ಸಾಗರ(ಶಿವಮೊಗ್ಗ),ಫೆ.೧೭: ರಾಜ್ಯ ಸರ್ಕಾರದಿಂದ ಸಾಗರದ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆ ೩೦೦ ಕೋಟಿರೂಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಮಂಜೂರಾತಿ ದೊರೆತಿದೆ ಎಂದು ಶಾಸಕ ಗೋಪಾಲ ಕೃಷ್ಣಬೇಳೂರು ಹೇಳಿದರು.
ಅವರು ಸಾಗರದ ಪ್ರವಾಸಿಮಂದಿರದಲ್ಲಿ ಪ್ರಗತಿ ಪರಿಶೀಲನಾಸಭೆ ನಡೆಸಿದ ನಂತರ ಮಾದ್ಯಮಗಳೊಂದಿಗೆ ಮಾತನಾಡಿ ಈಗಿರುವ ೧೦೦ ಹಾಸಿಗೆಯ ಆಸ್ಪತ್ರೆಯನ್ನು ೨೫೦ ಹಾಸಿಗೆಯ ಆಸ್ಪತ್ರೆ ಯನ್ನಾಗಿ ಮಾರ್ಪಡಿಸಲು ಯೋಜನೆ ರೂಪಿಸಲಾ ಗಿದ್ದು,ಈಗಿರುವ ಸರ್ಕಾರಿ ಉಪವಿಭಾಗೀಯ ಆಸ್ಪತ್ರೆಯ ಹಿಂಬಾಗದಲ್ಲಿ ಶಿಥಿಲಗೊಂಡಿ ರುವ ವಸತಿ ಗೃಹಗಳ ತೆರವು ಗೊಳಿಸಿ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ.ಜೊತೆಗೆ ಈಗಿರುವ ಆಸ್ಪತ್ರೆಯ ಎದುರು ಭಾಗದ ಇಕ್ಕೆಲಗಳಲ್ಲಿಯೂ ನೂತನ ಕಟ್ಟಡ ನಿರ್ಮಿಸಲು ನೀಲನಕ್ಷೆ ಸಿದ್ದಪಡಿಸು ತ್ತಿದ್ದು,ಈ ಎರಡರಲ್ಲಿ ಯಾವುದು ಹೆಚ್ಚು ಸೂಕ್ತ ಎಂದು ಆರೋಗ್ಯ ಇಲಾಖೆ ಸ್ವೀಕರಿಸುತ್ತದೆಯೋ ಅದನ್ನು ಪರಿಗಣಿಸಲಾಗುವುದು ಎಂದರು.

ಸಾಗರ ಗ್ರಾಮಾಂತರದಲ್ಲಿ ೨೪ ಗಂಟೆ ಕುಡಿಯುವ ನೀರು ಸರಬರಾಜಿಗೆ ಈಗಾಗಲೇ ಜೆಜೆಎಂ ಯೋಜನೆ ಪ್ರಗತಿ ಯಲ್ಲಿದೆ.ಇದರ ಜೊತೆಯಲ್ಲಿ ಸಾಗರ ನಗರಕ್ಕೂ ದಿನದ ೨೪ ಗಂಟೆ ನೀರು ಸರಬರಾಜು ಮಾಡುವ ಉದ್ದೇಶದಿಂದ ೨೭೫ ಕೋಟಿ ರೂಗಳನ್ನು ಸರ್ಕಾರ ಮಂಜೂರಾತಿ ಮಾಡಿದ್ದು,ಹೊಸ ವೈಜ್ಞಾನಿಕ ವಿಧಾನವನ್ನು ಬಳಸುವ ಮೂಲಕ ಜಲಶುದ್ಧೀಕರಣಕ್ಕೆ ಬಳಸುವ ಒಂದು ಕೋಟಿ ರೂಗಳ ಉಳಿತಾಯವಾಗು ವಂತಹ ಮಾರ್ಪಾಡಿ ನೊಂದಿಗೆ ಕಾರ್ಯಗv ಗೊಳಿಸಲಾಗುವುದು ಎಂದರು.
ಸಾಗರ ಪಟ್ಟಣದ ಒಳಚರಂಡಿ ಕಾಮಗಾರಿಗೆ ೨೦ ಕೋಟಿ ರೂಗಳ ಮೊತ್ತದಲ್ಲಿ ಟೆಂಡರ್ ಕರೆಯಲಾ ಗಿದ್ದು,ಬಿಜೆಪಿ ನಗರಸಭೆ ಸದಸ್ಯರು ವ್ಯಾಪಕ ವಿರೋಧ ಮಾಡಿದ್ದರೂ ನಾವು ಛಲಬಿಡದೆ ಯೋಜನೆ ಪೂರ್ಣಗೊಳಿಸಲು ಕ್ರಮ ವಹಿಸಿದ್ದೇವೆ ಎಂದರು.
ಬಿಜೆಪಿ ಕಳೆದ ೫ ವರ್ಷಗಳಲ್ಲಿ ಕೇವಲ ಗಣಪತಿ ಕೆರೆ ಸುತ್ತ ಗಿರಕಿ ಹೊಡೆ ಯುತ್ತಿದ್ದುದೇ ಸಾಧನೆ ಯಾಗಿದೆ.ಇತರೆ ಯಾವುದೇ ಹೊಸ ಕಾಮಗಾರಿಗಳನ್ನು ಮಾಡಲಿಲ್ಲ.ನಾವು ಗಣಪತಿ ಕೆರೆಗೆ ಸೀಮಿತವಾಗಿಲ್ಲ,ಕ್ಷೇತ್ರದ ಎಲ್ಲಾ ಕಡೆ ಸಮಗ್ರ ಅಬಿವೃದ್ಧಿಗೆ ಕೋಟಿಗಟ್ಟಲೆ ಅನುದಾನ ತರುತ್ತಿದ್ದೇನೆ ಎಂದರು.

ಕುಡಿಯುವ ನೀರಿಗೆ ಅಗತ್ಯ ಕ್ರಮಕ್ಕೆ ಶಾಸಕರ ಸೂಚನೆ
ಬೇಸಿಗೆ ಎದುರಾಗುತ್ತಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಯಾವುದೇ ಕೊರತೆಯಾಗ ದಂತೆ ಕ್ರಮವಹಿಸುವಂತೆ ಗ್ರಾಮಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ಶಾಸಕರು ಸೂಚಿಸಿದ್ದಾರೆ. ಗ್ರಾಮಪಂಚಾಯಿತಿಯಿಂದ ಈಗಾಗಲೇ ಮೆಸ್ಕಾಂ ಇಲಾಖೆಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಬೇಕಾಗುವ ಅಗತ್ಯ ವಿದ್ಯುತ್ ಪರಿವರ್ತಕಗಳಿಗೆ ಯಾವುದೇ ವಿಳಂಬ ಮಾಡದಂತೆ ತಕ್ಷಣ ಒದಗಿಸಬೇಕು ಎಂದು ಮೆಸ್ಕಾಂ ಅಬಿಯಂತರರು ಗಳಿಗೆ ಸೂಚಿಸಿದರು.
ಆವಿನಹಳ್ಳಿ,ಗೆಣಸಿನಕುಣಿ, ಕಲ್ಮ ,ಮಾಸೂ ರು,ಭೀಮನ ಕೋಣೆ,ಪಡವಗೋಡು ಮೊದಲಾದ ಕಡೆಗಳಲ್ಲಿ ಬೋರ್ವೆಲ್ಗಳ ಅಗತ್ಯ ವಿರುವ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು.ಈ ಕುರಿತು ಸಂಜೆಯೊಳಗೆ ವರದಿ ಪಡೆದುಕೊಂಡು ಸೂಕ್ತ ಕ್ರಮವಹಿಸುವಂತೆ ನೀರು ಸರಬರಾಜು ಯೋಜನೆಯ ಅಬಿಯಂತರ ಶಣೈ ಅವರಿಗೆ ಸೂಚಿಸಿದರು.
ಪರೀಕ್ಷೆಗಳು ಎದು ರಾಗುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆ ಎದು ರಾಗದಂತೆ ಕ್ರಮವಹಿಸಬೇಕು ಎಂದು ಮೆಸ್ಕಾಂ ಇಂಜಿನಿ ಯರುಗಳಿಗೆ ಶಾಸಕರು ಸೂಚಿಸಿದರು.ಈ ಸಂ ದರ್ಭದಲ್ಲಿ ತಾಲ್ಲೂಕಿನ ಅಬಿವೃದ್ಧಿಯಲ್ಲಿ ಪ್ರಾಮಾಣಿಕ ಸ್ಪಂದನೆ ನೀಡುವ ಅಧಿಕಾರಿ ಗಳನ್ನು ಮಾತ್ರ ತಾಲ್ಲೂಕಿನಲ್ಲಿ ಕರ್ತವ್ಯದಲ್ಲಿ ಉಳಿಸಿಕೊಳ್ಳು ತ್ತೇವೆ.ನೆಪ ಹೇಳುವ ಸುಳ್ಳು ಮಾಹಿತಿ ನೀಡುವ ಅಧಿಕಾರಿ ಗಳಿಗೆ ಮಾರ್ಚ್ ಸಂದರ್ಭ ದಲ್ಲಿ ಗೇಟ್ಪಾಸ್ ಕೊಡುತ್ತೇನೆ ಎಂದು ಎಚ್ಚರಿಸಿದರು.
ಕುಡಿಯುವ ನೀರಿನ ಯೋಜನೆಯ ಕಾಮಗಾರಿ ವಿಳಂಬಕ್ಕೆ ಕಾರಣವಾಗುತ್ತಿ ರುವ ಗುತ್ತಿಗೆದಾರರನ್ನು ಸಭೆಯಲ್ಲಿಯೇ ತರಾಟೆಗೆ ತೆಗೆದುಕೊಂಡರು.ವಿಳಂಬವಾ ಗದಂತೆ ಪ್ರಗತಿ ತೋರಿಸ ದಿದ್ದರೇ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶಾಸಕರ ವಿಶೇಷ ಅಧಿಕಾರಿ ಟಿ.ಪಿ.ರಮೇಶ್,ಕೃಷಿ ಇಲಾಖೆಯ ಶಿವಪ್ರಕಾಶ್ ,ಗುರುಕೃಷ್ಣ ಶಣೈ,ಉಪ ವಿಭಾಗೀಯ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪರಪ್ಪ ಮೊದಲಾದವರು ಉಪಸ್ಥಿತರಿದ್ದರು.