ಶಿವಮೊಗ್ಗ: ನಗರದ ಕೋಟೆ ಶ್ರೀ ಭೀಮೇಶ್ವರ ದೇವಾಲಯದಲ್ಲಿ ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾಪೂರ್ವ ಮೆರವಣಿಗೆಗೆ ಇಂದು ವೈಭವದ ಚಾಲನೆ ದೊರೆಯಿತು.
ಶಿವಮೊಗ್ಗ: ಹಿಂದೂ ಮಹಾಸಭಾ ವತಿಯಿಂದ ನಗರದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣ ಗೆ ಜಯಘೋಷದೊಂದಿಗೆ ಮಂಗಳವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗಿದೆ. ಅಪಾರ ಸಂಖ್ಯೆಯ ಜನ ಮೆರವಣ ಗೆಯಲ್ಲಿ ಭಾಗವಹಿಸಿದ್ದಾರೆ.

ಭವ್ಯ ಮೆರವಣ ಗೆ ಕೋಟೆ ರಸ್ತೆ ತಲುಪುತ್ತಿದ್ದಂತೆ ಗಣೇಶನಿಗೆ ಹರಿಗೆಯ ಕೆಕೆ ಗೌಡ ಕುಟುಂಬದಿAದ 150 ಕೆಜಿ ತೂಕದ ಸೇಬಿನ ಹಾರ ಹಾಕಲಾಯಿತು. ವಿವಿಧ ಸಾಂಸ್ಕöÈತಿಕ ಕಲಾತಂಡಗಳು, ಯುವಜನರ ಈ ವೇಳೆ ಚಂಡೆ ಮೇಳ ಸೇರಿದಂತೆ ಮತ್ತಿತರ ನೃತ್ಯಗಳು ನಡೆದವು.

ಮೆರವಣ ಗೆಯಲ್ಲಿ ಸಾರ್ವಜನಿಕರು ನಿಶ್ಚಿಂತೆಯಿAದ ಭಾಗವಹಿಸಲಿ ಎಂಬ ಕಾರಣಕ್ಕೆ ಬಂದೋಬಸ್ತ್ ಹೆಚ್ಚಿಸಲಾಗಿದೆ. ಮೂರು ಸಾವಿರಕ್ಕೂ ಅಧಿಕ ಪೊಲೀಸರನ್ನು ಮೆರವಣ ಗೆಯ ಕಾವಲಿಗೆ ನಿಯೋಜಿಸಲಾಗಿದೆ.
ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಪೂರ್ವ ಮೆರವಣ ಗೆ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಸಂಚಾರ ವ್ಯವಸ್ಥೆ ಸುಗಮಗೊಳಿಸುವುದಕ್ಕಾಗಿ ಗುರುವಾರ ಕೆಲವು ಮಾರ್ಗಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಜತೆಗೆ, ನಿಲುಗಡೆ ಮತ್ತು ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡಲಾಗಿದೆ. ಮೆರವಣ ಗೆ ಸಾಗುವ ಮಾರ್ಗ ಮತ್ತು ಮಾರ್ಗದ ಸುತ್ತಮುತ್ತ 100ಮೀ. ಅಂತರದಲ್ಲಿಎಲ್ಲವಾಹನಗಳ ಸಂಚಾರ ಹಾಗೂ ನಿಲುಗಡೆ ನಿಷೇಧಿಸಲಾಗಿದೆ.

ಇನ್ನು, ಹಿಂದೂ ಮಹಾಸಭಾ ಗಣಪತಿ ಮೆರವಣ ಗೆ ಸಾಗುವ ಗಾಂಧಿ ಬಜಾರ್ ರಸ್ತೆ ಸಂಪೂರ್ಣ ಕೇಸರಿಮಯವಾಗಿದೆ. ಕೇಸರಿ ಹಿಂದೂ ಅಲಂಕಾರ ಸಮಿತಿ ವತಿಯಿಂದ ಗಾಂಧಿ ಬಜಾರ್ನಲ್ಲಿ ರಸ್ತೆ ಉದ್ದಕ್ಕೂ ಕೇಸರಿ ಬಂಟಿAಗ್ಸ್ ಕಟ್ಟಲಾಗಿದೆ.
ಮೆರವಣ ಗೆ ಸಾಗುವ ಪ್ರತಿ ಸರ್ಕಲ್ನಲ್ಲಿಯು ವಿಭಿನ್ನವಾಗಿ ಅಲಂಕಾರ ಮಾಡಲಾಗುತ್ತಿದೆ. ರಾಮಣ್ಣ ಶ್ರೇಷ್ಠಿ ಪಾರ್ಕ್, ಶಿವಪ್ಪನಾಯಕ ವೃತ್ತ, ಶಿವಪ್ಪನಾಯಕ ಹಳೆ ಮಾರುಕಟ್ಟೆ ವೃತ್ತ (ಎಎ ಸರ್ಕಲ್), ಗೋಪಿ ವೃತ್ತದಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ.

ನಗರವೆಲ್ಲ ಕೇಸರಿ ಧ್ವಜ ಹಾಗೂ ವಿವಿದ ಅಲಂಕಾರಗಳೊAದಿಗೆ ಸಿಂಗಾರಗೊAಡಿದೆ. ಈಗಾಗಲೇ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್, ಮಹಾನಗರ ಪಾಲಿಕೆ ಮತ್ತು ಹಿಂದೂ ಮಹಾಮಂಡಳಿ ಸಕಲ ಸಿದ್ಧತೆ ಮಾಡಿದ್ದು, ನಗರದ ಶಿವಪ್ಪನಾಯಕ ವೃತ್ತದ ಬಳಿ ಗಾಂಧಿಬಜಾರ್ ಮುಖ್ಯ ದ್ವಾರದಲ್ಲಿ ಕಾಶಿ ವಿಶ್ವನಾಥನ ಮಹಾದ್ವಾರ ಹಾಗೂ ಅಮೀರ್ ಅಹಮ್ಮದ್ ವೃತ್ತದಲ್ಲಿ ಆಯೋಧ್ಯೆಯ ಪ್ರತಿಕೃತಿ ಹಾಗೂ ನಗರದ ನೆಹರು ರಸ್ತೆಯಲ್ಲಿ ಗಣಪತಿಯ ವಿವಿಧ ನಾಮಾವಳಿ ಹಾಗೂ ಅಲಂಕೃತ ಬಂಟಿAಗ್ಸ್, ಪ್ಲೆಕ್ಸ್ ಪ್ಲೆಕ್ಸ್, ದೈವಜ್ಞವೃತ್ತದಲ್ಲಿ ಗರುಡನ ಅಲಂಕಾರ, ಎಂ.ಆರ್.ಎಸ್. ವೃತ್ತದಲ್ಲಿ ಶಿವಾಜಿ ಮಹಾರಾಜರ ಪ್ರತಿಕೃತಿ ಎಲ್ಲರ ಗಮನ ಸೆಳೆಯುತ್ತಿದೆ.
ಹಲವಾರು ಸಂಘ ಸಂಸ್ಥೆಗಳು ಗಣಪತಿಗೆ ನೂರಾರು ಸಂಖ್ಯೆಯಲ್ಲಿ ಬೃಹತ್ ಹಾರಗಳನ್ನು ಅರ್ಪಿಸಲು ಸಿದ್ಧತೆ ನಡೆಸಿವೆ. ಬೆಳಿಗ್ಗೆ 9.30ಯಿಂದ ನಾಳೆ ಬೆಳಿಗ್ಗೆ 3ರವರೆಗೆ ಮೆರವಣ ಗೆ ಪ್ರಮುಖ ಬೀದಿಗಳಲ್ಲಿ ಸಾಗಲಿದ್ದು, ಹಲವಾರು ಸಂಘ ಸಂಸ್ಥೆಗಳು, ಮಜ್ಜಿಗೆ, ಪಾನಕ, ಕೊಸುಂಬರಿ ಮತ್ತು ಉಪಹಾರ, ಸಹಿ ಹಂಚಿಕೆ ನಡೆಯುತ್ತಿದೆ.
ಶಿವಮೊಗ್ಗದಲ್ಲಿ ಮಹಾಸಭಾ ಗಣಪತಿ ವಿಸರ್ಜನಾ ಮೆರವಣ ಗೆ ನಡೆಯಲಿದೆ. ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. 25 ಡಿವೈಎಸ್ಪಿ, 110 ಪಿಎಸ್ಐಗಳು, ಪೊಲೀಸ್, ಹೋಂ ಗಾರ್ಡ್ ಸೇರಿ 3500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದರೊಂದಿಗೆ ಡಿಎಆರ್, ಆರ್.ಎ.ಎಫ್. ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ.
ಶಿವಮೊಗ್ಗ ನಗರದಾತ್ಯಂತ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಯಾವುದೇ ಸಮಸ್ಯೆ ಇಲ್ಲದೆ ಮೆರವಣ ಗೆ ಸಾಗಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ.