ಹೊಸನಗರ; ಶ್ರೀಗಂಧ ಮರಗಳನ್ನು ಕಡಿತಲೆ ಮಾಡಿ ತುಂಡುಗಳನ್ನಾಗಿ ಪರಿವರ್ತಿಸಿ ಸಾಗಾಣಿಕೆ ಮಾಡುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ತಾಲೂಕಿನ ಕೆರೆಹಳ್ಳಿ ಹೋಬಳಿಯ ಹೊಸಳ್ಳಿ ಗ್ರಾಮದ ಸರ್ವೆ ನಂಬರ್ ೧೮ರ ಅರಣ್ಯ ಪ್ರದೇಶದಲ್ಲಿ ಬೆಳೆದಿದ್ದ ಒಂದು ಶ್ರೀಗಂಧದ ಮರವನ್ನು ಆರೋಪಿಗಳು ಕಡಿತಲೆ ಮಾಡಿ ಸಾಗಿಸುವಾಗ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸೊಪ್ಪಿನಮಲ್ಲೆ ಗ್ರಾಮದ ದಿನೇಶ ಯಾನೆ ವಿಜೇತ, ಹಿರಿಯೋಗಿ ಗ್ರಾಮದ ರಾಘವೇಂದ್ರ ಬಂಧಿತರು. ಇನ್ನೋರ್ವ ಆರೋಪಿ ನೀರೇರಿ ಗ್ರಾಮದ ಭದ್ರಪ್ಪ ಯಾನೆ ಕರಿಮಂಜ ತಪ್ಪಿಸಿಕೊಂಡಿದ್ದಾನೆ. ೧೮ ಕೆಜಿ ಶ್ರೀಗಂಧದ ತುಂಡುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ೩ ಡಿಸ್ಕವರಿ ಬೈಕ್ಗಳನ್ನು

ವಶಕ್ಕೆ ಪಡೆಯಲಾಗಿದೆ. ವಲಯ ಅರಣ್ಯಾಧಿಕಾರಿ ಅನಿಲ್ಕುಮಾರ್, ಉಪವಲಯ ಅರಣ್ಯಾಧಿಕಾರಿ ಮಂಜುನಾಥ್, ಸಿಬ್ಬಂದಿ ಪುಟ್ಟಸ್ವಾಮಿ, ಭರತ್ಕುಮಾರ್, ಸುರೇಶ, ರಾಜು, ಪ್ರಶಾಂತ, ಮಹೇಶ ಮತ್ತಿತರರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.