ಶಿವಮೊಗ್ಗ: ನಗರದ ವಿನೋಬನಗರ ಪೊಲೀಸ್ ಠಾಣೆಯ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಪತ್ಯೇಕ ಎರಡು ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿರುವ ಘಟನೆ ವರದಿಯಾಗಿದೆ.
ಪ್ರಕರಣ 1
ಜೆ.ಹೆಚ್. ಪಟೇಲ್ ಬಡಾವಣೆಯ ಚಾನಲ್ ಸಮೀಪ ದ್ವಿಚಕ್ರ ವಾಹನದಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ವಿನೋಬನಗರ ಪೊಲೀಸ್ ಠಾಣೆಯ ಪಿಐ ಚಂದ್ರಕಲಾ, ಪಿಎಸ್ಐ ಸುನೀಲ್ ಬಿ.ಸಿ, ಸಿಬ್ಬಂಧಿಗಳ ತಂಡ ದಾಳಿ ನಡೆಸಿ, ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಸಾಗರ ತಾಲ್ಲೂಕಿನ ಬಿಲಗೋಡಿ ಯ ಪ್ರತಾಪ್ ಎಸ್ (೨೬) ಇತನನ್ನು ಬಂಧಿಸಿ ೬ ಸಾವಿರ ಮೌಲ್ಯದ ೩೪೯ ಗ್ರಾಂ ತೂಕದ ಒಣ ಗಾಂಜಾ, ೬ ಸಾವಿರದ ನಗದು ಹಣ, ಮತ್ತು ಕೃತ್ಯ ಕ್ಕೆ ಉಪಯೋಗಿಸಿದ ೮ ಸಾವಿರದ ಮೌಲ್ಯದ ಮೊಬೈಲ್ ಪೋನ್, ದ್ವಿ ಚಕ್ರ ವಾಹನ ಸೇರಿದಂತೆ ವಶಕ್ಕೆ ಪಡೆಯಲಾಗಿದೆ.
ಪ್ರಕರಣ 02
ಕೀರ್ತಿ ನಗರದ ದೇವಂಗಿ ಪಾರ್ಕ್ನಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ವಿನೋಬನಗರ ಪೊಲೀಸ್ ಠಾಣೆಯ ಪಿಐ ಚಂದ್ರಕಲಾ ನೇತೃತ್ವದ ಸಿಬ್ಬಂಧಿಗಳ ತಂಡ ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಸುರೇಂದ್ರ @ ಬಬ್ಲು, (೩೦ ವರ್ಷ) ಇತನನ್ನು ಬಂಧಿಸಿ ೫ ಸಾವಿರ ಮೌಲ್ಯದ ೩೬೩ ಗ್ರಾಂ ತೂಕದ ಒಣ ಗಾಂಜಾ, ಕೃತ್ಯಕ್ಕೆ ಉಪಯೋಗಿಸಿದ ಮೊಬೈಲ್ ಪೋನ್ ವಶಕ್ಕೆ ಪಡೆಯಲಾಗಿದೆ.
ವಿನೋಬನಗರ ಪೊಲೀಸರ ಈ ಕಾರ್ಯಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಪ್ರಶಂಸಿಸಿ ಅಭಿನಂಧಿಸಿದ್ದಾರೆ.