ಶಿವಮೊಗ್ಗ ಜನವರಿ 01 :
ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಬಳಿ ಡಿ. 12 ರಂದು ಅಪರಿಚಿತ ಬೈಕ್ ಚಾಲಕ ಅತೀ ವೇಗದಿಂದ ಬಂದು ಕೆಎ-14 ಇಎ 2425 ಹೀರೋ ಹೊಂಡ ಕಂಪೆನಿಯ
ಪ್ಯಾಷನ್ ಪ್ರೋ ಸವಾರರಾದ ಎನ್ ಮಂಜುನಾಥ್ ಅವರಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಪರಾರಿಯಾಗಿರುತ್ತಾನೆ.
ಅಪಘಾತ ಮಾಡಿದ ಮೋಟಾರ್ ಬೈಕಿನ ನಂಬರ್ ಕಾಣಿಸಿರುವುದಿಲ್ಲ, ಬೈಕಿನ ಭಾವಚಿತ್ರ ದೊರಕಿರುತ್ತದೆ.
ಈ ಭಾವಚಿತ್ರದಲ್ಲಿರುವ ವ್ಯಕ್ತಿಯ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ
ಪಶ್ಚಿಮ ಸಂಚಾರ ಪೊಲೀಸ್ ಠಾಣೆ ದೂ. ಸಂ. 08182 261417 ಅಥವಾ ಮೊ.ನಂ 9480803346 ಗೆ ಮಾಹಿತಿ ನೀಡುವಂತೆ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.