ಶಿವಮೊಗ್ಗ,ಮಾ. 08:
ನಗರದ ಪ್ರತಿಷ್ಟಿತ ಶ್ರೀನಿಧಿ ಸಿಲ್ಕ್ಸ್ ಅಂಡ್ ಟೆಕ್ಸ್ಟ್ ಟೈಲ್ಸ್ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಸಾಧಕ ಮಹಿಳೆಯರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಮಹಿಳಾ ದಿನಾಚರಣೆ ಅಂಗವಾಗಿ ಮಾರ್ಚ್ 10 ನೇ ಸೋಮವಾರ ಸಂಜೆ 6-30 ಕ್ಕೆ ಶೀನಪ್ಪ ಶೆಟ್ಟಿ ವೃತ್ತದ ಸಂಸ್ಥೆಯ ಆವರಣದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಗುತ್ತದೆ .

ಜ್ಯೋತಿಗುರುದತ್ತ ಹೆಗ್ಗಡೆ ಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಾಧಕರಾದ ಶಿವಮೊಗ್ಗ ಮಹಾ ನಗರ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರು, ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ್ತಿ, ಪ್ರಶಸ್ತಿ ಪುರಸ್ಕೃತೆ ಕವಿತಾ ಹಾಗೂ ಕೊಲ್ಲಾಪುರ ಚಾಟ್ಸ್ ನ ದೀಪಾಲಿ ಗಣೇಶ್ ರವರನ್ನು ಸನ್ಮಾನಿಸಲಾಗುತ್ತದೆ.

ಇದೇ ಸಂದರ್ಭದಲ್ಲಿ ಮಹಾ ಕುಂಭಮೇಳದ ಭಾಗವಾಗಿ ನಡೆದ ವಿಶೇಷ ಮಾರಾಟ ಮೇಳದ ಡ್ರಾ ವಿಜೇತ ಅದೃಷ್ಟಶಾಲಿಗಳಿಗೆ ಬಹುಮಾನ ವಿತರಿಸಲಾಗುತ್ತದೆ.
ಅಭಿಮಾನಿಗಳು, ಆಸಕ್ತರು, ಗ್ರಾಹಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳುವಂತೆ “ಶ್ರೀನಿಧಿ ಸಂಸ್ಥೆ ” ಕೋರಿದೆ.