ಶಿವಮೊಗ್ಗ : ನ್ಯೂ ಇಯರ್ ವೆಲ್ ಕಂ ಗೆ ಕೌಂಟ್ ಡೌನ್ ಶುರುವಾಗಿದೆ. ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಜನ ಕಾತುರರಾಗಿದ್ದಾರೆ.
ಶಿವಮೊಗ್ಗದ ಹಲವು ಕ್ಲಬ್, ಪಬ್, ಬಾರ್ ಗಳು ಲೈಟಿಂಗ್ಸ್ ಗಳಿಂದ ಜಗಮಗಿಸುತ್ತಿದ್ದು, ಜನರು ಫುಲ್ ಪಾರ್ಟಿ ಮೂಡ್ ಗೆ ಜಾರಿದ್ದು, ಎಲ್ಲ ಕಡೆ ಜಾಲಿ ಜಾಲಿ ಮಾಡಲು ಸಿದ್ದರಾಗಿದ್ದಾರೆ.
ಶಿವಮೊಗ್ಗ ಜಿಲ್ಲಾದ್ಯಂತ ಸಂಭ್ರಮ, ಸಡಗರ, ಗುಂಡು, ತುಂಡಿನ ಪಾರ್ಟಿಗಳಿಗೆ ಬೆಳಗ್ಗೆಯಿಂದಲೇ ಸಿದ್ಧತೆ ನಡೆದಿತ್ತು. ಕೇಕ್, ಪೇಸ್ಟ್ರಿ ಮತ್ತು ಮಾಂಸ ಮಾರಾಟ ಭರ್ಜರಿಯಾಗಿಯೇ ನಡೆಯುತ್ತಿದೆ.
ವಿಶೇಷ ಕೇಕ್‌ಗಳು, ಪೇಸ್ಟ್ರಿಗಳನ್ನು ತಯಾರಿಸಿ ಪ್ರದರ್ಶಿಸಿ ಮಾರಾಟ ಮಾಡುತ್ತಿದ್ದ ಬೇಕರಿಗಳಲ್ಲಿ ಜನರು ಬೆಳಗ್ಗೆಯಿಂದಲೇ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿ ದ್ದರು. ಸಂಜೆಯಾಗು ತ್ತಿದ್ದಂತೆ ಇದು ಜೋರಾ ಗಿತ್ತು. ಹೊಸ ವರ್ಷದ ಕ್ಷಣ ಹತ್ತಿರವಾಗುತ್ತಿದ್ದಂತೆ ಪಾರ್ಟಿ ಗಳ ಆಯೋಜನೆಯೂ ಭರದಿಂದ ಸಾಗಿತ್ತು.