ಶಿವಮೊಗ್ಗ ಫೆ. 15: ಜಿಲ್ಲೆಯ ಗ್ರಾಮಾಂತರ ಭಾಗದ ಸೋಗಾನೆ ಸರ್ವೆ ನಂ 120 ಹಾಗೂ ಮಂಡೆನಕೊಪ್ಪದ ಸರ್ವೆ ನಂ 243 ರಲ್ಲಿ ಸರ್ಕಾರಿ ಜಾಗವನ್ನು ಅನಧಿಕೃತವಾಗಿ

ಒತ್ತುವರಿ ಮಾಡಿದ ಕೆಲ ಅಕ್ರಮಗಾರರಿಗೆ ಬಿಸಿ ಮುಟ್ಟಿಸಿ ತಹಶೀಲ್ದಾರ್ ವಿ.ಎಸ್ ರಾಜೀವ್ ರವರ ನೇತೃತ್ವದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, ಪೋಲಿಸರು ತೆರವುಗೊಳಿಸಿದರು.

ತಹಶೀಲ್ದಾರ್ ವಿ.ಎಸ್ ರಾಜೀವ್ ನೇತೃತ್ವದ ಕಂದಾಯ ಇಲಾಖೆಯ ವಿವಿಧ ಅಧಿಕಾರಿಗಳು, ನೌಕರರು, ಪೋಲಿಸರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು.

ಒತ್ತುವರಿಯಾಗಿದ್ದ ಜಾಗವನ್ನು ವಶಕ್ಕೆ ಪಡೆದು
ಸದರಿ ಜಾಗವನ್ನು ಈ ಹಿಂದೆ 2018 ರಲ್ಲಿ ಪಶುಪಾಲನಾ ಇಲಾಖೆಗೆ ಮಂಜುರಾಗಿದ್ದಂತೆ ಸದರಿ ಜಾಗವನ್ನು

ನಿಯಮಾನುಸಾರ ಪಶುಪಾಲನಾ ಇಲಾಖೆಗೆ ಈ ಎರಡು ಕಡೆ ಒಂದು ಎಕರೆ 30 ಗುಂಟೆ ಜಾಗವನ್ನು ಬಿಡಿಸಿಕೊಡಲಾಯಿತು.
ಅದರಂತೆ ಮತ್ತೊಂದೆಡೆ ಜಿಲ್ಲೆಯ ಹಸೂಡಿ ಗ್ರಾಮದ ಸರ್ವೆ ನಂ 134/6 ಪಿಟಿಸಿಎಲ್ ಜಮೀನನ್ನು ಉಚ್ಚನ್ಯಾಯಾಲಯದ ಅದೇಶದಂತೆ ತಹಶೀಲ್ದಾರ್ ವಿ.ಎಸ್ ರಾಜೀವ್ ರವರ ನೇತೃತ್ವದಲ್ಲಿ ಜೆಸಿಬಿ ಮೂಲಕ ತೆರವುಗೊಳಿಸಿ 2 ಎಕರೆ ಜಾಗವನ್ನು ಜಗದೀಶ್ ಎಂಬುವವರಿಗೆ ಹಸ್ತಾಂತರಿಸಿದರು
.