“
ಎಸ್.ಕೆ. ಗಜೇಂದ್ರ ಸ್ವಾಮಿ, ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ವಾರದ ಅಂಕಣ- 28
ನಮ್ಮ ನಮ್ಮ ನಡುವಿನ ಬದುಕು ಅತ್ಯಂತ ವಿಭಿನ್ನ ಮಾರ್ಗಗಳಲ್ಲಿ ನಡೆಯುತ್ತದೆ. ದುಡಿಮೆ ಒಂದೆಡೆಯಾದರೆ ಅಕ್ರಮ ಗಳಿಕೆ ಮತ್ತೊಂದು ಕಡೆ ವಿಜೃಂಭಿಸುತ್ತದೆ. ಇನ್ನೊಬ್ಬರ ತಲೆಯ ಮೇಲೆ ಕಲ್ಲು ಹಾಕಿ ಬದುಕುವ ಕೆಲವು ತಿಮಿಂಗಲಗಳು ನಮ್ಮ ನಡುವೆ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಪೂರಕವಾಗಿ ಕಣ್ಣಿಗೆ ಕಾಣುವ ಜೂಜಾಟಗಳು, ಆನ್ಲೈನ್ ಅವ್ಯವಹಾರಗಳು ನಮ್ಮ ನಡುವೆ ಬಹಳಷ್ಟು ಜೂಜಾಡುವವರನ್ನು ತಿರಿದು ತಿಂದು ಹಾಕುವುದನ್ನು ಕಣ್ಣಾರೆ ಕಾಣುತ್ತಿದ್ದೇವೆ ಎಂಬುದು ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣದ ವಿಷಯ.
ಈ ಜೂಜಾಟ ಎಂಬುದರಲ್ಲಿ ಎಲ್ಲರೂ ಪಾತ್ರಧಾರಿಗಳೇ, ಆಡುವವನು ಹಾಗೂ ಆಡಿಸುವವರು ಮಾತ್ರ ಇಲ್ಲಿ ಪಾತ್ರಧಾರಿಗಳಲ್ಲ. ಅದನ್ನು ನೋಡುವ ಬಹಳಷ್ಟು ಜನ ಇಲ್ಲಿ ಒಂದೊಂದು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅಲ್ಲವೇ ವಿಶೇಷವಾಗಿ ಅದನ್ನು ಹತ್ತಿಕ್ಕ ಬೇಕಾದವರು ಒಂದೆಡೆ ಬಹಳಷ್ಟು ಸ್ಟ್ರಾಂಗ್ ಆದರೆ ಮತ್ತೊಂದೆಡೆ ಅದರ ಬಗ್ಗೆ ಕನಿಕರ ತೋರದೆ ಮಾಮೂಲಿ ಎಂದುಕೊಳ್ಳುವ ವ್ಯವಹಾರಗಳು ಸಹಜವಾಗಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಜಗತ್ತಿನ ಕಟು ಸತ್ಯ ಎಂದರೆ ತಪ್ಪಾಗಲಿಕ್ಕಿಲ್ಲ.
ಒಟ್ಟಾರೆಯಾಗಿ ಜೂಜು ಆಡಿಸುವವನನ್ನು ಅವರ ತಂಡವನ್ನು ರಕ್ಷಿಸುತ್ತದೆ ಎಂದು ಕೊಂಡರೆ ಅದು ಸಹ ತಪ್ಪಾಗುತ್ತದೆ. ಮೈಯೆಲ್ಲಾ ಕಣ್ಣಾಗಿ ಎಚ್ಚರಾವಸ್ಥೆಯಲ್ಲಿ ಜವಾಬ್ದಾರಿಯನ್ನು ನಿಭಾಯಿಸುವುದರಲ್ಲಿ ಆತ ಸೊರಗಿ ಸತ್ತು ಹೋಗಿರುತ್ತಾನೆ. ಸ್ವಲ್ಪ ಹೆಚ್ಚು ಕಮ್ಮಿ ಆದರೆ ಕಂಬಿ ಎಣಿಸಲು ಸಿದ್ಧನಾಗಿರಬೇಕು. ಆದಾಯ ಎಷ್ಟಿರುತ್ತದೆಯೂ ಅದರಲ್ಲಿ ಒಂದಿಷ್ಟು ಪಟ್ಟು ಗೊತ್ತಾದ ಲೋಕಗಳಿಗೆ ಹಂಚಿಹೋಗುತ್ತದೆ. ಅಂತಿಮವಾಗಿ ಈ ಜೂಜನ್ನು ಚಟವನ್ನಾಗಿಸಿಕೊಂಡವನು ಲಾಭಗಳಿಸುವುದರಲ್ಲಿ ಬದುಕನ್ನೇ ಕಳೆದುಕೊಳ್ಳುವ ಅದರೊಳಗೆ ಮುಳುಗಿ ತನ್ನನ್ನು ತಾನು ಸಂಪೂರ್ಣವಾಗಿ ನಶಿಸಿಕೊಳ್ಳುವ ಸಂದರ್ಭಗಳನ್ನು ಘಟನೆಗಳನ್ನು ನಾವು ಕಣ್ಣಾರೆ ಕಂಡಿದ್ದೇವೆ. ಬರದ ಸಾವನ್ನು ಎಷ್ಟೋ ಜನ ಇದಕ್ಕಾಗಿ ಪಡೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇಸ್ಪೀಟ್ ಒಸಿ ಅಂತಹ ದಂಧೆಗಳ ನಡುವೆ ಆನ್ಲೈನ್ ನಲ್ಲಿ ಆಡುವ ಆಟಗಳಿಗೂ ಅಲ್ಲಿ ನಡೆಯುವ ಒಸಿ ದಂದೆಗೂ ಸಾಕಷ್ಟು ಅವ್ಯವಹಾರದ ಲೇಪನವಿದ್ದರೂ ಸಹ ಅದನ್ನು ವ್ಯವಸ್ಥಿತವಾಗಿ ಮಾಡುವ ಸನ್ನಿವೇಶ ಕಣ್ಣಾರೆ ಕಾಣುತ್ತಿದ್ದೇವೆ. ಒಟ್ಟಾರೆ ಜೂಜು ಎಂಬುದರಲ್ಲಿ ಎಲ್ಲರೂ ಪಾತ್ರಧಾರಿಗಳು. ಎಲ್ಲರೂ ಇದರಲ್ಲೊಂದು ದೊಡ್ಡ, ಸಣ್ಣ ಪಾತ್ರವನ್ನು ನಾಯಕ ಹಾಗೂ ವಿಲನ್ ಪಾತ್ರವನ್ನು ವಹಿಸುತ್ತಾನೆ. ಆದರೆ ನಿಜವಾದ ನಾಯಕ ಸಂಕಷ್ಟದ ದಿನಗಳನ್ನು ಎದುರಿಸುತ್ತಾನೆ ಎಂಬುದೇ ವಿಶೇಷ.
ಮರೆತೊದವರಂತೆ ನಾಟ್ಕ ಮಾಡೋರಿದ್ದಾರೆ!
“ನಮ್ಮಿಂದ ಇಸ್ಕೊಂಡ್ ತಿಂದ್ರೂ ನಾಚ್ಕೆ ಇಲ್ದಂಗೆ ಪಕ್ಕದಲ್ಲೆ ಇರೋ ನಮ್ ಪ್ರೀತಿ ನಾಯಿ ತರ ಇರೋರನ್ನ ಕಾಪಾಡಿ, ಪಾಪ ಉಳಿಸಿ, ಕಿತ್ತೋದವು ಅಂದ್ಕೊಳ್ಳಿ, ಮುಂದೆ ಕಳ್ಕೋಬೇಡಿ, ಟೈಮ್ ಸಿಕ್ರೆ ಬಡಿದಾಕಿ”
ಇಂತಹದೊಂದು ಮಾತನ್ನ ನೆಗೆಟಿವ್ ಥಿಂಕಿಂಗ್ ಅಂಕಣದ ಓದುಗರು ಒಬ್ಬರು ಹೇಳಿದ್ದು ಕೇಳಿ ನಗು ಬಂತು ಎಲ್ಲೋ ಕೊಟ್ಟದ್ದನ್ನು ಕಳೆದೊಯ್ತು ಎಂದು ಬಿಟ್ಟುಬಿಡಿ ಎನ್ನುವುದರ ಜೊತೆಗೆ ಕೊಟ್ಟದ್ದನ್ನೇ ಮರೆತು ಶೋಕಿ ವಾಲಗಳಂತೆ ಪಕ್ಕದಲ್ಲಿ ನಿಂತು ಮಾತನಾಡಿಸುವ ನಗುವ ಗುಡ್ ಮಾರ್ನಿಂಗ್ ಗುಡ್ ನೈಟ್ ಹೇಳುವ ಎಷ್ಟೋ ಜನರನ್ನು ನಾವು ಕಾಣುತ್ತಿದ್ದೇವೆ ಅವರು ಕಂಡಾಗ ಕೊಟ್ಟದ್ದು ನೆನಪಾಗುತ್ತದೆ ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ ಸಮಯ ಸಿಕ್ಕಾಗ ಜಾಡಿಸುವಿರಂತೆ, ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದಷ್ಟೇ ಹೇಳಿದ್ದು ಕೇಳಿ ಅದನ್ನು ಒಂದು ಪುಟ್ಟಬರಹ ಮಾಡುವ ಉದ್ದೇಶದಿಂದ ಬರೆದ 4 ಸಾಲುಗಳಿವು