ರಿಪ್ಪನ್ ಪೇಟೆ: ಕೋಟೆ ತಾರಿಗಾ ಗ್ರಾಮದಲ್ಲಿ ಹೆಜ್ಜೇನು ದಾಳಿಗೆ ಸಿಲುಕಿ ವಿದ್ಯಾರ್ಥಿ ಸೇರಿ ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಿಪ್ಪನ್ಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ೯ನೇ ತರಗತಿ ವಿದ್ಯಾರ್ಥಿ ಹೀರೆಮೈಥೆ ಗ್ರಾಮದ ಎಚ್.ಡಿ. ನರೇಂದ್ರ (15) ಬೆಳಿಗ್ಗೆ ಸೈಕಲ್ನಲ್ಲಿ ಬರುತ್ತಿದ್ದಾಗ ಹೆಜ್ಜೇನು ದಾಳಿಗೆ ಸಿಲುಕಿ ಕುಸಿದು ಬಿದ್ದಿದ್ದಾನೆ. ಅದೇ ಮಾರ್ಗವಾಗಿ ಬೈಕ್ನಲ್ಲಿ ಬಂದ ಹೀರೆಮೈಥೆ ಲಕ್ಷ್ಮಣ್ (50) ಎಂಬುವವರು ವಿದ್ಯಾರ್ಥಿಯ ರಕ್ಷಣೆಗೆ ಧಾವಿಸಿದಾಗ ಅವರಿಗೂ ಹೆಜ್ಜೇನು ಕಚ್ಚಿವೆ. ಕೋಟೆತಾರಿಗಾ ಗ್ರಾಮದ ಸುರೇಶ್ (46) ಎಂಬುವವರ ಮೇಲೂ ಹೆಜ್ಜೇನು ದಾಳಿ ಮಾಡಿವೆ.

ಗಂಭೀರವಾಗಿ ಗಾಸಿಗೊಂಡಿದ್ದ ವಿದ್ಯಾರ್ಥಿಯನ್ನು ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಇಬ್ಬರು ರಿಪ್ಪನ್ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಹೋರರೋಗಿಗಳಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.
