ಮೈಸೂರು : ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ವರ್ತನೆಯನ್ನು ಖಂಡಿಸಿರುವ ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರೇಖಾ ಶ್ರೀನಿವಾಸ್, ಕೂಡಲೇ ತನಿಖಾಧಿಕಾರಿಗಳ ಮುಂದೆ ಶರಣಾಗುವಂತೆ ಆಗ್ರಹಿಸಿದ್ದಾರೆ.
“ಪ್ರಜ್ವಲ್ ರೇವಣ್ಣ ಮಾಡಿರುವ ಈ ಕೃತ್ಯದಿಂದಾಗಿ ಇಡೀ ಕರ್ನಾಟಕದ ಜನತೆ ದೇಶದ ಮುಂದೆ ತಲೆತಗ್ಗಿಸುವಂತಾಗಿದೆ. ಅವರಿಗೆ ಮಾನಸಿಕ ಅಸ್ವಸ್ಥತೆ ಇರಬಹುದು. ಭೇಟಿ ಬಚಾವೋ ಯೋಜನೆ ಬರೀ ಡೋಂಗಿಯಾಗಿದ್ದು, ಪ್ರಜ್ವಲ್ ರೇವಣ್ಣನಂತಹ ಕಾಮುಕ ವ್ಯಕ್ತಿಗಳನ್ನು ಸಂಸದರನ್ನಾಗಿ ಮಾಡಿದರೆ ಮುಂದೆ ದೇಶದ ಹೆಣ್ಣು
ಮಕ್ಕಳ ಗತಿ ಏನು,” ಎಂದು ಪ್ರಶ್ನಿಸಿದರು. “ಒಂದಲ್ಲಾ, ಎರಡಲ್ಲಾ, ಹತ್ತಾರು ಹೆಣ್ಣು ಮಕ್ಕಳ ಜೀವನ ಹಾಳು ಮಾಡಿರುವ ಇಂಥ ವಿಕೃತಕಾಮಿಯ ವಿರುದ್ದ ಬಿಜೆಪಿ ಯಾಕೋ ಮೌನ ವಹಿಸಿ ಕಾಪಾಡುತ್ತಿದೆ,” ಎಂದು ದೂರಿದ್ದಾರೆ.