ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನ 2025-26 ರ ಅಂತಾರಾಷ್ಟ್ರೀಯ ಸಮ್ಮೇಳನವು ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆಯಿತು. ಆ ಸಂಧರ್ಭದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷೆಯಾಗಿ ಸರ್ವ ಕ್ಷೇತ್ರಗಳಲ್ಲಿಯೂ ಅತ್ಯುತ್ತಮ ಸೇವೆ ಮಾಡಿದ ಸೀನಿಯರ್ ಸುರೇಖ ಮುರಳೀಧರ್ ರವರಿಗೆ “ಅತ್ಯುತ್ತಮ ರಾಷ್ಟ್ರೀಯ ಉಪಾಧ್ಯಕ್ಷರು” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಸೀನಿಯರ್ M. R. ಜಯೇಶ, ಶಾಸಕರಾದ ಶ್ರೀ ಕೃಷ್ಣಪ್ಪ, ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಜೆಸಿಐ ಪೂರ್ವ ರಾಷ್ಟ್ರೀಯ ಅಧ್ಯಕ್ಷರಾದ ಜೆಸಿ. TVN ಮೂರ್ತಿ, ಅವಧೂತ ಶ್ರೀ ವಿನಯ್ ಗುರುಜೀ ರವರು ಹಾಗೂ ವಿಶ್ವಾದ್ಯಂತ ಆಗಮಿಸಿದ ಸಾವಿರಾರು ಸದಸ್ಯರು ಭಾಗವಹಿಸಿದ್ದರು.
ಈ ಪ್ರಶಸ್ತಿಯು ಲಭಿಸಿರುವುದು ಸಂತಸ ಹಾಗೂ ಜವಾಬ್ದಾರಿಯನ್ನು ಹೆಚ್ಚಿಸಿದೆ. ಸಮಾಜಮುಖಿಯಾಗಿ ನಿಲ್ಲಲು ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ. ಸಂಸ್ಥೆಯ ಆದರ್ಶ ಹಾಗೂ ತತ್ವ ಸದಾ ಮಾದರಿಯಾಗಿವೆ. ಅತ್ಯುತ್ತಮ ಸೇವೆ ಸಲ್ಲಿಸಿ, ಪ್ರಶಸ್ತಿಗೆ ಭಾಜನರಾಗಲು ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳು ಎಂದು ಸುರೇಖ ಮುರಳೀಧರ ಅಭಿಪ್ರಾಯ ವ್ಯಕ್ತಪಡಿಸಿದರು.