![KSRTC BUSTAND](https://tungataranga.com/wp-content/uploads/2025/02/KSRTC-BUSTAND.jpg)
ಶಿವಮೊಗ್ಗ : ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರ ಪ್ಯಾಂಟ್ ಜೇಬಿನಿಂದ ಪರ್ಸ್ನ್ನು ಪಿಕ್ಪಾಕೆಟ್ ಮಾಡಿರುವ ಘಟನೆ ವರದಿಯಾಗಿದ್ದು, ಪರ್ಸ್ನಲ್ಲಿ ದುಬಾರಿ ಬೆಲೆಯ ಬ್ರೇಸ್ಲೆಟ್ ಮತ್ತು ನಗದು ಇತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
![](http://tungataranga.com/wp-content/uploads/2023/04/Screenshot_2023_0226_070755-1.jpg)
ತೇವರಚಟ್ನಹಳ್ಳಿಯ ಹೊನ್ನೂರಪ್ಪ ಶಿವಮೊಗ್ಗ ಕೆಎಸ್ಆರ್ಟಿಸಿ ನಿಲ್ದಾಣದಲ್ಲಿ ಚಳ್ಳಕೆರೆಗೆ ತೆರಳುವ ಬಸ್ ಹತ್ತಿದ್ದರು. ಸೀಟಿನಲ್ಲಿ ಕುಳಿತು ಟಿಕೆಟ್ ಮಾಡಿಸಲು ಪರ್ಸ್ಗೆ ತೆಗೆಯಲು ಮುಂದಾದಾಗ ಜೇಬಿನಲ್ಲಿ ಪರ್ಸ್ ಇರಲಿಲ್ಲ. ಪರ್ಸ್ನಲ್ಲಿ 11.500 ಗ್ರಾಂ ತೂಕದ ಸುಮಾರು 54 ಸಾವಿರ ರೂ. ಮೌಲ್ಯದ ಚಿನ್ನದ ಬ್ರೇಸ್ಲೆಟ್, 4500 ರೂ. ನಗದು, ಬ್ಯಾಂಕ್ ಒಂದ ಎಟಿಎಂ ಕಾರ್ಡ್ ಇತ್ತು ಎಂದು ಆರೋಪಿಸಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.