ಶಿವಮೊಗ್ಗ:ಜ.೦7 ಖ್ಯಾತ ಚಲನಚಿತ್ರ ನಟ ಡಾಲಿ ಧನಂಜಯ ಅವರು ಇಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ತಮ್ಮ ವಿವಾಹಕ್ಕೆ ಆಮಂತ್ರಣ ನೀಡಿದರು.
ಧನಂಜಯ ಅವರು ವೃತ್ತಿಯಿಂದ ವೈದ್ಯೆಯಾಗಿರುವ ಡಾ.ಧನ್ಯತಾ ಅವರೊಂದಿಗೆ ಫೆ.16ರಂದು ವಿವಾಹವಾಗಲಿದ್ದಾರೆ. ತಮ್ಮ ವಿವಾಹಕ್ಕೆ ರಾಜ್ಯ ಎಲ್ಲ ಸೆಲೆಬ್ರಟಿಗಳು, ರಾಜಕಾರಣಿಗಳು ಸೇರಿದಂತೆ ಗಣ್ಯಾತಿಗಣ್ಯರನ್ನು ಆಹ್ವಾನಿಸುತ್ತಿದ್ದಾರೆ.

ಅದೇ ರೀತಿಯಲ್ಲಿ ಇಂದು ಕೆ.ಎಸ್. ಈಶ್ವರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಧನಂಜಯ, ವಿವಾಹ ಕಾರ್ಯಕ್ರಮದಲ್ಲಿ ತಮ್ಮ ಕುಟುಂಬ ಸಹಿತ ಭಾಗವಹಿಸುವಂತೆ ಕೋರಿದರು.

2024ರ ನವೆಂಬರ್ ತಿಂಗಳಿನಲ್ಲಿ ಅರಸೀಕೆರೆಯ ಕಾಳಿಂಗನಹಳ್ಳಿಯಲ್ಲಿ ಧನಂಜಯ ಅವರು ತಮ್ಮ ನಿಶ್ಚಿತಾರ್ಥವನ್ನು ಸರಳವಾಗಿ ನಡೆಸಿಕೊಂಡಿದ್ದರು. ಇನ್ನು, ಫೆ. 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್’ನಲ್ಲಿ ಇಬ್ಬರ ಮದುವೆ ನಡೆಯಲಿದೆ.
ಡಾಲಿಯ ಕೈಹಿಡಿಯುತ್ತಿರುವ ಧನ್ಯತಾ ಅವರು ವೈದ್ಯೆಯಾಗಿz್ದÁರೆ. ನ.1ರಂದು ಭಾವಿ ಪತ್ನಿಯನ್ನು ವಿಶೇಷ ಕವನದೊಂದಿಗೆ ಪರಿಚಯಿಸಿದ್ದರು.
ಕೆಲವು ವರ್ಷಗಳ ಹಿಂದೆ ಧನಂಜಯ್ ಮತ್ತು ಧನ್ಯತಾ ಭೇಟಿಯಾಗಿದ್ದರು. ಪರಿಚಯ ಸ್ನೇಹ, ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಕೆಲವು ವರ್ಷಗಳಿಂದ ಪ್ರೇಮಪಾಶದಲ್ಲಿದ್ದ ಜೋಡಿ ಮದುವೆ ಬಂಧನಕ್ಕೊಳಗಾಗುತ್ತಿದ್ದಾರೆ.

ತುಮಕೂರು ಜಿ¯್ಲೆಯವರಾದ ಧನಂಜಯ್ ಶಿP್ಷÀಣವನ್ನು ಮೈಸೂರಿನಲ್ಲಿ ಪಡೆದುಕೊಂಡಿದ್ದಾರೆ. ಇನ್ನು ಚಿತ್ರದುರ್ಗ ಮೂಲದವರಾದ ಧನ್ಯತಾ ಸಹ ಮೈಸೂರಿನಲ್ಲಿ ವೈದ್ಯಕೀಯ ಶಿP್ಷÀಣ ಪಡೆದಿದ್ದು, ಮಧ್ಯಮ ವರ್ಗದ ಕುಟುಂಬದಿAದ ಬಂದಿದ್ದಾರೆ. ಕೆಲವು ವರ್ಷಗಳಿಂದ ಪ್ರೀತಿಯುಲ್ಲಿದ್ದರೂ ಈ ವಿಷಯವನ್ನು ಇಬ್ಬರು ಗುಟ್ಟಾಗಿ ಇರಿಸಿದ್ದರು.

2013ರಲ್ಲಿ ಡೈರೆಕ್ಟರ್ ಸ್ಪೆಷಲ್ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟ ಡಾಲಿ ಧನಂಜಯ್ ದೈತ್ಯ ಪ್ರತಿಭೆಯಾಗಿ ಬೆಳೆದಿದ್ದಾರೆ. ನಾಯಕ ನಟನಾಗಿ, ಚಿತ್ರ ನಿರ್ಮಾಪಕನಾಗಿಯೂ ಕನ್ನಡ ಚಿತ್ರರಂಗಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.
ಇದಕ್ಕೂ ಮುನ್ನ ಧನಂಜಯ ನಟಿಸಿದ್ದ ಜಯನಗರ 4 ಬ್ಲಾಕ್ ಎಂಬ ಶಾರ್ಟ್ ಮೂವಿ ಯೂಟ್ಯೂಬ್’ನಲ್ಲಿ ಅದ್ಬುತ ಯಶಸ್ಸು ಕಂಡಿತ್ತು.