ಶಿವಮೊಗ್ಗ: ಇತ್ತೀಚೆಗೆ ರಾಜ್ಯ ಸರ್ಕಾರ ಸಾವಿರಾರು ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು, (KAS,FDA,SDA,KPSC,PWD,PSI,PC) ನೇಮಕಕ್ಕೆ ಅಧಿಸೂಚನೆ ಪ್ರಕಟಿಸಿದ ಹಿನ್ನೆಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತು ಪರಿಕ್ಷಾರ್ಥಿಗಳಿಗೆ ಉಚಿತ ಕಾರ್ಯಾಗಾರವನ್ನು ಮಾ.5ರಿಂದ 7ರವರೆಗೆ ಬೆಳಿಗ್ಗೆ 9.30ಕ್ಕೆ ತಿಲಕ್ ನಗರದ ರಾಘವೇಂದ್ರ ಮಠ ರಸ್ತೆಯಲ್ಲಿರುವ ಅಚೀವರ್ಸ್ ಅಕಾಡೆಮಿಯಲ್ಲಿ ನಡೆಯಲಿದೆ.

ಈ ಕಾರ್ಯಾಗಾರದಲ್ಲಿ ವಿಷಯ ಸಂಪನ್ಮೂಲ ವ್ಯಕ್ತಿಗಳಾದ ಸಂವಿಧಾನ ಪುಸ್ತಕ ಲೇಖಕ ಪಿ.ಎಸ್. ಗಂಗಾಧರ್ ಹಾಗೂ ಬುಲ್ಬುಲೆಸರ್ ಮೆಂಟಲ್ ಎಬಿಲಿಟಿ ಪುಸ್ತಕ ಲೇಖಕ ಎ.ಸಿ. ,ದೇವರಾಜ, ಭೂಗೋಳಶಾಸ್ತ್ರ ಪುಸ್ತಕದ ಲೇಖಕ ಪಾರ್ಶ್ವನಾಥ ಸೇರಿದಂತೆ ಹಲವರು ಪಾಲ್ಗೊಳ್ಳಲಿರುವರು. ಸ್ಪರ್ಧಾಥಿಗಳು ಇದರ ಉಪಯೋಗ

ಪಡೆದುಕೊಳ್ಳುವಂತೆ ಅಚೀವರ್ಸ್ ಅಕಾಡೆಮಿ ಕೋರಿದ್ದು, ಆಫ್ ಲೈನ್ ತರಗತಿಗಳನ್ನು ಆಯೋಜಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ:7812926702, 7337683668ಸಂಪರ್ಕಿಸಬಹುದು.