ಶಿವಮೊಗ್ಗ ಜ.06 ): ಸುಮಾರು 35 ವರ್ಷ
ಜ.04 ರಂದು ಬೆಳಗಿನ ಜಾವ ಸುಮಾರು 3 ರಿಂದ 6 ಗಂಟೆಯ ಅವಧಿಯಲ್ಲಿ ಪೆಸಿಟ್ ಕಾಲೇಜು ಸಾನ್ವಿ ಹೋಟೆಲ್ ಸಮೀಪ ಸುಮಾರು 35
ವರ್ಷದ ಅಪರಿಚಿತ ವ್ಯಕ್ತಿಗೆ ಸಾಗರದಿಂದ ಶಿವಮೊಗ್ಗ ಕಡೆ ಯಾವುದೋ ವಾಹನ ಚಾಲಕ ಅತಿ ವೇಗದಿಂದ ವಾಹನ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು, ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.
ಮೃತ ವ್ಯಕ್ತಿಯು ಅಂದಾಜು 5.3 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ, ಕೋಲು ಮುಖ ಹೊಂದಿದ್ದು, ಕಂದು ಬಣ್ಣದ ತುಂಬು
ತೋಳಿನ ಜರ್ಕಿನ್, ನೀಲಿ ಬಣ್ಣದ ಟೀ ಶರ್ಟ್, ಬಿಳಿ ಬಣ್ಣದ ಬನಿಯನ್, ನಶೆ ಕಲರ್ ಪ್ಯಾಂಟ್ ಧರಿಸಿರುತ್ತಾನೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ತುಂಗಾನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆAದು ಪ್ರಕಟಣೆ ತಿಳಿಸಿದೆ.
==