ಶಿವಮೊಗ್ಗ,ನ.೮: ರಾಷ್ಟ್ರೀಯ ಬಸವದಳ ಟ್ರಸ್ಟ್ ಶಿವಮೊಗ್ಗ ವತಿಯಿಂದ ಜಗತ್ತಿನ ಶ್ರೇಷ್ಟ ದಾರ್ಶನಿಕ ಮಹಾಸಂತರಾದ ಗುರುಬಸವಣ್ಣನವರ ಐಕ್ಯ ಕ್ಷೇತ್ರ ಕೂಡಲ ಸಂಗಮ ಸುಕ್ಷೇತ್ರದಲ್ಲಿ ನಡೆಯುವ ೩೮ನೇ ಶರಣ ಮೇಳದ ಅಂಗವಾಗಿ ನ.೧೦ ಮತ್ತು ೧೧ರಂದು ವಿನೋಬನಗರದ ಕಲ್ಲಹಳ್ಳಿ ೨ನೇ ಹಂತದಲ್ಲಿರುವ ಬಸವಮಂಟಪದಲ್ಲಿ ವಿಶ್ವಧರ್ಮ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.


ನ.೧೦ರ ಬೆಳಿಗ್ಗೆ ೧೧ಕ್ಕೆ ಕೂಡಲ ಸಂಗಮದ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಶ್ರೀ ಮಹಾಜಗದ್ಗುರು ಡಾ. ಮಾತೆ ಗಂಗಾದೇವಿ, ಶ್ರೀಬಸವರತ್ನ ಮಾತೆ, ಹೈದ್ರಾಬಾದ್‌ನ ಬಸವ ಮಂಟಪದ ಶ್ರೀ ಅನಿಮಿಷಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹೆಚ್.ಸಿ.ಯೋಗೀಶ್ ಧ್ವಜಾರೋಹಣ ನೆರವೇರಿಸಲಿದ್ದು, ಶಾಸಕ ಎಸ್.ಎನ್. ಚನ್ನಬಸಪ್ಪ ಬಸವಜ್ಯೋತಿ ಬೆಳಗಿಸುವರು. ಪಾಲಿಕೆ ಮಾಜಿ ಸದಸ್ಯೆ ಅನಿತಾ ರವಿಶಂಕರ್ ರಾಷ್ಟ್ರೀಯ ಬಸವದಳ ಟ್ರಸ್ಟ್‌ನ ಗೌರವಾಧ್ಯಕ್ಷ ಹಾಲಪ್ಪ, ಅಧ್ಯಕ್ಷ ರಾಮಪ್ಪ ಉಪಸ್ಥಿತರಿರುವರು. ಮಾಧವ ನೆಲೆ ಮಕ್ಕಳಿಂದ ಪ್ರವಚನ ನುಡಿನಮನ ನಡೆಯಲಿದೆ.


ನ.೧೬ರ ಸಂಜೆ ೬ಕ್ಕೆ ಕೂಡಲ ಸಂಗಮದ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಶ್ರೀ ಮಹಾಜಗದ್ಗುರು ಡಾ. ಮಾತೆ ಗಂಗಾದೇವಿ, ಶ್ರೀಬಸವರತ್ನ ಮಾತೆ, ಹೈದ್ರಾಬಾದ್‌ನ ಬಸವ ಮಂಟಪದ ಶ್ರೀ ಅನಿಮಿಷಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ರಾಷ್ಟ್ರೀಯ ಬಸವದಳ ಟ್ರಸ್ಟ್‌ನ ಗೌರವಾಧ್ಯಕ್ಷ ಹಾಲಪ್ಪ, ಅಧ್ಯಕ್ಷ ರಾಮಪ್ಪ, ಉಪಾಧ್ಯಕ್ಷೆ ಮೂಲಿಮನಿ, ಆಶೀರ್ವಾದ ಸ್ಟೀಲ್ ಸೆಂಟರ್‌ನ ಮಾಲೀಕ ಭವಾನಿ ಸಿಂಗ್ ರಾಥೋರ್ ಉಪಸ್ಥಿತರಿರುವರು.

By admin

ನಿಮ್ಮದೊಂದು ಉತ್ತರ

You missed

error: Content is protected !!