ಅಕ್ಕ ಕೆಫೆ ಮತ್ತು ಅಕ್ಕ ಬೇಕ್ ಪ್ರಾರಂಭಿಸಲು ಅರ್ಜಿ ಆಹ್ವಾನ
ಶಿವಮೊಗ್ಗ, ಡಿಸೆಂಬರ್ 05; ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ “ಅಕ್ಕ ಕೆಫೆ” ಎಂಬ ಮಹಿಳೆಯರೆ ನಡೆಸುವ ಕ್ಯಾಂಟೀನ್ಗಳನ್ನು ಸ್ಥಾಪಿಸುವ ಮೂಲಕ ಆರ್ಥಿಕವಾಗಿ ಸ್ವಾವಲಂಭಿಯಾಗಲು ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುತ್ತಿದ್ದು, ಡೇ-ನಲ್ಮ್ ಯೋಜನೆಯಡಿ ರಚನೆಯಾದಂತಹ ಗುಂಪುಗಳು “ಅಕ್ಕ ಕೆಫೆ” ಹಾಗೂ “ಅಕ್ಕ ಬೇಕ್” ಪ್ರಾರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಡಿ. 11 ರೊಳಗಾಗಿ ಸಲ್ಲಿಸುವಂತೆ ಪಾಲಿಕೆ ಉಪ ಆಯುಕ್ತರು (ಆಡಳಿತ) ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
——————
ಡಿ.06 ರಂದು ರಂಗಾಯಣದಲ್ಲಿ ‘ಇರುವೆ ಪುರಾಣ’ ಮಕ್ಕಳ ನಾಟಕ ಪ್ರದರ್ಶನ
ಶಿವಮೊಗ್ಗ ಡಿಸೆಂಬರ್ 05; : ಶಿವಮೊಗ್ಗ ರಂಗಾಯಣವು ಡಿ.06 ರಂದು ಸಂಜೆ 6.30 ಕ್ಕೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ “ಇರುವೆ ಪುರಾಣ” ಮಕ್ಕಳ ನಾಟಕ ಪ್ರದರ್ಶನವಾಗಲಿದೆ.
ಇದು ‘ದಿ ಸ್ಟೋರಿ ಆಫ್ ಎ ಸ್ನೇಯ್ಲ್ ಹು ಡಿಸ್ಕರ್ಡ್ ದಿ ಇಂಪರ್ಟೆನ್ಸ್ ಆಫ್ ಬೀಯಿಂಗ್ ಸ್ಲೋ’ ಎಂಬ ಕಥೆಯಿಂದ ಸ್ಫೂರ್ತಿ ಪಡೆದು ಕಟ್ಟಿದ ನಾಟಕವಾಗಿದ್ದು, ಪರಿಕಲ್ಪನೆ ಮತ್ತು ನಿರ್ದೇಶನ ನಿಧಿ ಎಸ್. ಶಾಸ್ತಿçಯವರದ್ದು. ಒಂದು ಗಂಟೆ ಅವಧಿಯ ಈ ನಾಟಕ ಡಿ.06 ರ ಸಂಜೆ 6.30 ಕ್ಕೆ ಪ್ರದರ್ಶನಗೊಳ್ಳಲಿದೆ. ಟಿಕೆಟ್ ದರ ಒಬ್ಬರಿಗೆ ರೂ. 30/- ನಿಗದಿಪಡಿಸಲಾಗಿದ್ದು, 06 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಉಚಿತವಾಗಿದೆ ಎಂದು ರಂಗಾಯಣ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
————-