ಶಿವಮೊಗ್ಗ,ನ.೮: ಜಿಲ್ಲೆಯಲ್ಲಿ ನೂತನವಾಗಿ ಆರಂಭವಾಗುತ್ತಿರುವ ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಸಿಡ್‌ಬಿ)ಶಾಖಾ ಕಛೇರಿ ಉದ್ಘಾಟನಾ ಸಮಾರಂಭವು ನ.೯ರ ನಾಳೆ ಮಧ್ಯಾಹ್ನ ೨.೩೦ಕ್ಕೆ ವಿನೋಬನಗರದಲ್ಲಿರುವ ವಿಧಾತ್ರಿ ಭವನದ ಸಮೀಪದಲ್ಲಿರುವ ಪ್ರಕಾಶ್ ಆರ್ಕೆಡ್‌ನಲ್ಲಿ ನಡೆಯಲಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ೭ ಶಾಖೆಗಳ ಉದ್ಘಾಟನೆಯನ್ನು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ಬೆಂಗಳೂರಿನಲ್ಲಿ ನಾಳೆ ವರ್ಚ್ಯುಯಲ್ ಮೂಲಕ ಉದ್ಘಾಟಿಸಲಿದ್ದಾರೆ ಎಂದರು.
ಸಣ್ಣ ಕೈಗಾರಿಕಾ ವಲಯಕ್ಕೆ ಸಿಡ್ ಬಿ ಬ್ಯಾಂಕ್‌ನ್ನು ಶಿವಮೊಗ್ಗ ತರುವಲ್ಲಿ ಪ್ರಯತ್ನಿಸಿದ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೆ ಸಂಘವು ಅಭಿನಂದಿಸುತ್ತದೆ ಎಂದರು.
ಸಿಡ್‌ಬಿ ಕೇಂದ್ರ ಸರ್ಕಾರದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು ಕೇವಲ ಇದು ಎಂಎಸ್‌ಎಂಇಗಳಿಗೆ ಸಾಲ ನೀಡಿ ಪ್ರೋತ್ಸಾಹಿಸುವ ಬ್ಯಾಂಕಿಂಗ್ ವ್ಯವಸ್ಥೆ ಆಗಿದೆ. ಈ ಬ್ಯಾಂಕ್‌ನಲ್ಲಿ ಹಾಲಿ ಉದ್ಯಮಗಳನ್ನು ನಡೆಸುತ್ತಿರುವ ಮತ್ತು ನವ ಉದ್ಯಮದಾರರಿಗೆ ಕೈಗಾರಿಕೆಗಳಿಗೆ ಬೇಕಾಗುವ ಎಲ್ಲ ರೀತಿಯ ಮೆಶಿನರಿಗಳಿಗೆ ಸಾಲ ಸೌಲಭ್ಯ ಒದಗಿಸುವ ವ್ಯವಸ್ಥೆ ಇರುತ್ತದೆ.
ಈ ಬ್ಯಾಂಕ್ ಸಂಪೂರ್ಣ ಸಿಜಿಟಲೈಸೇಶನ್ ಆಗಿರುವ ಬ್ಯಾಂಕ್ ಆಗಿರುತ್ತದೆ. ಇಲ್ಲಿ ತಾವು ಮನೆಯಲ್ಲೇ ಕುಳಿತು ದಾಖಲೆಗಳನ್ನು ಆನ್‌ಲೈನ್ ಮೂಲಕ ಅಪ್ಲೋಡ್ ಮಾಡಬಹುದಾಗಿರುತ್ತದೆ. ದಾಖಲೆಗಳು ಸರಿ ಇದ್ದಲ್ಲಿ ಕೇವಲ ೪೮ ಗಂಟೆಗಳ ಒಳಗಾಗಿ ಸಾಲ ದೊರೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವ ಕಾರ್ಯದರ್ಶಿ ಎ.ಎಂ. ಸುರೇಶ್, ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಜೋಯಿಸ್ ರಾಮಾಚಾರಿ, ಉಪಾಧ್ಯಕ್ಷ ಹರ್ಷ ಬಿ.ಕಾಮತ್, ಕಾರ್ಯದರ್ಶಿ ಎಸ್.ವಿಶ್ವೇಶ್ವರಯ್ಯ, ಖಜಾಂಚಿ ಹೆಚ್.ಬಿ.ರಮೇಶ್ ಬಾಬು, ಕಿರಣ್‌ಕುಮಾರ್ ಹಾಗೂ ಇನ್ನಿತರರಿದ್ದರು.