ಶಿವಮೊಗ್ಗ, ಏಪ್ರಿಲ್ ೩೦: : ತರೀಕೆರೆ ರೈಲುನಿಲ್ದಾಣದಲ್ಲಿ ಸುಮಾರು ೩೦-೩೫ ವರ್ಷದ ಅಪರಿಚಿತ ವ್ಯಕ್ತಿಯು ಚಲಿಸುತ್ತಿರುವ ರೈಲುಗಾಡಿಯನ್ನು ಹತ್ತಲು ಹೋಗಿ ಕೆಳಗೆ ಬಿದ್ದು ಮೃತಪಟ್ಟಿರುತ್ತಾನೆ. ಈತನ ವಾರಸ್ಸುದಾರರು, ವಿಳಾಸ ಪತ್ತೆಯಾಗಿರುವುದಿಲ್ಲ. ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
ಈತನ ಚಹರೆ ಸುಮಾರು ೫.೬ ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಕೋಲುಮುಖ, ದಪ್ಪಮೂಗು, ೨ ಇಂಚು ಉದ್ದದ ಕಪ್ಪು ತಲೆಕೂದಲು, ಗಡ್ಡ,ಮೀಸೆ ಬಿಟ್ಟಿರುತ್ತಾನೆ. ಬಲಗೈಯಲ್ಲಿ ಕನ್ನಡ ಅಕ್ಷರದಲ್ಲಿ ಅಮ್ಮ
ಎಂದು ಹಾಗು ಎಡಗೈಯಲ್ಲಿ ರಾಕಿ ಮತ್ತು ಇಂಗ್ಲೀಷ್ನಲ್ಲಿ ಆರ್ ಎಂದು ಹಚ್ಚೆ ಹಾಕಿಸಿಕೊಂಡಿರುತ್ತಾನೆ. ಮೈಮೇಲೆ ನಕ್ಷತ್ರಾಕಾರದ ಚುಕ್ಕೆಗಳುಳ್ಳ ಗುಲಾಬಿ ಬಣ್ಣದ
ಉದ್ದತೋಳಿನ ಅಂಗಿ, ಕಡನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು, ಕೊರಳಲ್ಲಿ ಮತ್ತು ಎಡಗೈಯಲ್ಲಿ ಕೇಸರಿ ಬಣ್ಣದ ದಾರ ಕಟ್ಟಿಕೊಂಡಿರುತ್ತಾನೆ.
ಈ ಅಪರಿಚಿತ ವ್ಯಕ್ತಿಯ ವಾರಸ್ಸುದಾರರು ಪತ್ತೆಯಾದಲ್ಲಿ
ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್ಪೆಕ್ಟರ್, ದೂ.ಸಂ.-೦೮೧೮೨-೨೨೨೯೭೪/ ೯೪೮೦೮೦೨೧೨೪ ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ಕೋರಿದೆ.