ಶಿವಮೊಗ್ಗ, ಜ.6:
ಶಿವಮೊಗ್ಗ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುವ ವಿವಿಧ ಯೋಜನೆಗಳಡಿ ಹಲವಾರು ಕಾಮಗಾರಿಗಳ ಗುಣಮಟ್ಟ ಕಾಪಾಡಲು ಮೂರನೇ ವ್ಯಕ್ತಿ ಅಥವಾ ಸಂಸ್ಥೆ ತಪಾಸಣೆ ಕುರಿತ ಟೆಂಡರ್ ಪ್ರಕ್ರಿಯೆ ಅಕ್ರಮವಾಗಿದ್ದು ಸಾಕಷ್ಟು ದೂರುಗಳು ಹೋಗಿದ್ದರೂ ಅದರತ್ತ ಹಿರಿಯ ಅಧಿಕಾರಿಗಳು ಗಮನಿಸುತ್ತಿಲ್ಲ. ಕನಿಷ್ಟ ಪಕ್ಷ ಇದರ ಮುಖ್ಯಸ್ಥ ಜಿ.ಪಂ. ಸಿಇಓ ಹಾಗೂ ಇತರೆ ಅಧಿಕಾರಿಗಳು ದೂರನ್ನೇ ಸರಿಯಾಗಿ ಓದಿಲ್ಲ. ನೋಡಿಲ್ಲ ಎಂಬ ಅಭಾಸದ ಸಂಗತಿ ಬೆಳಕಿಗೆ ಬಂದಿದೆ. ಇದಕ್ಕೆ ದೂರುದಾರ ಮತ್ತೆ ತಿರುಗಿ ದೂರು ನೀಡಿದ್ದಾರೆಂಬ ಸಂಗತಿ ಬೆಳಕಿಗೆ ಬಂದಿದೆ.


ವಿಶ್ವಾಸ್ ಕನ್ಸಲ್ಟೆನ್ಸಿ ಹಿಂದಿನ ಮಾಲಿಕರ ನಿಧನ ನಂತರ ಪಡೆದಿದ್ದ ಮೂವರು ಅದರ ಹೆಸರನ್ನೇ ಬದಲಿಸಿ ಎಂ/ಎಸ್ ವಿಶ್ಬಾಸ್ ಕನ್ಸಲ್ಟನ್ಸಿ ಎಂದು ಮಾಡಿಕೊಂಡು ಕಳೆದ ಫೆಭ್ರವರಿಯಲ್ಲಿ ಸೂಕ್ತ ಸಾಮರ್ಥ್ಯ ಹಾಗೂ ಅರ್ಹತೆ ಇಲ್ಲದಿದ್ದರೂ ಟೆಂಡರ್ ಪಡೆದಿದ್ದರು. ಅದು ಅಕ್ರಮ ಎಂದು ನೂರಾರು ದೂರುಗಳು ಹೋಗಿದ್ದವು. ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ, ಎಲ್ಲಾ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆಯ ಅಕ್ರಮದ ವಿಚಾರಣೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿತ್ತು. ಇಲ್ಲಿಯವರೆಗೂ ಕ್ಕೈಗೊಳ್ಳದ ಹಿನ್ನೆಲೆಯಲ್ಲಿ ಮತ್ತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.ಅವರು ಜಿಪಂ ಸಿಇಓಗೆ ಇದನ್ನ ಗಮನಿಸಿ ಎಂದು ಬರೆದಿದ್ದರು. ಈಗ ಈ ಬಗ್ಗೆ ತಲೆಕೆಡಿಸಿಕೊಳ್ಳದಂತೆ ಕಂಡ ಸಿಇಓ  ದೂರನ್ನು ಸರಿಯಾಗಿ ಗಮನಿಸದೇ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಈಗ ಈ ಪತ್ರದ ವಿರುದ್ದ ಮತ್ತೆ ದೂರು ನೀಡಲು ದೂರುದಾರರು  ಮುಂದಾಗಿದ್ದಾರೆ ಎಂದು ನಿಖರ ಮಾಹಿತಿ ತಿಳಿಸಿವೆ.

೧೯-೦೨-೨೦೨೪ ರಂದು ಇಡೀ ವರ್ಷ ತಪಾಸಣೆ ನಡೆಸುವ ಉದ್ದೇಶದಿಂದ ಹಾಕಿದ್ದ ಟೆಂಡರ್ ಅರ್ಜಿಯಲ್ಲಿ ಮೂರು ಸಂಸ್ಥೆಗಳಾದ ಮಹೇಶ್ ಕುಮಾರ್- ಹರ್ಷ ಅಸೋಸಿ ಯೇಟ್ಸ್, ಶಂಕರಪ್ಪ- ಸಿವಿಲ್ ಅಸೋಸಿಯೇಟ್ಸ್ ಮೀನಾಕ್ಷಮ್ಮ ಬಿಎನ್- ವಿಶ್ವಾಸ್ ಕನ್ಸಲ್ಟೆಂಟ್ ಎಂಬುವರು ಟೆಂಡರ್ ನಲ್ಲಿ ಪಾಲ್ಗೊಂಡಿದ್ದರು.


ಸದರಿ ಬಿಡ್ ದಾರರ ತಾಂತ್ರಿಕ ಮೌಲ್ಯಮಾಪನ ವರದಿಯನ್ನು ಸಿದ್ಧಪಡಿಸಿ ಅದರ ಅನುಮೋದನೆಗಾಗಿ ಅಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಮುಖ್ಯ ಯೋಜನಾಧಿಕಾರಿ, ಮುಖ್ಯ ಲೆಕ್ಕಾಧಿಕಾರಿ ಕಾರ್ಯ ಪಾಲಕ ಅಭಿಯಂ ತರರು, ಪಂ.ರಾ.ಇಂ.ವಿಭಾಗ ಶಿವಮೊಗ್ಗ-ಸಾಗರ ಸದಸ್ಯರನ್ನು ಒಳಗೊಂಡಂತೆ ಸಭೆ ಕರೆದು ಮೀನಾಕ್ಷಮ್ಮ ಅವರ ವಿಶ್ವಾಸ್ ಕನ್ಸಲ್ಲ್ಡೆಂಟ್ಸ್ ಅವರ ಟೆಂಡರ್ ಅನುಮೋದಿಸಿ ನೀಡಲಾಗಿತ್ತು.
ಆದರೆ ವಿಶ್ವಾಸ್ ಕನ್ಸಲ್ಟೆಂಟ್ 100 ಕೋಟಿ ರೂಪಾಯಿ ಕಾಮಗಾರಿಗಳ ತಪಾಸಣೆ ನಡೆಸಬೇಕಿತ್ತು ಅದನ್ನು ಮಾಡಿರುವ ಯಾವುದೇ ದಾಖಲೆಗಳು ಇಲ್ಲ. ಹಾಗೆಯೇ ಈ ಸಂಸ್ಥೆಯ ಅರ್ಹತೆ ಹಾಗೂ ಮಾನದಂಡವನ್ನು ಪರಿಶೀಲಿಸಬೇಕಾದ ಎನ್ ಎ ಬಿ ಎಲ್ 10 ಗುಣಮಟ್ಟ ಪರೀಕ್ಷೆಯ ಮಾದರಿಗಳು ಸಮರ್ಪಕವಾಗಿವೆ ಎಂಬ ಸ್ಪಷ್ಟನೆಯನ್ನು ನೀಡಬೇಕಿತ್ತು. ಆದರೆ ಎಂಬಿಎಲ್ ಎನ್ಎಬಿಎಲ್ ಕೇವಲ ಎರಡು ವಿಷಯಗಳ ಅರ್ಹತೆಯನ್ನು ನೀಡಿದೆ ಇದು ಹೇಗೆ ತಾನೇ ಸಮರ್ಪಕವಾದ ಸಂಸ್ಥೆಯಾಗಲು ಸಾಧ್ಯ ಎಂಬುದು ದೂರದಾರರ ಪ್ರಶ್ನೆ.
ಪ್ರಸ್ತುತ ಶಿವಮೊಗ್ಗ ಜಿಪಂ ಸಿಇಒ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಈ ವಿಷಯವನ್ನು ಪರಿಗಣಿಸಿಯೇ ಇಲ್ಲ. ಒಟ್ಟಾರೆ ನೆಪ ಮಾತ್ರದ ಉತ್ತರ ಇದು ಎನ್ನಲಾಗುತ್ತಿದ್ದು ಬರುವ ಫೆಬ್ರವರಿಗೆ ಅಂತ್ಯವಾಗುವ ಈ ಟೆಂಡರ್ ಕಾಮಗಾರಿಯ ವಿಷಯವನ್ನು ಸದ್ದಿಲ್ಲದೆ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ ಎಂಬುದು ದೂರುದಾರರ ಆರೋಪ.
ಹಿನ್ನೆಲೆ: ಹಿಂದೆ ಟೆಂಡರ್ ಪ್ರಕ್ರಿಯೆಯಲ್ಲಿ ಅರ್ಹತೆ ಇಲ್ಲದಿದ್ದರೂ ಸಹ ವಿಶ್ವಾಸ್  ಕನ್ಸಲ್ಟೆಂಟ್ಸ್ ಪರಿಗಣ ನೆಗೆ ತೆಗೆದುಕೊಂಡಿದ್ದು ಅದನ್ನು ಅನುಮೋದಿಸಿರುವ ವಿರುದ್ಧ ಅಂದಿನಿಂದಲೂ ನಾಯಕ್ ಅವರು  ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಗ್ರಾಮೀಣಾಭಿವೃದ್ಧಿ ಸಚಿವರು, ಆರ್ ಡಿ ಪಿ ಐ ಗೆ ಸುಮಾರು ೨೦ ಕ್ಕೂ ಹೆಚ್ಚು ಸಲ ದೂರುಗಳನ್ನು ಸಲ್ಲಿಸಿದ್ದರೂ ಸಹ ಅದನ್ನು ಪರಿಗಣಿಸದೆ ವಿಚಾರಣೆಯನ್ನು ನಡೆಸದೇ ಇರುವುದರಿಂದ ಪ್ರಸ್ತುತ ಇದೊಂದು ಅಕ್ರಮ ಟೆಂಡರ್ ಪ್ರಕ್ರಿಯೆ ಹಾಗೂ ಇದೊಂದು ಭಾರಿ ವ್ಯವಹಾರದ ಅನ್ಯಾಯ ನಡೆದಿದೆ ಎಂದು ಲೋಕಾಯುಕ್ತಕ್ಕೆ ಸಹ ದೂರು ಸಲ್ಲಿಸಲಾಗಿದೆ.
ವಿಶ್ವಾಸ್  ಕನ್ಸಲ್ಟೆಂಟ್ಸ್ ನ ಟೆಂಡರ್ ನಲ್ಲಿ ಇರಬೇಕಾದ ೧೪ನೇ ಷರತ್ತಿನ ಮೂರನೇ ವ್ಯಕ್ತಿ ತಪಾಸಣಾ ಮೊತ್ತ  ೧೦೦ ಕೋಟಿಯಷ್ಟಿರಬೇಕು. ಆದರೆ ಇವರ ಮೊತ್ತ ೨೦.೭೫ ಕೋಟಿ ಮಾತ್ರ ಹಣವನ್ನು ಲೆಕ್ಕಕ್ಕೆ ತೆಗೆದುಕೊಂಡದ್ದು ತಪ್ಪಾಗಿರುತ್ತದೆ ಅಲ್ಲವೇ? ಇವರು ಹೇಗೆ ಇದರಲ್ಲಿ ಅರ್ಹತೆ ಹೊಂದಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
೨೧ನೇ ಷರತ್ತಿನಲ್ಲಿ ಆರ್ಥಿಕ ವರ್ಷ ೨೦೧೯ ಹಾಗೂ ೨೦ ಮತ್ತು ೨೦-೨೧ರಲ್ಲಿ ೧೦೦ ಲಕ್ಷಕ್ಕಿಂತ ಹೆಚ್ಚು ಇದೆ ಎಂದು ವಿಶ್ವಾಸ ಕನ್ಸಲ್ಟೆಂಟ್ ಮಾಲೀಕರು ತಿಳಿಸಿದ್ದಾರೆ ಆದರೆ ಅಂದು ಎಂಎಂ ಶೇಖರಪ್ಪ ಅವರು ಮಾಲೀಕರಾಗಿದ್ದು ಅವರು ಮಾಡಿದ ಕೆಲಸವನ್ನು ಈಗ ಮೂವರು ಅನ್ಯ ಪಾಲುದಾರರು ತೋರಿಸಿ ಟೆಂಡರ್ ಪ್ರಕ್ರಿಯೆಯನ್ನು ನಡೆಸಲು ಕೋರಿ ಆಯ್ಕೆಯಾಗುವಂತೆ ನೋಡಿ ಕೊಂಡಿದ್ದಾರೆ. ಉದ್ದೇಶ ಪೂರಕವಾಗಿಯೇ ವಿಶ್ವಾಸ್ ಸಂಸ್ಥೆಗೆ ಟೆಂಡರ್ ನೀಡಿರುವುದು ನಿಯಮಾವಳಿಗಳಿಗೆ ವಿರುದ್ಧವಾಗಿದೆ ಆದ್ದರಿಂದ ಇದನ್ನು ರದ್ದು ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!