ಹುಡುಕಾಟದ ವರದಿ- ಸ್ಬಾಮಿ
ಬೆಂಗಳೂರು,ಫೆ. 17:
ಈಶ್ವರನನ್ನು ಭಿನ್ನ ವಿಭಿನ್ನ ಹೆಸರುಗಳಲ್ಲಿ ಆರಾಧಿಸುವುದನ್ನು ನಾವು ಕಂಡಿದ್ದೇವೆ,ಕೇಳಿದ್ದೇವೆ. ಶಿವ ನಾನಾ ಶಕ್ತಿ ಸ್ವರೂಪಿಯಾಗಿ ಆಯಾ ಹೆಸರುಗಳಲ್ಲಿ ತನ್ನನ್ನು ತಾನು ಭಕ್ತರ ಸಮ್ಮುಖದಲ್ಲಿ ಗುರುತಿಸಿಕೊಂಡಿದ್ದಾನೆ.

ಅತ್ಯಂತ ವಿಶೇಷವೆಂದರೆ ಇಂದು ನಾ ಕಂಡ ಅಪರೂಪದ ಭಗವಂತ ಎಂದರೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದ ಆವರಣದ ಆರಂಭದಲ್ಲಿರುವ ಶ್ರೀ ವೈದ್ಯನಾಥೇಶ್ವರ ಅತ್ಯಂತ ವಿಶೇಷ ಎನಿಸಿದ್ದು ಸುಳ್ಳೇನಲ್ಲ.
ಅಲ್ಲಿ ಈ ಭಗವಂತನ ಬಳಿ ಹೋದಾಗ ಅಲ್ಲಿನ ಅರ್ಚಕರು ವೈದ್ಯನಾಥೇಶ್ವರನ ಬಗ್ಗೆ ಹೀಗೆ ವಿವರಣೆ ನೀಡಿದರು.

ಕೋಟಿ ಶಿವಲಿಂಗಗಳಲ್ಲಿ ಒಂದಾಗಿರುವ, ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಶಿವ ಆರೋಗ್ಯ ಸೌಧದ ಈ ಅಂಗಳದಲ್ಲಿ ವೈದ್ಯನಾಥೇಶ್ವರನ್ನಾಗಿ ಎಲ್ಲರ ಆರೋಗ್ಯ ಸುಖ ಶಾಂತಿ ಸಮೃದ್ಧಿ ತರುವ ಭಗವಂತನಾಗಿ ಗುರುತಿಸಿಕೊಂಡಿದ್ದಾನೆ ಎಂದರು.
ಶ್ರೀ ವೈದ್ಯನಾಥೇಶ್ವರ ಎಂಬ ಹೆಸರು ಬಹಳ ಅಪರೂಪ ಇಂತಹ ಹೆಸರಿನ ಭಗವಂತನು ಆರೋಗ್ಯ ಸೌಲಭ್ಯದ ಅಂಗಳದಲ್ಲಿ ವಿಶೇಷವಾಗಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡುತ್ತಿರುವುದು ನಿಜಕ್ಕೂ ವಿಶೇಷವೇ ಹೌದು. ಸುಮಾರು ಪೀಠ ಸೇರಿ ಸುಮಾರು ಐದು ಅಡಿ ಎತ್ತರದ ಶಿವಲಿಂಗ ನಿಜಕ್ಕೂ ಮೋಹಕವಾಗಿದೆ. ಅದರೊಂದಿಗೆ ಧನ್ವಂತರಿ ಮಹಾಗಣಪತಿಯ ವಿಗ್ರಹವು ಸಹ ಇದೆ. ಜೈ ವೈದ್ಯನಾಥೇಶ್ವರ…