ಶಿವಮೊಗ್ಗ : ವಿದ್ಯುತ್ ಇಲಾಖೆ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದನಿರ್ಮಾಣವಾಗುತ್ತಿರುವ ಸಂಸ್ಕೃತಿ ಭವನಕ್ಕೆ ಶಾಸಕರ ಅನುದಾನದಿಂದ ೨೫ ಲಕ್ಷ ರೂ.ನೀಡುವುದಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ ಭರವಸೆ ನೀಡಿದರು.ವಿದ್ಯುತ್ ಇಲಾಖೆ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಕುವೆಂಪುರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಸಾರ್ಥಕ ಷಷ್ಠಿ
ಕಾರ್ಯಕ್ರಮದಲ್ಲಿಸನ್ಮಾನ ಸ್ವೀಕರಿಸಿ ಮಾತನಾಡಿದರು.ಸಂಘದ ಅಧ್ಯಕ್ಷ ಶಶಿಧರ್ ಮುಂದಾಲೋಚನೆಯಲ್ಲಿ ಕೆಲಸ ಮಾಡುತ್ತಿದ್ದುಘಿ, ನಿವೃತ್ತಿಯಬಳಿಕವೂ ಕ್ರಿಯಾಶೀಲರಾಗಿರಬೇಕೆಂಬ ಉದ್ದೇಶದಲ್ಲಿ ಸಂಸ್ಕೃತಿ ಭವನ ನಿರ್ಮಾಣಕ್ಕೆ ಕೈಹಾಕಿದ್ದಾರೆ. ಸಂಘದಿಂದ ಸಿಎ ನಿವೇಶನ ತೆಗೆದುಕೊಂಡಿದ್ದು ಸೇವೆಯಲ್ಲಿದ್ದಾಗ ಮತ್ತುನಿವೃತ್ತಿ ಬಳಿಕವೂ ಏನೆಲ್ಲ ಆಗಬೇಕು ಎಂಬ ಕಲ್ಪನೆಯಲ್ಲಿ
ಕ್ರಿಯಾಶೀಲರಾಗಿದ್ದಾರೆಎಂದರು.ಸಾಂಸ್ಕೃತಿಕ ಪರಂಪರೆಯ ನೆಲಗಟ್ಟು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕಿದೆ. ಈನಿಟ್ಟಿನಲ್ಲಿಯೇ ಭವನಕ್ಕೆ ಸಂಸ್ಕೃತಿಕ ಭವನ ಎಂದು ನಾಮಕರಣ ಮಾಡಿದ್ದಾರೆ. ಮುಂದೆಅವರು ಮಾಡುವ ಎಲ್ಲಾ ಕೆಲಸ ಕಾರ್ಯಗಳಿಗೂ ಕೈ
ಜೋಡಿಸುವುದಾಗಿ ಹೇಳಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ ಶಶಿಧರ್ ಅವರು ಒಬ್ಬಅಕಾರಿಯಾಗಿ, ವಿದ್ಯುತ್ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಣೆ ಜತೆಗೆ ಸಾಮಾಜಿಕಸೇವೆಯನ್ನೂ ಮಾಡಿದ್ದಾರೆ. ಅವರ ಸೇವೆ ಮುಂದೆ ಇನ್ನಷ್ಟು ಹೆಚ್ಚಾಗಲಿ ಎಂದು ಆಶಿಸಿದರು.ಕೈಗಾರಿಕೋದ್ಯಮಿಗಳಿಗೂ ವಿದ್ಯುತ್ ಇಲಾಖೆಗೂ ಅವಿನಾಭಾವ ಸಂಬಂಧ ಇರುತ್ತದೆ.ಕೈಗಾರಿಕೆಗಳಿಗೆ ವಿದ್ಯುತ್ ಸಂಪರ್ಕ ಅತ್ಯಗತ್ಯವಾಗಿದೆ. ಕ್ರಿಯಾಶೀಲ ಅಭಿಯಂತರರಿಂದಕೈಗಾರಿಕೆಗಳಿಗೆ ವಿದ್ಯುತ್ ಸಮಸ್ಯೆಗಳು ತಗ್ಗಿವೆ. ಹತ್ತಿರದಿಂದ ಅವರ ಕೆಲಸನೋಡಿದ್ದೇನೆ.ಕೆಳ ಹಂತದ ನೌಕರರಿಗೆ ಸಲಹೆ, ಪ್ರೀತಿ ತೋರಿದ್ದಾರೆ. ಸಾಕಷ್ಟು ಉತ್ಸಾಹವಿದೆ ಎಂದರು.ಕಟ್ಟಡದ ನೀಲನಕ್ಷೆ
ತಯಾರಿಸಿದ್ದಾರೆ. ಒಬ್ಬ ವ್ಯಕ್ತಿ ಕ್ರಿಯಾಶೀಲರಾಗಿದ್ದು ಸಾಮಾಜಿಕಚಟುವಟಿಕೆ ಮಾಡುತ್ತಾರೆ ಎಂದರೆ ಜನರೇ ನೆರವು ನೀಡುತ್ತಾರೆ. ನಿವೃತ್ತಿ ಬಳಿಕಕೈಗಾರಿಕೋದ್ಯಮಿಯಾಗಿ ಬೆಳೆಯಲಿ ಎಂದರು.ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ, ಸರ್ಕಾರಿ
ನೌಕರರ ಸಂಘದರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹಾಗೂ ವಯೋನಿವೃತ್ತಿಯಾಗುತ್ತಿರುವ ಮೆಸ್ಕಾಂಶಿವಮೊಗ್ಗ ವೃತ್ತದ ಈಕ್ಷಕ ಇಂಜಿನಿಯರ್ ಹಾಗೂ ಸಂಘದ ಅಧ್ಯಕ್ಷ ಎಸ್.ಜಿ. ಶಶಿಧರವರನ್ನು ಸನ್ಮಾನಿಸಲಾಯಿತು.ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮೀಜಿ,ಸಾಣೆಹಳ್ಳಿ ಮಠದ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.