
ಮಹಾಶಿವರಾತ್ರಿ ಪ್ರಯುಕ್ತ ಇಂದು ಮುಂಜಾನೆಯಿಂದಲೇ ಸಹಸ್ರಾರು ಭಕ್ತರು ಶಿವಮೊಗ್ಗ ವಿನೋಬನಗರದ ಶಿವಾಲಯದಲ್ಲಿ ಕುಂಬಮೇಳದ ಮಾದರಿಯಲಿ ವಿಶೇಷ ಅಲಂಕೃತಗೊಂಡಿದ್ದ ಶಿವನ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ದೇವಾಲಯದ ಜವಾಬ್ದಾರಿ ಹೊತ್ತಿರುವ ಶಿವಮೊಗ್ಗ ವಿನೋಬನಗರ ವೀರಶೈವ ಸಮಿತಿ ಪದಾದಿಕಾರಿಗಳು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಭಕ್ತರ ದರುಶನಕ್ಕೆ ಅನುಕೂಲ ಮಾಡಿಕೊಟ್ಟಿತ್ತು.

ದೇವಾಲಯದ ಜವಾಬ್ದಾರಿ ಹೊತ್ತಿರುವ ಶಿವಮೊಗ್ಗ ವಿನೋಬನಗರ ವೀರಶೈವ ಸಮಿತಿ ಪದಾದಿಕಾರಿಗಳು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಭಕ್ತರ ದರುಶನಕ್ಕೆ ಅನುಕೂಲ ಮಾಡಿಕೊಟ್ಟಿತ್ತು.

ಮಹಾಶಿವರಾತ್ರಿಯ ಅಂಗವಾಗಿ ಸೋಮಿನಕೊಪ್ಪ ರಸ್ತೆಯ ಶ್ರೀಗುರು ಸಿದ್ದೇಶ್ವರ ಮಹಾಸ್ವಾಮಿಗೆ ಇಂದು ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು .

ಮಹಾಶಿವರಾತ್ರಿ ಪ್ರಯುಕ್ತ ತಿಲಕ್ ನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶಿವರಾತ್ರಿ ಪ್ರಯುಕ್ತ ರಾಯರ ವೃಂದಾವನದ ಮೇಲೆ ವಿಶೇಷ ಬೆಣ್ಣೆ ಅಲಂಕಾರದಿಂದ ಕಂಗೊಳಿಸುವ ಶಿವಲಿಂಗವನ್ನು ಮಾಡಿರುತ್ತಾರೆ.

ವೀರಶೈವ ಕಲ್ಯಾಣ ಮಂದಿರದ ಆವರಣದಲ್ಲಿರುವ ಕಾಶಿ ವಿಶ್ವನಾಥ

ಮಹಾಶಿವರಾತ್ರಿಯ ಅಂಗವಾಗಿ ವಿಶೇಷ ಅಲಂಕಾರ ಅರ್ಕೇಶ್ವರ ದೇವಸ್ಥಾನ ಹೊಳೆ ಹೊನ್ನೂರು ರಸ್ತೆ
