ಶಿವಮೊಗ್ಗ, ಡಿ.18 :
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಡಿ.೨೩ಕ್ಕೆ ಕಾಲಭೈರವಾಷ್ಟಮಿ ಪ್ರಯುಕ್ತ ಬೈರವಮಾಲೆ, ಜೋಗಿ ದೀಕ್ಷೆ, ರಾಜ್ಯಮಟ್ಟದ ಭಜನಾ ಮೇಳ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ. ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ವಹಿಸಲಿದ್ದು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಉಪಸ್ಥಿತಿವಹಿಸುವರು. ಅಂದು ನಾಡಿನ ಗಣ್ಯರು, ಜನಪ್ರತಿನಿಧಿಗಳು, ವಿವಿಧ ಶಾಖಾ ಮಠದ ಶ್ರೀಗಳು ಭಾಗವಹಿಸುವರು.
ಅಂದು ಬೆಳಗ್ಗೆ ೬ ಗಂಟೆಗೆ ಕ್ಷೇತ್ರಾಧಿ ದೇವತೆಗಳ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಮಹೋತ್ಸವಗಳು ಜರುಗಲಿದ್ದು, ಪೂಜ್ಯ ಮಹಾಸ್ವಾಮಿ ಅವರ ಅಮೃತಹಸ್ತದಿಂದ ಜೋಗಿ ದೀಕ್ಷೆಯನ್ನು ನೀಡಲಾಗುವುದು. ೧೦ ಗಂಟೆಗೆ ಬಿಜಿಎಸ್ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ
ನಡೆಸಲಾಗುವುದು. ಈ ಪವಿತ್ರ ದಿನದಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಗಿದೆ.
ರಾಜ್ಯಮಟ್ಟದ ಭಜನಾ ಮೇಳ
ಶ್ರೀಕ್ಷೇತ್ರ ಆದಿಚುಂಚನಗಿರಯಲ್ಲಿ ಭಜನಾ ಮೇಳವನ್ನು ಆಯೋಜನೆ ಮಾಡಲಾಗಿದ್ದು, ಭಾಗವಹಿಸಲು ಆಸಕ್ತಿ ಹೊಂದಿರುವವರು ಡಿ.೨೩ರ ಸೋಮವಾರ ಬೆಳಗ್ಗೆ ೭.೩೦ಕ್ಕೆ ಹೆಸರು ನೋಂದಾಯಿಸಿಕೊಳ್ಳಬೇಕು. ಒಂದು ತಂಡದಲ್ಲಿ ಕನಿಷ್ಠ ೮ರಿಂದ ೧೨ ಜನ ಭಾಗವಹಿಸಲು ಅವಕಾಶವಿರಲಿದ್ದು, ಭಾಗವಹಿಸುವವರು ಭಜನಾ ಪರಿಕರಗಳೊಂದಿಗೆ ಹಾಜರಿರಬೇಕು. ಭಜನೆ ಹಾಡಲು ೮ ನಿಮಿಷ ಅವಕಾಶವಿದ್ದು, ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಪ್ರಥಮ ಬಹುಮಾನವಾಗಿ ೧೦ ಸಾವಿರ, ದ್ವೀತಿಯ ೭,೦೦೦, ತೃತೀಯ ೫,೦೦೦ ಹಾಗೂ ಸಮಧಾನಕರ ಬಹುಮಾನಗಳು ಇರುತ್ತವೆ. ಹೆಚ್ಚಿನ ಮಾಹಿತಿಗಾಗಿ ೯೯೪೫೯೧೦೯೮೫, ೯೪೪೮೧೨೪೧೪೧, ೭೭೬೦೨೪೬೬೦೭ಗೆ ಸಂಪರ್ಕಿಸಿ ಎಂದು ಶ್ರೀ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.