ಶಿವಮೊಗ್ಗ, ಜ.08:
ಜ.10 ರಂದು ಶಿವಮೊಗ್ಗ ತಾಲ್ಲೂಕಿನ ಪ್ರಖ್ಯಾತ ಹಾಡೋನಹಳ್ಳಿಯ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವೈಭವದ ಹಾಗೂ ಭಕ್ತಿ ಪ್ರಧಾನವಾದ ವೈಕುಂಟ ಏಕಾದಶಿ ಹಾಗೂ ಲಕ್ಷ್ಮೀ ವಿಗ್ರಹ ಆರಾಧನೆ ಕಾರ್ಯಕ್ರಮ ನಡೆಯಲಿದೆ.
ಅಂದು ಬೆಳಿಗ್ಗೆ 4 ರಿಂದ ಇಡೀದಿನ ಅಭಿಷೇಕಾ, ಪೂಜಾ ವಿಧಾನಗಳು ನಡೆಯಲಿದ್ದು, ನಂತರ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಇರುತ್ತದೆ.
ಸಂಜೆ ಆರು ಗಂಟೆಗೆ ದೇವಾಲಯದ ವಿಶೇಷ ಎಂಬಂತೆ ಸಪ್ತದ್ವಾರಗಳ ವೈಕುಂಟ ದರ್ಶನ ಇರುತ್ತದೆ. ಇದು ಅಂದಿನಿಂದ ಮೂರು ದಿನಗಳ ಕಾಲ ಇರಲಿದ್ದು, ಜ. 11 ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಸ್ವಾಮಿಗಳ ಕೃಪೆಗೆ ಪಾತ್ರರಾಗಲು ದೇವಾಲಯ ಸೇವಾ ಸಮಿತಿ ಪರವಾಗಿ ಹಾಡೋನಹಳ್ಳಿ ಗ್ರಾಮಸ್ಥರು ಕೋರಿದ್ದಾರೆ.