ಶಿವಮೊಗ್ಗ ಜ.11:: ಗಣರಾಜ್ಯೋತ್ಸವದ ಅಂಗವಾಗಿ ಸೃಷ್ಠಿ ಮಹಿಳಾ ಸಂಘದ ವತಿಯಿಂದ ಜ.26 ರಂದು ಗಣರಾಜ್ಯೋತ್ಸವ ಕಪ್ ಥ್ರೋಬಾಲ್ ಪಂದ್ಯಾವಳಿಯನ್ನು ಹಸೂಡಿ, ಯಲವಟ್ಟಿಯ ಶ್ರೀ ಜಗದ್ಗುರು ಸಚ್ಚಿದಾನಂದ ಗ್ರಾಮೀಣ ವಸತಿ ಪ್ರೌಢ ಶಾಲೆಯಲ್ಲಿ,ಶಿವಮೊಗ್ಗ ಜಿಲ್ಲೆಯ ಮಹಿಳೆಯರಿಗಾಗಿ ಆಯೋಜನೆ ಮಾಡಲಾಗಿದೆ.
ಪಂದ್ಯಾವಳಿಯು 26 ರಂದು ನಡೆಸಲಾಗುವುದು. ಈ ಪಂದ್ಯಾವಳಿಯು ಜಿಲ್ಲಾ ಮಟ್ಟದಲ್ಲಿ ನಡೆಸಲಾಗುತ್ತಿದ್ದು, ಪಂದ್ಯಾವಳಿಯಲ್ಲಿ 30 ವರ್ಷ ಮೇಲ್ಪಟ್ಟ ಮಹಿಳೆಯರು ಮಾತ್ರ ಭಾಗವಹಿಸಬಹುದಾಗಿದೆ.
ನಗದು ಬಹುಮಾನ:
ಪ್ರಥಮ ಬಹುಮಾನ – 8000 ರೂ ದ್ವಿತೀಯ ಬಹುಮಾನ – 6000 ರೂ ತೃತೀಯ ಬಹುಮಾನ – 3000 ರೂ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ತಂಡಕ್ಕೆ ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಹಾಗೂ ಆಕರ್ಷಕ ಟ್ರೋಫಿ ಹಾಗೂ ಪಾರಿತೋಷಕಗಳನ್ನು ನೀಡಲಾಗುವುದು. ಒಂದು ತಂಡಕ್ಕೆ ಪ್ರವೇಶ ಶುಲ್ಕ ೧ ಸಾವಿರ ನಿಗಧಿಮಾಡಲಾಗಿದೆ.
ಆಟಗಾರರ ಅನುಕೂಲಕ್ಕಾಗಿ ಉತ್ತಮ ಅಂಕಣಗಳನ್ನು ಸಿದ್ಧಪಡಿಸಲಾಗಿದೆ.ರಾಜ್ಯಮಟ್ಟದ ನುರಿತ ಥ್ರೋ ಬಾಲ್ ತೀರ್ಪುಗಾರರು ಆಗಮಿಸಲಿದ್ದಾರೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಬರುವ ಎಲ್ಲಾ ಕ್ರೀಡಾಪಟುಗಳಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಒಂದು ತಂಡದಲ್ಲಿ ಆಡುವ ಆಟಗಾರ ಇನ್ನೊಂದು ತಂಡದಲ್ಲಿ ಆಡುವಂತಿಲ್ಲ. ಆಧಾರ್ ಕಾರ್ಡ್ ಕಡ್ಡಾಯವಾಗಿ ತರುವುದು. ತೀರ್ಪುಗಾರರ ಹಾಗೂ ಆಯೋಜಕರ ತೀರ್ಮಾನವೇ ಅಂತಿಮ. ಎಂದು ಶ್ರೀ ಸೃಷ್ಟಿ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಉಮಾಶಂಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಂಡದ ಹೆಸರನ್ನು ನೊಂದಾಯಿಸಿಕೊಳ್ಳಲು ಕೊನೆಯ ದಿನಾಂಕ : 20- 1- 2025 ರ ಒಳಗಾಗಿ, ಹೆಚ್ಚಿನ ಮಾಹಿತಿಗಾಗಿ 7483324216, 7483371127 ಗೆ ಸಂಪರ್ಕಿಸಬಹುದು.