ಶಿವಮೊಗ್ಗ,: ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಭಾನುವಾರದಂದು ಮತದಾನದ ಕುರಿತು ಜಾಗೃತಿ ಮೂಡಿಸಲು ಗೋಪಾಳದಲ್ಲಿನ ನಿವಾಸಿಗಳೊಂದಿಗೆ ಮತದಾದ ಹಬ್ಬವನ್ನು ವಿನೂತನವಾಗಿ ಆಚರಿಸಲಾಯಿತು.
ಮತದಾನದ ಹಬ್ಬದಲ್ಲಿ ಮಹಿಳೆಯರು ರಂಗೋಲಿ ಬಿಡಿಸಿದರು.
ಈ ಸಂದರ್ಭದಲ್ಲಿ ಪಾಲಿಕೆಯ ನೋಡಲ್ ಅನುಪಮ ಮಾತನಾಡಿ, ಮೇ ೭ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡ ನೂರರ? ಮತದಾನ ಮಾಡುವ ಮೂಲಕ ರಾಜ್ಯದಲ್ಲಿಯೇ ಅತಿ ಹೆಚ್ಚು ಮತದಾನ ನಡೆದ ನಗರ ಎಂಬ ಹೆಗ್ಗಳಿಕೆಗೆ ಪಾತ್ರರಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಲ್ಲಾ ಮಹಿಳೆಯರಿಗೂ ಯುಗಾದಿ ಹಬ್ಬದ ಪ್ರಯುಕ್ತ ಅರಿಶಿನ-ಕುಂಕುಮ ಕೊಡುವುದರ ಮೂಲಕ ಸಂಪ್ರದಾಯವಾಗಿ ಆಚರಿಸಲಾಯಿತು.
ಇದೇ ವೇಳೆ ಕಲಾವಿದರ ತಂಡದಿಮದ ಮತದಾನ ಜಾಗೃತಿ ಭಾಗವಹಿಸಿದ್ದರು.