್ ಥಿಂಕಿಂಗ್
ವಾರದ ಅಂಕಣ 37
ಗಜೇಂದ್ರ ಸ್ವಾಮಿ ಎಸ್. ಕೆ.,ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ಬಣ್ಣಗಳಿಲ್ಲದ ಜಗತ್ತು ನಮ್ಮ ಮನದಲ್ಲಿ ಮೂಡಲು ಅಸಾದ್ಯ. ಬಣ್ಣಗಳಿಲ್ಲದ ಬದುಕು ಎಷ್ಟೊಂದು ನೀರಸ ಎಂಬುದು ಕೂಡಲೇ ಅನುಭವಕ್ಕೆ ಬರುತ್ತದೆ. ಪ್ರಕೃತಿಯಲ್ಲಿರುವ ಬಣ್ಣಗಳು ನಮ್ಮ ಬದುಕಿನ ಸುಂದರ ತಾಣಗಳು. ಈ ತತ್ತ್ವದ ಅನುಸಂಧಾನವೋ ಎಂಬಂತೆ ಹೋಳಿಯ ಆಚರಣೆ ನಮ್ಮ ಸಂಸ್ಕೃತಿಯಲ್ಲಿ ಮೂಡಿಕೊಂಡಿದೆ. ಇಂತಹ ಬಣ್ಣದ ಬದುಕೊಳಗೆ ನಾವು ಮುಳುಗಿದ್ದೇವಲ್ಲವೇ?
ಬಣ್ಣಗಳನ್ನು ಎರಚುವುದು, ಓಕಳಿ ಆಡುವುದು ಇಂದಿನ ಹೋಳಿಹಬ್ಬದ ಪ್ರಧಾನ ಅಂಶವಾಗಿ ಕಾಣುತ್ತಿದೆ. ವಸಂತಕಾಲದ ಆಗಮನವನ್ನು ಸಂಭ್ರಮಿಸುವ ಬಗೆ ಇದು. ಪ್ರಕೃತಿಯ ವೈವಿಧ್ಯಕ್ಕೂ, ಹೊಸತನಕ್ಕೂ ಚೇತನಕ್ಕೂ ಸಂಕೇತವೇ ವಸಂತಕಾಲ. ಅದರ ಸಂಭ್ರಮಾಚರಣೆಯೇ ಬಣ್ಣಗಳ ಆಟ. ಆದರೆ ಇದಿಷ್ಟೇ ಹೋಳಿ ಹಬ್ಬವಲ್ಲ ಕಾಮದಹನವೇ ಹೋಳಿಯ ಪ್ರಧಾನ ಅಂಶ.
ಇದು ಇಂದಿನ ಹೋಳಿ ಆಚರಣೆಯ ಅಂಶವಾದರೆ ಬಣ್ಣ ಹಚ್ಚಿಕೊಂಡು ನಾಟಕ ಮಾಡುವವರು ನಮ್ಮನ್ನು ರಂಜಿಸಿ ಬದುಕಿನ ತುತ್ತಿಗಾಗಿ ತೊಡಗಿಸಿಕೊಂಡಿರುತ್ತಾರೆ. ಆದರೆ ಬಣ್ಣ ಹಚ್ಚದೆ ಕಂಡೋರ ಬದುಕಲ್ಲಿ ಆಟವಾಡಿ, ಅವರ ಬದುಕನ್ನೇ ಅತಂತ್ರಗೊಳಿಸಿ, ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಹಿಂಸಿಸುವ ಪರಿಪಾಠ ನಮ್ಮ ನಡುವಿನ ಕೆಲವರಲ್ಲಿ ಹುದುಗಿದೆ. ಅಂತಹ ವಿಕೃತ ಮನಸ್ಸುಗಳನ್ನು ಬಿಂಬಿಸುವ ಬಣ್ಣ ಹಚ್ಕೊಳ್ದೆ ಕಂಡೋರ ಬದುಕಲ್ಲಿ “ನಾಟ್ಕ” ಮಾಡೋ ಕಿರಾತಕರಿದ್ದಾರೆ ಎಚ್ಚರ..! ಎಂಬುದೇ ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣದ ವಿಷಯ.
ಹಿಂದಿನ ಕೆಲ ಅಂಕಣಗಳ ನೋಡಿಓದಿ















ಜಗತ್ತಲ್ಲಿ ನಾನೇ ಒಳ್ಳೆಯವ, ನನ್ನಷ್ಟು ಸಹಾಯ ಮಾಡುವವನು, ನೋವಿಗೆ ಸ್ಪಂದಿಸುವವನು ಯಾರು ಇಲ್ಲ ಎಂದು ಸ್ಟಂಟ್ ಮಾಡುತ್ತಾ ಅದೇ ಹೆಸರಲ್ಲಿ ಇನ್ನೊಬ್ಬರ ತಲೆಯ ಮೇಲೆ ಕಲ್ಲು ಹಾಕುವ, ಇನ್ನೊಬ್ಬರ ಹೊಟ್ಟೆಯನ್ನೇ ಬಗೆದು ತಿನ್ನುವ ಕಿರಾತಕ ಮನಸುಗಳು ನಮ್ಮ ನಡುವೆ ಬಣ್ಣ ಹಚ್ಚಿಕೊಳ್ಳದೆ, ನಾಟಕ ಮಾಡದೆ ಮೆತ್ತಗೆ ಸದ್ದಿಲ್ಲದೆ ಅತಂತ್ರ ಮಾಡುವಾಗ ನಮ್ಮನ್ನು ನಾವೇ ಮರೆತು, ನಮ್ಮನ್ನು ನಾವು ಕಳೆದುಕೊಳ್ಳುವ, ವಂಚನೆಗೊಳಗಾಗುವ ಸಾಕಷ್ಟು ಸನ್ನಿವೇಶಗಳನ್ನು ನಾವು ಕಾಣುತ್ತಿದ್ದೇವೆ.
ಇದಕ್ಕೆ ನಮ್ಮ ನಡುವೆ ಇರುವ ಕೆಲವೇ ಕೆಲವು ವಿಕೃತ ಮನಸ್ಸುಗಳು ಎಂದರೆ ತಪ್ಪಾಗಲಿಕ್ಕಿಲ್ಲ. ಇಂತಹ ವಂಚಕ ಮನಸ್ಸುಗಳ ಬಗ್ಗೆ ನಾವು ಸದಾ ಎಚ್ಚರದ ಹೆಜ್ಜೆ ಇಡಬೇಕಿರುವುದು ಅತ್ಯಂತ ಅಗತ್ಯ. ಪದೇ ಪದೇ ಯಾರೇ ಆಗಲಿ ಸೋಲುವುದಿಲ್ಲ. ಯಾವಾಗಲೂ ವಂಚನೆಗೊಳಗಾಗುವುದಿಲ್ಲ. ಆದರೆ ಈ ಬಣ್ಣದ ಮಾತನಾಡುತ್ತಾ, ಬಣ್ಣ ಹಚ್ಚಿಕೊಳ್ಳದೆ ಮಳ್ಳು ಮಾತುಗಳಿಂದ ತಾನೇ ದೇವರೆಂದು ಬಿಂಬಿಸಿಕೊಳ್ಳುತ್ತಾ, ಕೈಕಾಲು ಹಿಡಿದು ತನ್ನ ಕಷ್ಟವನ್ನೇ ಬೆಟ್ಟದಷ್ಟು ದೊಡ್ಡ ಮಾಡಿ ವಂಚಿಸುವ ಕಿರಾತಕ ಮನಸುಗಳನ್ನು ನಾವು ಅರ್ಥ ಮಾಡಿಕೊಳ್ಳುವಲ್ಲಿ ಸೋಲುತ್ತಿದ್ದೇವೆ. ಅದು ಅರ್ಥವಾಗುವಷ್ಟರಲ್ಲಿ ನಾವು ಎಲ್ಲೋ ಕಳೆದು ಹೋಗಿರುತ್ತೇವೆ ಎಂಬುದು ಸಾಮಾನ್ಯವಾದ ಸಾರ್ವಜನಿಕವಾದ ಅಭಿಪ್ರಾಯ.


ತನ್ನ ಬದುಕು ಏನಾಗಿದೆ, ವಂಚಿಸಿ ತಿನ್ನುವುದೇ ಬದುಕಾಗಿದ್ದರೆ ಹೇಗೆ ತಾನೇ ಅದು ಅರ್ಥಪೂರ್ಣವಾಗುತ್ತದೆ ಎಂಬುದನ್ನು ತಿಳಿದುಕೊಳ್ಳದ ಕಿರಾತಕ ಮನಸ್ಸುಗಳು ಮೌನಿಯಾಗಿ ತನ್ನನ್ನು ತಾನು ಸಮರ್ಪಿಸಿಕೊಳ್ಳುತ್ತಾ, ಕಂಡೋರ ಋಣದಲ್ಲಿ ಬದುಕು ಸವೆಸುತ್ತಾನೆ. ಇಂತಹ ಬಣ್ಣ ಹಚ್ಚಿಕೊಳ್ಳದ, ಇನ್ನೊಬ್ಬರ ಬದುಕಲ್ಲಿ ಬಣ್ಣ ಹಚ್ಚಿ ತನ್ನ ಬೇಳೆಕಾಳು ಬೇಯಿಸಿಕೊಳ್ಳುವ ಕಿರಾತಕ ಮನಸ್ಸುಗಳಿಗೆ ಹೋಳಿ ಹುಣ್ಣಿಮೆ ಹಾಗೂ ಕಾಮದಹನದ ಈ ಹೊತ್ತಿನಲ್ಲಿ ದೊಡ್ಡದೊಂದು ದಿಕ್ಕಾರ.