ಶಿವಮೊಗ್ಗ: ಎನ್.ಡಿ.ಎ. ನೇತೃತ್ವದ ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬಂದು 100 ದಿನಗಳಾದವು. ಕಾಕತಾಳೀಯ ಎಂಬAತೆ ಇಂದು ಅವರ ಜನ್ಮದಿನವೂ ಹೌದು. ಪ್ರಧಾನಿಯವರು ವಿಕಸಿತ ಭಾರತಕ್ಕೆ ಸಂಕಲ್ಪ ತೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನರೇಂದ್ರ ಮೋದಿ ಅವರು ಆಡಳಿತವನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಕಳೆದ 10 ವರ್ಷಗಳಿಂದ ಭಾರತದ ಎಲ್ಲಾ ವರ್ಗದ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. 2047ನೇ ಇಸವಿ ಹೊತ್ತಿಗೆ ಭಾರತ ಜಗತ್ತಿನಲ್ಲಿಯೇ ಅತ್ಯಂತ ಬಲಿಷ್ಠವಾಗಿ ಬೆಳೆಯಲಿದೆ. ಮುಖ್ಯವಾಗಿ ಭ್ರಷ್ಟಾಚಾರ ಮುಕ್ತ ಭಾರತವನ್ನಾಗಿಸಲು ಮೋದಿ ಪಣ ತೊಟ್ಟಿದ್ದಾರೆ ಎಂದರು.
ಕೇAದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ 17ನೇ ಕಂತನ್ನು ಅವರು ಬಿಡುಗಡೆ ಮಾಡಿದ್ದಾರೆ. ಸುಮಾರು 9.3 ಕೋಟಿ ರೈತರಿಗೆ ಸುಮಾರು 20 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಈಗಾಗಲೇ ವಿವಿಧ ಯೋಜನೆಗಳಡಿಯಲ್ಲಿ 12 ಕೋಟಿ ರೈತರಿಗೆ ನೆರವು ನೀಡಲಾಗಿದೆ. ರಸ್ತೆ ಅಭಿವೃದ್ಧಿಗಾಗಿ 50600 ಕೋಟಿ ರೂ. ಖರ್ಚು ಮಾಡಲಾಗಿದೆ. ಬೆಂಗಳೂರಿನ ಮೆಟ್ರೋ ಮೂರನೇ ಹಂತದ ಯೋಜನೆಗೆ 8 ಹೊಸ ರೈಲು ಮಾರ್ಗಗಳನ್ನು ಮಂಜೂರು ಮಾಡಲಾಗಿದೆ. ಸುಮಾರು 2 ಕೋಟಿ ಗ್ರಾಮಗಳಿಗೆ ಸೌರಶಕ್ತಿ ನೀಡಲಾಗಿದೆ. 41 ಮಿಲಿಯನ್ ಯುವಕರಿಗೆ ಉದ್ಯೋಗ ನೀಡಲಾಗಿದ್ದು, ಇದಕ್ಕಾಗಿ 2 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಲಾಗಿದೆ ಎಂದರು.

ಆಯುಷ್ಮಾನ್ ಯೋಜನೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. 70 ವರ್ಷದ ಮೇಲ್ಪಟ್ಟವರಿಗೂ ಈ ಯೋಜನೆ ವಿಸ್ತರಿಸಲಾಗಿದೆ. ಇದರಿಂದ ಸುಮಾರು 6 ಕೋಟಿ ಹಿರಿಯರಿಗೆ ಲಾಭವಾಗುತ್ತದೆ. 4.5 ಕೋಟಿ ಕುಟುಂಬಗಳಿಗೆ ಈ ಯೋಜನೆ ತಲುಪುತ್ತಿದೆ. ಹಾಗೆಯೇ ಸ್ವಾತಂತ್ರö್ಯದ ನಂತರ ಪ್ರಮುಖವಾಗಿ ಮೂರು ಕ್ರಿಮಿನಲ್ ಕಾಯ್ದೆಗಳನ್ನು ಬದಲಾಯಿಸಲಾಗಿದೆ. ಹೀಗೆ ಕೇವಲ 100 ದಿನಗಳಲ್ಲಿ ನರೇಂದ್ರ ಮೋದಿ ¸ರ್ಕಾರ ಅಭಿವೃದ್ಧಿಯ ದಾಪುಗಾಲು ಹಾಕಿದೆ. ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ಅವರಿಗೆ ಹೆಚ್ಚಿನ ಆಯಸ್ಸನ್ನು ನೀಡಲಿ ಎಂದರು.

ಪ್ರಶ್ನೆಯೊAದಕ್ಕೆ ಉತ್ತರಿಸಿದ ಅವರು ಪಕ್ಷದ ಯಾವ ಹಿರಿಯರನ್ನು ನಾನು ಕಡೆಗಣ ಸಿಲ್ಲ. ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಕೆಲಸ ನಿರ್ವಹಿಸುತ್ತಿದ್ದೇನೆ. ಯಡಿಯೂರಪ್ಪನವರ ಮಗ ಎಂಬ ಅಹಂಕಾರ ನನಗಿಲ್ಲ. ಹೆಮ್ಮೆ ಇದೆ. ನಾನು ನನ್ನ ಬಗ್ಗೆ ನನ್ನದೇ ಪಕ್ಷದ ಹಿರಿಯರು ಮಾಡಿರುವ ಆರೋಪಗಳನ್ನು ಪಕ್ಷದ ಹಿತಕ್ಕಾಗಿ ನುಂಗಿಕೊಳ್ಳುತ್ತೇನೆ. ನನ್ನದು ಒಂದೇ ಗುರಿ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಷ್ಟೇ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಶಿವರಾಜ್, ಮಾಲತೇಶ್, ಕೆ.ವಿ. ಅಣ್ಣಪ್ಪ ಇದ್ದರು.