“ಒಂದೇ ಹಾವು ನಿಮ್ಮನ್ನು ಎರಡು ಬಾರಿ ಕಚ್ಚಲು ಬಿಡಬೇಡಿ, ಇದು ಆಯುಧದ ಬಗ್ಗೆ ಅಲ್ಲ…” ಇದು ಸಾಮಾಜಿಕ ಜಾಲತಾಣದಲ್ಲಿ ಕಂಡ ವಾಕ್ಯ.
ಅದನ್ನು ಅತ್ಯಂತ ಗಂಭೀರವಾಗಿ ಗಮನಿಸಿದಾಗ ಅದರಲ್ಲಿ ಎಷ್ಟೊಂದು ಅರ್ಥಗಳಿವೆ. ಎಷ್ಟೊಂದು ತಾತ್ಪರ್ಯಗಳಿವೆ.
ಪದೇ ಪದೇ ಮೋಸ ಹೋಗಬೇಡಿ, ಪದೇ ಪದೇ ಅನ್ಯಾಯಕ್ಕೊಳ್ಳಗಾಗಬೇಡಿ, ಪದೇ ಪದೇ ವಂಚನೆಗೊಳಾಗಬೇಡಿ, ನೀವು ನಂಬಿಕೆಯ ಮೇಲೆ ನಿಂತುಕೊಳ್ಳಿ. ಆದರೆ ಅದೇ ಕಾರಣಕ್ಕೆ ಪದೇಪದೇ ಜಾರಿ ಬೀಳಬೇಡಿ, ಎಚ್ಚರಾವಸ್ಥೆ ನಿಮ್ಮಲ್ಲಿರಲಿ ಎಂಬುದು ಇದರ ತಾತ್ಪರ್ಯ ಎನಿಸುತ್ತದೆ.
ಇದು ಹಾವಿನ ಬಗ್ಗೆ ಹೇಳಿದ ಮಾತಲ್ಲ ಇದು ಒಬ್ಬ ನಮ್ಮ ನಡುವಿನ ನಮ್ಮೊಳಗೆ ಇರುವ ಕಿರಾತಕ ಮನಸ್ಸಿನ ವ್ಯಕ್ತಿತ್ವವನ್ನು ಬಿಂಬಿಸುವ ಪದ ಅಲ್ಲವೇ? ಆತ ಗಂಟಲಲ್ಲೇ ವಿಷವಿಟ್ಟುಕೊಂಡಿರ್ತಾನೆ. ಅದು ನಿಮ್ ಕಣ್ಣಕಾಣೊಲ್ಲ, ಕಚ್ಚಿದಾಗಲೇ ಗೊತ್ತಾಗೋದು ಅಲ್ಲವೇ?
ನಮಗೆ ಗೊತ್ತಿರದೆ ನಾವು ವಂಚನೆಗೊಳಗಾಗುತ್ತಿದ್ದೇವೆ ಎಂದರೆ ಅದು ಒಂದು ಬಾರಿ ಸಹಜ ಪ್ರಕ್ರಿಯೆ ನಿಜ. ಮತ್ತೆ ಅದೇ ರೀತಿ ಮತ್ತೆ ಅಂತದೇ ಅನ್ಯಾಯಕ್ಕೆ ವಂಚನೆಗೆ ನೀವು ತುತ್ತಾದಿರಿ ಎಂದರೆ ನಿಮ್ಮಷ್ಟು ಶತ ಮೂರ್ಖರು ಈ ಪ್ರಪಂಚದಲ್ಲಿ ಯಾರೂ ಇಲ್ಲ. ನಿಮ್ಮನ್ನು ಬಲಿಕಾ ಬಕ್ರಾ ಎಂದು ಅಂದುಕೊಂಡು ನಿಮ್ಮ ತಲೆಗೆ ಬಲವಾದ ಟೋಪಿ ಹಾಕುತ್ತಾನೆ. ಉಳಿದ ನಿಮ್ಮ ಎಲ್ಲಾ ಬಟ್ಟೆಗಳನ್ನು ಬಿಚ್ಚಿಕೊಂಡು ಮಾರಿ ಬದುಕುತ್ತಾನೆ ಹುಷಾರ್!
ಇದು ವಾಸ್ತವದ ನೈಜಾಂಶ. ಇಂತಹ ನೋವುಗಳಲ್ಲಿ ಒಂದು ಬಾರಿ ಸಿಕ್ಕಿಹಾಕಿಕೊಳ್ಳುವುದು ನಮ್ಮ ನಡುವಿನ ಮನುಷತ್ವದ ಕಾರಣದಿಂದ ಆಗಿರಬಹುದು. ಆದರೆ ಮತ್ತೆ ಅಂತಹದೇ ಕಾರಣಕ್ಕೆ ನೀವು ಸಿಗುತ್ತೀರಿ ಎಂದರೆ ನಿಜವಾಗಿಯೂ ನೀವೇ ಬದುಕಲು ಯೋಗ್ಯತೆ ಇಲ್ಲದವರು ಎಂದು ಕೊಳ್ಳಬೇಕು ಎಂಬುದು ಇದರ ಅರ್ಥವಲ್ಲವೇ?