ಶಿವಮೊಗ್ಗ, ಮಾ.06:
ಗಾಜನೂರಿನ ತುಂಗಾ ಜಲಾಶಯದಲ್ಲಿ ಇವತ್ತೊಂದು ವಿಸ್ಮಯ ಬೆಳಕಿನ ಜಗತ್ತಿಗೆ ಬಂದಿದೆ. ಅದೂ ಹೇಳಿ ಕೇಳಿ ಬರೋಬ್ಬರಿ 52 ಕೆ.ಜಿ ತೂಗುವ ಸುರಗಿ ಅಥವಾ ಕುರುಡಿ ಮೀನು ಸಿಕ್ಕಿದೆ.
ಇಂದು ಬೆಳಿಗ್ಗೆ ಮೀನುಗಾರರ ಬಲೆಗೆ ಬಿದ್ದ ಈ ಮೀನಿನ ಆಕಾರ ಹಾಗೂ ಗಾತ್ರಕ್ಕೆ ಎಲ್ಲರೂ ಆ ಕ್ಷಣದಲ್ಲಿ ಥಂಡಾ ಹೊಡೆದಿದ್ದಾರೆ.
ದೂರದಲ್ಲೆಲ್ಲೋ ಇಷ್ಟು ದೊಡ್ಡ ಮೀನು ಕಾಣ ಸಿಗುತ್ತಿದ್ದನ್ನು ಗಮನಿಸಿದ್ದ ಮಲೆನಾಡಿಗರಿಗೆ ಇಷ್ಟು ದೊಡ್ಡ ಮೀನು ಕಂಡು ಆಶ್ಚರ್ಯ ಹಾಗೂ ಕುತೂಹಲ ಮೂಡಿಸಿದೆ.
ಶಿವಮೊಗದ ತುಂಗಾ ಡ್ಯಾಂ ನಲ್ಲಿ ಇಷ್ಟು ದೊಡ್ಡ ಮೀನು ದೊರೆತಿರುವುದು ವಿಶೇಷವೇ ಹೌದು.
ಈ ಮೀನನ್ನ ನಗರದ ಮೀನು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇರಿಸಲಾಗಿದೆ. ಈ ಮೀನು ವಿವಿಧ ಖಾಯಿಲೆಗಳಿಗೆ ರಾಮಬಾಣವಾಗಿದೆ. ಕೆ.ಜಿಗೆ 700 ರೂ ನಂತೆ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಯುತ್ತಿದೆ.



