ಶಿವಮೊಗ್ಗ, ಫೆ., 18:
ದೇಶದ ಪಂಚ ಪೀಠಗಳಲ್ಲೊಂದಾದ ಉತ್ತರಪ್ರದೇಶದ ಕಾಶಿಯ ಜಂಗಮವಾಡಿ ಮಠದಲ್ಲಿ ನಡೆಯುವ ಮಹಾಶಿವರಾತ್ರಿ ಉತ್ಸವದಲ್ಲಿ ಭರತನಾಟ್ಯ ಕಾರ್ಯಕ್ರಮವನ್ನು ನೀಡಲು ಶಿವಮೊಗ್ಗದ ಪ್ರತಿಷ್ಟಿತ ನಟನಂ ಬಾಲ ನಾಟ್ಯ ಕೇಂದ್ರದ 20 ಕಲಾವಿದರು ಕಾಶಿಗೆ ತೆರಳಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಶಿವ, ಪಾರ್ವತಿಯರ ತಾಂಡವ ನೃತ್ಯ, ಭಕ್ತಿ ಪ್ರಧಾನ ನೃತ್ಯ, ಕರ್ನಾಟಕ ಜಾನಪದ ನೃತ್ಯಗಳನ್ನು ಅಭಿನಯಿಸಲಾಗುತ್ತದೆ.

ಈ ತಂಡದಲ್ಲಿ ವಿದುಷಿ ಜೀವಿತ, ಸಂಜನಾ ರಾವ್, ಕುಮಾರಿ ರಕ್ಷಿತಾ, ಕುಮಾರಿ ಶ್ರೀಲಕ್ಷ್ಮ, ಕುಮಾರಿ ಜಾಯ್ಲಿನ್, ಕುಮಾರಿ ತನಿಷ್ಕ, ಕುಮಾರಿ ಭಾವನಾ, ಕುಮಾರಿ ಕಾವ್ಯ, ಕುಮಾರಿ ಭೂಮಿಕ, ಕುಮಾರಿ ನಿಹಾನಿ, ಕುಮಾರಿ ಸಂಜನಾ, ಕುಮಾರಿ ಅಮೂಲ್ಯ, ಕುಮಾರಿ ಷಣ್ಮುಖಿ, ಶ್ರೀಮತಿ ಸುಪ್ರಿಯ ಕಾರ್ತಿಕ್, ಕುಮಾರಿ ಶ್ರೇಯ, ಕುಮಾರಿ ಮಧುರ, ಕುಮಾರಿ ಶಿವಾನಿ, ಕುಮಾರಿ ಸೀಮ, ಕುಮಾರಿ ಆಕಾಂಕ್ಷ ರಾಜ್, ಕುಮಾರಿ ಶಾಲಿನಿ, ಕುಮಾರಿ ಭೂಮಿಕ ಇವರುಗಳು ಅಭಿನಯಿಸಲಿದ್ದಾರೆ.

ಈ ತಂಡದ ನೇತೃತ್ವವನ್ನು ಕರ್ನಾಟಕ ಕಲಾಶ್ರೀ ವಿದ್ವಾನ್ ಡಾ|| ಎಸ್.ಕೇಶವಕುಮಾರ್ ಪಿಳ್ಳೈರರವರು ವಹಿಸುತ್ತಿದ್ದಾರೆ.
ನಟನಂ ನಾಟ್ಯಕೇಂದ್ರದ ತಂಡವು ಫೆಬ್ರವರಿ 21 ರಂದು ಶಿವಮೊಗ್ಗದಿಂದ ಹೊರಟು ಫೆಬ್ರವರಿ 28 ಕ್ಕೆ ಮರಳಿ ಜಿಲ್ಲೆಗೆ ಆಗಮಿಸಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.