ಶಿವಮೊಗ್ಗ: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿಶೀಟರ್ ಮೇಲೆ ಫೈರಿಂಗ್ ಮಾಡಲಾಗಿದೆ.
ತುಂಗಾನಗರ ಪಿಎಸ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರೌಡಿಶೀಟರ್ ಹಬೀಬುಲ್ಲಾ ಅಲಿಯಾಸ್ ಅಮ್ಮು ಮೇಲೆ ಗುಂಡು ಹಾರಿಸಲಾಗಿದೆ. ಆತ್ಮರಕ್ಷಣೆಗಾಗಿ ತುಂಗಾನಗರ ಠಾಣೆಯ ಇನ್ಸ್ ಪೆಕ್ಟರ್ ಗುರುರಾಜ್ ಗುಂಡು ಹಾರಿಸಿದ್ದಾರೆ.
ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಬಂಧಿಸಲು ತೆರಲಿದ್ದ ವೇಳೆ ಪೊಲೀಸ್ ಸಿಬ್ಬಂದಿ ಮತ್ತು ಇನ್ಸ್ ಪೆಕ್ಟರ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಲೆತ್ನಿಸಿದಾಗ ಶರಣಾಗುವಂತೆ ಎಚ್ಚರಿಕೆ ನೀಡಿ ಅಂತಿಮವಾಗಿ ಫೈರಿಂಗ್ ಮಾಡಲಾಗಿದೆ.
ಪೊಲೀಸರು ತಮ್ಮ ರಕ್ಷಣೆಗಾಗಿ ಹಬೀಬ್ ವುಲ್ಲಾ ಕಾಲಿಗೆ ಗುಂಡು ಹಾರಿಸಿದ್ದು, ಆತನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ತುಂಗಾನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಹಬೀಬುಲ್ಲಾ ಕೊಲೆ, ಕೊಲೆ ಯತ್ನ, ಶ್ರೀಗಂಧ ಕಳವು ಸೇರಿ ಹಲವು ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿ 4 ವರ್ಷ ಜೈಲು ಶಿಕ್ಷೆ ಅನುಭವಿಸಿ ಇತ್ತೀಚೆಗೆ ಬಿಡುಗಡೆಯಾಗಿದ್ದ. ಸೆ. 13 ರಂದು ಇಬ್ಬರು ಅಪರಿಚಿತ ಬೈಕ್ ಸವಾರರು ವ್ಯಕ್ತಿಯೊಬ್ಬನ ಬೆನ್ನಿಗೆ ಚೂರಿ ಹಾಕಿದ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಮಾಹಿತಿ ನೀಡಿದದ್ದಾರೆ.
ತುಂಗಾನಗರ ಠಾಣಾ ವ್ಯಾಪ್ತಿಯ ನಗರದ ಹೊರ ವಲಯದಲ್ಲಿ ಹಬೀಬುಲ್ಲಾ ಅಡಗಿರುವ ಖಚಿತ ಮಾಹಿತಿ ಮೇರೆಗೆ ತುಂಗಾನಗರ ಪೊಲೀಸರು ಇನ್ಸ್ ಪೆಕ್ಟರ್ ಗುರುರಾಜ ಕರ್ಕಿ ನೇತೃತ್ವದಲ್ಲಿ ಬಂಧಿಸಲು ತೆರಲಿದಾಗ ಜಯಪ್ಪ ಎಂಬ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ, ಇನ್ಸ್ ಪೆಕ್ಟರ್ ಗುರುರಾಜ್ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು ಎಚ್ಚರಿಕೆ ನೀಡಿದ್ದು,
ಆದರೆ ಇನ್ಸ್ ಪೆಕ್ಟರ್ ಮೇಲೆಯೇ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಕಾಲಿನ ಪಾದಕ್ಕೆ ಗುಂಡು ಹೊಡೆದು ಬಂಧಿಸಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈತ ಯಾರಿಂದ ಪ್ರಚೋದಿತನಾಗಿದ್ದಾನೆ ಎಂಬುದರ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ಗಾಯಗೊಂಡ ಸಿಬ್ಬಂದಿಯನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಡಿವೈಎಸ್ಪಿ ಆಂಜನಪ್ಪ, ಇನ್ಸ್ ಪೆಕ್ಟರ್ ಗುರುರಾಜ್ ಕರ್ಕಿ ಇದ್ದರು.