ಶಿವಮೊಗ್ಗ : ಬೇಡರ ಹೊಸಹಳ್ಳಿ ಸಮೀಪ ಮೂರು ಕಾರುಗಳ ಮಧ್ಯೆ ಅಪಘಾತ ಸಂಭವಿಸಿ ಓರ್ವ ಮಹಿಳೆ ಸಾವು ಕಂಡಿದ್ದು, ಮೂರು ಕಾರುಗಳಲ್ಲಿದ್ದ ಒಟ್ಟು ಏಳು ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಕೊಪ್ಪಳಕ್ಕೆ ತೆರಳುತ್ತಿದ್ದ ಕಿಯಾ ಸೆಲ್ಟೋಸ್ ಕಾರಿಗೆ ಎದುರಿನಿಂದ ಬಂದ ಇನ್ನೋವಾ ಕಾರು ಡಿಕ್ಕಿ ಹೊಡೆದಿದೆ. ಸ್ವಿಫ್ಟ್ ಕಾರು ಕಿಯಾ ಸೆಲ್ಟೋಸ್ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಕಿಯಾ ಕಾರಿನಲ್ಲಿದ್ದ ಮಹಿಳೆ ಸುಲೋಚನಾ (60) ಗಂಭೀರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ | ಬೈಕುಗಳ ಮುಖಾಮುಖಿ ಡಿಕ್ಕಿ | ಯುವಕನ ಕಾಲಿನ ಮೂಳೆ ಕಟ್
ಶಿವಮೊಗ್ಗ : ತಾಲೂಕಿನ ಅಬ್ಬಲಗೆರೆ ಮತ್ತು ಬೆಳಲಕಟ್ಟೆ ನಡುವೆ ಬೈಕುಗಳು ಮುಖಾಮುಖಿ ಡಿಕ್ಕಿಯಾಗಿ ಓರ್ವ ಯುವಕನ ಕಾಲಿನ ಮೂಳೆ ಮುರಿದಿದೆ.
ಸಂದೀಪ್ (೨೭) ಎಂಬಾತನ ಕಾಲಿನ ಮೂಳೆ ಮುರಿದಿದ್ದು. ಸಂಜಯ್ ಎಂಬುವವರ ಬೈಕಿನಲ್ಲಿ ಸಂದೀಪ್ ತೆರಳುತ್ತಿದ್ದಾಗ ಜೀವನ್ ಎಂಬುವವರ ಬೈಕ್ ಎದುರಿನಿಂದ ಬಂದು ಡಿಕ್ಕಿ ಹೊಡೆದಿದೆ.
ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.