ಶಿವಮೊಗ್ಗ,ನ.೮: ಸೀನೀಯರ್ ಛೇಂಬರ್ ಇಂಟರ್‌ನ್ಯಾಷನಲ್ ಹಾಗೂ ಸಹ್ಯಾದ್ರಿ ಕಲಾ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಇಂದು ಸಹ್ಯಾದ್ರಿ ಕಾಲೇಜಿನ ಸಭಾಂಗಣದಲ್ಲಿ ಹಲವು ಕೊಡುಗೆಗಳನ್ನು ನೀಡಲಾಯಿತು.
ಸಹ್ಯಾದ್ರಿ ಕಾಲೇಜಿಗೆ ಪ್ಯಾಡ್ ಬರ್ನಿಂಗ್ ಮಿಷನ್, ಮಹಾನಗರಪಾಲಿಕೆಯ ಆಯ್ದ ಮಹಿಳಾ ಕಾರ್ಮಿಕರಿಗೆ ಸೀರೆ, ಹೊಲಿಗೆ ಯಂತ್ರ, ದಿನಸಿ ಕಿಟ್, ಆಶ್ರಮಗಳಿಗೆ ಆರ್ಯುವೇದಿಕ್ ಮೆಡಿಷನ್, ತ್ರಿಚಕ್ರವಾಹನ ಸೇರಿದಂತೆ ಸಮಾಜದ ವಿವಿಧ ಬಡ ಸಮುದಾಯಗಳಿಗೆ ಎಸ್‌ಸಿಐ ವತಿಯಿಂದ ಕೊಡುಗೆ ನೀಡಲಾಯಿತು.
ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್‌ನ ರಾಷ್ಟ್ರೀಯ ಅಧ್ಯಕ್ಷ, ಚೈತ್ರಕುಮಾರ್ ಸನ್ಮಾನಿತರಾಗಿ ಮಾತನಾಡಿ, ನಮ್ಮ ಸಂಸ್ಥೆಯು ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದೆ. ಇದೊಂದು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದು, ಶಿಕ್ಷಣ, ಆರೋಗ್ಯ, ಕ್ರೀಡೆ ಹೀಗೆ ಎಲ್ಲಾ ಕ್ಷೇತ್ರಗಳಿಗೆ ನೆರವು ನೀಡುತ್ತ ಬಂದಿದೆ. ಶಿವಮೊಗ್ಗದಲ್ಲಿಯೂ ಸಹ ನಮ್ಮ ಸಂಸ್ಥೆಯು ಸಮಾಜಮುಖಿಯತ್ತ ಕೆಲಸ ಮಾಡುತ್ತಿದೆ ಎಂದರು.
ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲ ಸೈಯ್ಯದ್ ಸನಾವುಲ್ಲಾ ಮಾತನಾಡಿ, ಈ ಸಂಸ್ಥೆಯು ನಮ್ಮ ಕಾಲೇಜಿಗೆ ಪ್ಯಾಡ್ ಬರ್ನಿಂಗ್ ಮಿಷನ್ ನೀಡಿರುವುದು ತುಂಬ ಅನುಕೂಲಕವಾಗಿದೆ. ನಮ್ಮ ಕಾಲೇಜಿಗೆ ಹಳ್ಳಿಗಳಿಂದ ವಿದ್ಯಾರ್ಥಿನಿಯರು ಸಾಕಷ್ಟು ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದರಿಂದ ಸ್ವಚ್ಚತೆಗೆ ಆಧ್ಯತೆ ನೀಡಿದಂತಾಗುತ್ತದೆ. ಆ ಸಂಸ್ಥೆಗೆ ನಮ್ಮ ಕೃತಜ್ಞತೆ ಎಂದರು.
ವಿದ್ಯಾರ್ಥಿ ಕ್ಷೇಮಾಧಿಕಾರಿ ಕೆ.ಮಂಜುನಾಥ್ ಮಾತನಾಡಿ, ಸೀನೀಯರ್ ಛೇಂಬರ್ ಇಂಟರ್‌ನ್ಯಾಷನಲ್ ಸಂಸ್ಥೆಯು ಸಮಾಜಮುಖಿಯತ್ತ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಇದರ ಮಹಿಳಾ ಘಟಕವು, ಮಹಿಳೆಯರ ಸಮಸ್ಯೆಗಳನ್ನು ಅದರಲ್ಲೂ ವಿದ್ಯಾರ್ಥಿನಿಯರ ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಿರುವುದು ಸ್ವಾಗತರ್ಹವಾಗಿದೆ ಎಂದರು.
ಎಸ್‌ಸಿಐನ ಅಧ್ಯಕ್ಷೆ ಶೋಭಾ ದೇವರಾಜ್, ಕಾರ್ಯದರ್ಶಿ ಗೀತಾ ಗೌಡರು, ಪದಾಧಿಕಾರಿಗಳಾದ ಮಮತಾ ಕೆ.ಆರ್. ಪ್ರಕಾಶ್ ಗುಬ್ಬಿ, ಡಾ. ಸತೀಶ್, ಎಂ.ಎನ್.ಮಮತಾ,ಸುರೇಖಾ ಮುರಳೀಧರ್, ಪುಷ್ಪ ಎನ್.ಶೆಟ್ಟಿ, ಕೆ.ವಿ.ವಸಂತಕುಮಾರ್, ಎನ್.ಡಿ.ಶಿವಕುಮಾರ್, ನವೀನ್, ಶಿವು ಸೇರಿದಂತೆ ಹಲವರು ಉಪಸ್ಥಿತರಿದ್ದರು.