ಶಿವಮೊಗ್ಗ, ಫೆ. 14:
ಶಿವಮೊಗ್ಗದಲ್ಲಿ ಅಕ್ರಮ ಮೀಟರ್ ಬಡ್ಡಿ ಮಾಫಿಯಾದವರ ವಿರುದ್ದ ಶಿವಮೊಗ್ಗ ಪೊಲೀಸರು, ವಿಶೇಷವಾಗಿ ತುಂಗಾನಗರ ಖಡಕ್ ಅಧಿಕಾರಿ ಇನ್ಸ್ ಸ್ಪೆಕ್ಟರ್ ಗುರುರಾಜ್ ಖಡಕ್ಕಾಗಿಯೇ ತಿರುಗೇಟು ನೀಡಿದ್ದಾರೆ.
ಸುಮಾರು ಕೋಟಿ ದಾಟುವ ಬೆಲೆಯ ಮನೆ ಕಟ್ಟಿಸಿ ಗೃಹ ಪ್ರವೇಶ ಮಾಡಿದ್ದ ವ್ಯಕ್ತಿಯೋರ್ವನ ಮಾಹಿತಿ ಹುಡುಕಿದಾಗ ಸಿಕ್ಕ ಸತ್ಯ ಸಂಗತಿ ಈಗ ದೂರಾಗಿದೆ ಎಂದು ತಿಳಿದು ಬಂದಿದೆ.

ದಾಮೋದರ ಯಾನೇ ಕುಮಾರನ ಬಳಿ ಇದ್ದ ನಗದು ಹಣ, ದಾಖಲೆಗಳನ್ನು ನೋಡಿ ಸ್ವತಃ ಪೊಲೀಸರೇ ದಂಗಾಗಿ ಪ್ರಕರಣ ದಾಖಲಿಸಿದ್ದಾರೆನ್ನಲಾಗಿದೆ.


ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಶೆಟ್ಟಿ ಕೊಪ್ಪ ಚಾಲುಕ್ಯ ನಗರದಲ್ಲಿನ ಇಬ್ಬರು ಅಕ್ರಮ ಮೀಟರ್ ಬಡ್ಡಿ ಮಾಫಿಯಾದವರ ಮೇಲೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮಾರ್ಗದರ್ಶನದಲ್ಲಿ ತುಂಗಾನಗರ ಸಿಪಿಐ ಕೆ.ಟಿ.ಗುರುರಾಜ್ ನೇತೃತ್ವದ ತಂಡ ದಾಳಿ ಮಾಡಿತ್ತು.
ಈ ದಾಳಿ ದಾಮೋದರ ಯಾನೆ ಕುಮಾರ ಮತ್ತು ಜನಾರ್ಧನ ಎಂಬುವವರ ಮನೆಯ ಮೇಲೆ ನಡೆದು ಬಂಧಿಸಲಾಗಿತ್ತು. ಇವರ ಬಳಿಯಿಂದ 39 ಲಕ್ಷ ರೂ.,ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಜೊತೆಗೆ, 29 ದ್ವಿಚಕ್ರ ವಾಹನ, ಎರಡು ಕಾರು, 24 ಮೊಬೈಲ್, ಒಂದು ಲ್ಯಾಪ್ ಟಾಪ್, 5 ಚೆಕ್ ಗಳು, ಎರಡು ಆರ್ ಸಿ ಬುಕ್ ಗಳನ್ನು ಅಮಾನತು ಪಡಿಸಿಕೊಳ್ಳಲಾಯಿತು.
ಸಿಪಿಐ ಕೆ.ಟಿ.ಗುರುರಾಜ್ ರವರ ಜೊತೆ, ಪಿಎಸ್ ಐ ಗಳಾದ ಶಿವಪ್ರಸಾದ್, ಮಂಜಮ್ಮ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.