ಶಿವಮೊಗ್ಗ: ತುಂಗಾ ನದಿಗೆ ಹರಕೆರೆಯಿಂದ ಸವಾಯಿಪಾಳ್ಯದವರೆಗೆ ತಡೆಗೋಡೆ ನಿರ್ಮಿಸಲಾಗುವುದುಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೂಚನೆ ನೀಡಿದರು.ಭಾನುವಾರ ಗಾಜನೂರಿಗೆ ಭೇಟಿನೀಡಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ತುಂಗಾ ನದಿಯ ನೀರಿನಿಂದ ಮುಳುಗಿದ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಒಂದು ವಾರದೊಳಗೆ ತಡೆಗೋಡೆ

ಕ್ರಿಯಾಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಪಾಲಿಕೆ ವತಿಯಿಂದ ೫೦೦ ಮೀಟರ್ ಉದ್ದದ ತಡೆಗೋಡೆ ನಿರ್ಮಿಸಲಾಗುವುದು. ೪೩ ಲಕ್ಷ ರೂ. ಈಗಾಗಲೇ ಬಿಡುಗೆಯಾಗಿದೆ. ತುಂಗಾನದಿಗೆ ತಡೆಗೋಡೆಗೆ ಹೆಚ್ಚಿನ ಕ್ರಿಯಾಯೋಜನೆಗೆ ೭ ದಿನಗಳ ಒಳಗೆ ಪ್ರಸ್ತಾಪನೆ ಕಳುಹಿಸಲು ಪಾಲಿಕೆಗೆ ಸೂಚಿಸಲಾಗಿದೆ ಎಂದರು.ಗಾಜನೂರಿನಲ್ಲಿ ಹೂಳೆತ್ತಲು ಅಧಿಕಾರಿಗಳು ಸಾಧ್ಯವಿಲ್ಲ ಎಂದಿದ್ದಾರೆ. ೯೭ ಕೆರೆಗಳು ಜಿಲ್ಲೆಯಲ್ಲಿ ಹಾಳಾಗಿವೆ. ಮುಂದಿನ ದಿನಗಳಲ್ಲಿ ಕೆರೆಗಳಿಗೆ ನದಿ ನೀರು ಉಣಿಸಲಾಗವುದು. ಕೆಲವು ಸೇತುವೆಗಳು ಸಮಸ್ಯೆಯಾಗಿದೆ ಪ್ರಾಮುಖ್ಯತೆಯ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ತುಂಗಾ ನದಿಗೆ ಎಲ್ಲಿ ಅವಶ್ಯಕತೆ ಇದೆ ಅಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗುವುದು

ಎಂದರು.ಶರಾವತಿ ಹಿನ್ನೀರಿನಿಂದ ಸೊರಬಕ್ಕೂ ಕುಡಿಯುವ ನೀರು ಒದಗಿಸಲು ಯೋಚಿಸಲಾಗಿದೆ. ನೀರಿನ ವ್ಯವಸ್ಥೆಯನ್ನ್ನು ಕುಡಿಯಲು ಮತ್ತು ಕೃಷಿಗೆ ಬಳಕೆ ಮಾಡಿಕೊಳ್ಳುವ ಬಗ್ಗೆ ಯೋಚಿಸಲಾಗಿದೆ. ತುಂಗಾ ಅಣೆಕಟ್ಟು ಏರಿಸುವ ಕುರಿತು ಚಿಂತಿಸಲಾಗುವುದು ಎಂದು ಹೇಳಿ ಬೇರೆ ವಿಷಯ ಪ್ರಸ್ತಾಪಿಸಿದರಲ್ಲದೆ ಬೆಳೆ ಹಾನಿಯ ಪರಿಹಾರವನ್ನು ರೈತರು ಪಡೆಯಬೇಕು ಎಂದು ಹೇಳಿದರು

.ಪ್ರಾಣ ಹಾನಿ ಮತ್ತು ಜಾನುವಾರುಗಳ ಪ್ರಾಣ ಹಾನಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಮಳೆಗೆ ಅನೇಕ ಅನಾಹುತವಾಗಿದೆ. ಜೀವ ಹಾನಿಯು ಆಗಿದೆ. ಇದಕ್ಕೆಲ್ಲ ಪರಿಹಾರ ಕೊಡಲಾಗುವುದು. ಅಧಿಕಾರಿಗಳಿಂದ ಸಮೀಕ್ಷಾ ವರದಿ ಬರಬೇಕಿದೆ ಎಂದರು. ಅರಣ್ಯ ಭೂಮಿಗಾಗಿ ಈ ಹಿಂದೆ ಮಳೆನಾಡಿನ ಜನಾಕ್ರೋಶದ ಹೋರಾಟ ಮಾಡಲಾಗಿತ್ತು. ಭೂಮಿ ಕಳೆದುಕೊಂಡವರಿಗೆ ನ್ಯಾಯಕೊಡಿಸಲು ಪರಿಹಾರ ಹುಡುಕಲಾಗಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಮನವಿ ನೀಡಲಾಗಿತ್ತು. ದೇವದಾಸ್ ಕಾಮತ್ ಸೇರಿದಂತೆ ಇನ್ನಿಬ್ಬರನ್ನು ಸುಪ್ರೀಂನಲ್ಲಿ ವಾದ ಮಾಡಲು ನೇಮಿಸಲಾಗಿದೆ ಚಕ್ರ, ಸಾವೇಹಕ್ಲು, ಶರಾವತಿ ಸೇರಿದಂತೆ ಜಿಲ್ಲೆಯ ಹಲವು ಅರಣ್ಯ ಭೂಮಿಯ ವಿಷಯಗಳನ್ನ ಬಗೆಹರಿಸಲು ಕ್ರಮ

ಕೈಗೊಳ್ಳಲಾಗುವುದು.ಕೇಂದ್ರ ಸರ್ಕಾರದ ಮೇಲೆ ಅರಣ್ಯ ಭೂಮಿ ಬಗ್ಗೆ ಒತ್ತಡ ತರಲಾಗುವುದು. ಬಿಜೆಪಿ ಅರಣ್ಯ ಭೂಮಿಯ ಬಗ್ಗೆ ಕೇಂದ್ರ ಹೆಚ್ಚು ಆಸಕ್ತಿ ತೆಗೆದುಕೊಳ್ಳಬೇಕು ಎಂದರು. ಸರ್ಕಾರ ನಡೆಸುವ ವಿಷಯದಲ್ಲಿ ವಿಪಕ್ಷಗಳು ಸರಿಯಾಗಿ ನಡೆದುಕೊಳ್ಳಬೇಕು. ಪ್ರತಿ ಬಾರಿ ವಿಧಾನ ಸಭೆಯ ಬಾವಿಗೆ ಇಳಿದು ವಿಪಕ್ಷಗಳು ಪ್ರತಿಭಟನೆ ನಡೆಸುವುದು ಸರಿಯಲ್ಲ. ಪಾದಯಾತ್ರೆ ಮಾಡಲು ವಿಪಕ್ಷಗಳು ಹೊರಟಿವೆ. ಅವರ ಪಕ್ಷದ

ಯತ್ನಾಳ್ ಮತ್ತು ಅರವಿಂದ ಲಿಂಬಾವಳಿಯ ಹೇಳಕೆಗೆ ಉತ್ತರಿಸಲಿ ಎಂದರು.ಭದ್ರಾ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದೆ. ಹಾಗಾಗಿ ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭದ್ರಾ ಜಲಾಶಯಕ್ಕೆ ಆಹ್ವಾನಿಸಲಾಗುವುದು. ಜು.೨೯ರಂದು ಭದ್ರಾ ಕಾಡಾದಲ್ಲಿ ಸಭೆ ನಡೆಯಲಿದ್ದು ಅಲ್ಲಿ ನೀರು ಹೊರಬಿಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ತುಂಗಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ಭದ್ರಾದಿಂದಲೂ ನೀರು ಬಿಟ್ಟರೆ ಹೊನ್ನಾಳಿ, ಹಾವೇರಿ ಭಾಗದಲ್ಲಿ ಸಮಸ್ಯೆ ಉದ್ಭವವಾಗಲಿದೆ. ಆ ನಿಟ್ಟಿನಲ್ಲಿ ನೀರು ಹರಿಸುವ ಬಗ್ಗೆ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ೪೩೭ ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ೪೦ ಮನೆಗಳಿಗೆ ತಲಾ ೧.೭೦ ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಅನಧಿಕೃತ ಮನೆಗಳಿಗೂ ಹಾನಿಯಾಗಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದು ಅನಧಿಕೃತ ಮನೆಗಳಿಗೂ ಪೂರ್ಣ ಪರಿಹಾರ ನೀಡುವ ವಿಶ್ವಾಸವಿದೆ ಎಂದು ಭರವಸೆ ನೀಡಿದರು. ಪ್ರವಾಹದಿಂದ ಮುಳುಗಡೆ ಆಗಬಹುದಾದ ಪ್ರದೇಶಗಳನ್ನು ಪಟ್ಟಿ ಮಾಡಲಾಗಿದೆ. ೧೦೩ ಕಾಳಜಿ ಕೇಂದ್ರ ತೆರೆಯಲು ಜಾಗ ಗುರುತಿಸಲಾಗಿದೆ. ಈಗಾಗಲೇ ತಾಳಗುಪ್ಪ ಹೋಬಳಿಯ ಮಂಡಗಳಲೆ

ಗ್ರಾಮದಲ್ಲಿ ಮನೆಗೋಡೆ ಗಳು ಶಿಥಿಲಗೊಂಡಿದ್ದು ಎರಡು ಕಾಳಜಿ ಕೇಂದ್ರ ತೆರೆಯಲಾಗಿದೆ. ಅಲ್ಲದೇ ಗ್ರಾಮ ಮತ್ತು ನಗರ ವ್ಯಾಪ್ತಿಯಲ್ಲಿ ಪ್ರತ್ಯೇಕ ವಿಪತ್ತು ನಿರ್ವಹಣಾ ತಂಡ ರಚಿಸಿದ್ದು ತುರ್ತು ಸಂದರ್ಭದಲ್ಲಿ ಕ್ರಮ ವಹಿಸಲು ಸೂಚಿಸಲಾಗಿದೆ. ೧೫ ಜನರ ಎಸ್‌ಡಿಆರ್‌ಎಫ್ ತಂಡವನ್ನು ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ ಇರಿಸಿಕೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ೫೦೦ ಮಿ.ಮೀ. ಹೆಚ್ಚು ಬಿದ್ದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಳೆ ಕಡಿಮೆ ಎಂಬ ವಿಪಕ್ಷಗಳ ಆರೋಪಕ್ಕೆ ಇದೇ ಉತ್ತರ. ನಾನು ಈ ವಿಷಯದ ಬಗ್ಗೆ ವಿಪಕ್ಷಗಳನ್ನು ಟೀಕಿಸುವುದಿಲ್ಲ. ಆದರೆ ಪ್ರಕೃತಿ ಹೇಗೆ ನಡೆದುಕೊಳ್ಳುತ್ತದೆ ಎನ್ನುವುದನ್ನು ವಿಪಕ್ಷಗಳು ಅರಿಯಬೇಕು. ಯಾರಿಗೆ ಗೊತ್ತು. ಬಿಜೆಪಿ ಅಧಿಕಾರಕ್ಕೆ ಬಂದರೆ ಅತಿವೃಷ್ಠಿ ಬರಬಹುದು.- ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ

By admin

ನಿಮ್ಮದೊಂದು ಉತ್ತರ

error: Content is protected !!