ಇಂದಿನ ಸ್ಪೆಷಲ್ ನ್ಯೂಸ್
ಶಿವಮೊಗ್ಗ,ಫೆ.,06:
ನಾನಾ ಬಗೆಯ ಹೊಸ ಹೊಸ ಯೋಜನೆಗಳ ಮೂಲಕ ಹೊಸ ಹೊಸ ರೂಪದ ನಿಯಮಗಳ ಮೂಲಕ ಸರ್ಕಾರ ಎಲ್ಲ ವ್ಯವಸ್ಥೆಗಳು ಅದರಲ್ಲೂ ಆರೋಗ್ಯ ಹಾಗೂ ಶಿಕ್ಷಣದ ವ್ಯವಸ್ಥೆಗಳು ನಡೆಯುತ್ತಿರುತ್ತವೆ. ಅಂತೆಯೇ ಕಂದಾಯ ವಿಭಾಗದಲ್ಲೂ ಇಂತಹ ಹೊಸ ಯೋಜನೆಗಳು ನಾನಾ ಬಗೆಯ ಎಡವಟ್ಟುಗಳನ್ನು ಮೊದಲು ಮಾಡಿರುತ್ತವೆ. ನಂತರ ಸರಿಯಾಗುವುದು ಸಹಜ.
ಆದರೆ ಅತಿ ಮುಖ್ಯವಾಗಿ ಗಮನಿಸಬೇಕಾದ ಆರೋಗ್ಯ ವಿಷಯದ ನಿರ್ವಹಣೆಯಲ್ಲಿ ಅಲ್ಲಿನ ಅಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕು. ಈ ಹಿನ್ನೆಲೆಯಲ್ಲಿ ವಿಫಲತೆ ಕಂಡುಬಂದ ಕಾರಣ ಇಂದು ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಯಲ್ಲಿ ಔಷಧಿ ಹಾಗೂ ಗುಳಿಗೆ ನೀಡುವ ಜಾಗದಲ್ಲಿ ರೋಗಿಗಳು ಬೆಳಿಗ್ಗೆಯಿಂದ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ವಿಷಯದ ವಿವರಣೆಯನ್ನು ನಿಮ್ಮ ಮುಂದೆ ನೀಡುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಸರ್ಕಾರದಿಂದ ಅದರಲ್ಲೂ ಆರೋಗ್ಯ ಇಲಾಖೆಯಿಂದ ಇನ್ನು ಮುಂದೆ ಎಲ್ಲಾ ರೋಗಿಗಳಿಗೆ ಔಷಧಿ ಹಾಗೂ ಗುಳಿಗೆಯನ್ನು ಆಯಾ ವೈದ್ಯರು ಆನ್ಲೈನ್ ಮೂಲಕವೇ ಔಷಧಿ ಹಾಗೂ ಗುಳಿಗೆ ನೀಡುವ ಮಳಿಗೆಗೆ ಕಳಿಸಬೇಕು. ಅಲ್ಲಿ ರೋಗಿ ಬಂದು ನಿಲ್ಲಬೇಕು. ಆತನ ಹೆಸರು ಕರೆದಾಗ ಆತ ಹೋಗಿ ಪಡೆಯಬೇಕು.
ಇದು ಅತ್ಯಂತ ಒಳ್ಳೆಯ ವ್ಯವಸ್ಥೆಯಾದರೂ ಸಹ ತುಂಬಾ ಕ್ಲಿಷ್ಟಕರ ಪರಿಸ್ಥಿತಿಯಲ್ಲಿರುವ ಆರೋಗ್ಯ ಸಮಸ್ಯೆ ಎದುರಿಸುವಂತಹ ರೋಗಿಗಳು ಹೊಸ ಪ್ರಯೋಗದ ನಡುವೆ ನಿತ್ರಣರಾಗುವುದು ಕಂಡುಬರುತ್ತಿದೆ. ಏಕೆಂದರೆ ಅಂತಹವರಿಗಾಗಿ ಹಳೆಯ ವ್ಯವಸ್ಥೆಯಲ್ಲಿ ಹಾಗೂ ಔಷಧಿಯನ್ನು ಕೊಟ್ಟು ಕಳಿಸಬೇಕು ಎಂಬುದು ಸಾರ್ವಜನಿಕರ ಹಾಗೂ ಆರೋಗ್ಯ ಚಿಕಿತ್ಸೆ ಪಡೆಯುವವರ ಅತಿ ದೊಡ್ಡ ಒತ್ತಾಯ.
ತುಂಗಾತರಂಗ “ವೆಬ್” ನ್ಯೂಸ್ Impact – ಪತ್ರಿಕೆಯಲ್ಲಿ ಸುದ್ದಿ ಬರೋದ್ರೊಳಗೆ ಪ್ರೀಡಂ ಪಾರ್ಕ್ ಕ್ಲೀನ್, ಸ್ವಚ್ಚತೆ, ಗಸ್ತು ನಿರಂತರವಾಗಿರಲಿ https://tungataranga.com/?p=39106
ಲಿಂಕ್ ಬಳಸಿ ಸುದ್ದಿ ಓದಿ
ತುಂಗಾತರಂಗ ಗುಂಪಲ್ಲಿ ಇಲ್ಲದವರು ಮಾತ್ರ ಇಲ್ಲಿ ಸೇರಿ
https://chat.whatsapp.com/JPToOk9Z1Q64q9rweteDmf
ಅಂತೆಯೇ ಶಿವಮೊಗ್ಗ ನಗರದ ಮೆಗಾನ್ ಆಸ್ಪತ್ರೆ ನಾನಾ ವಿಷಯಗಳಲ್ಲಿ ಹೊಸ ಹೊಸ ಅವತಾರಗಳನ್ನು ಸೃಷ್ಟಿಸಿಕೊಂಡಿದೆಯಂತೆ. ಪ್ರೈವೇಟ್ ವಾರ್ಡ್ ಧರ ಹೆಚ್ಚಿಸಲಾಗಿದೆ. ಲ್ಯಾಬೋರೇಟರಿಧರ ಹೆಚ್ಚಿಸಿದ್ದಾರಂತೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಿಗಬೇಕಾದ ಸೌಲಭ್ಯಗಳಿಗೆ ಕಡಿತ ಬಿದ್ದಿದೆ…, ಸೇರಿದಂತೆ ಹತ್ತುಹಲವು ದೂರುಗಳು ನಿಮ್ಮ ಪತ್ರಿಕೆಯ ಅಂಗಳಕ್ಕೆ ರೋಗಿಗಳ ಹಾಗೂ ಅವರ ಪೋಷಕರ ಕಡೆಯಿಂದ ಬಂದಿವೆ.
ನಿರಂತರ ಹುಡುಕಾಟದ ಮೂಲಕ ಜನದ್ವನಿಯಾಗಿ ಕೆಲಸ ಮಾಡುವ ಕಾರ್ಯದಲ್ಲಿ ನಿಮ್ಮ ತುಂಗಾತರಂಗ ಎಂದಿಗೂ ಹಿಂದೆ ಬಿದ್ದಿಲ್ಲ. ಜನರಿಗೆ ಅನುಕೂಲವಾಗುವ ಜನಸೇವೆಯ ಕಾರ್ಯಗಳಿಗೆ ನಿಮ್ಮ ಈ ಪತ್ರಿಕೆ ಸದಾ ನಿಮಗೆ ಬೆನ್ನೆಲವಾಗಿ ನಿಲ್ಲುತ್ತದೆ.