ಶಿವಮೊಗ್ಗ, ಏಪ್ರಿಲ್ 08: ): ಏ.7 ರಂದು ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಣ್ಣ ಶ್ರೇಷ್ಠಿ ಪಾರ್ಕ್ನಲ್ಲಿರುವ ಲಕ್ಷ್ಮೀ ಬೇಕರಿಯ ಮುಂಭಾಗದ ಫುಟ್ಪಾತ್ನಲ್ಲಿ ಮೇಲೆ ಅನಾರೋಗ್ಯದಿಂದ ಸುಸ್ತಾಗಿ ಮಲಗಿದ್ದ ಸುಮಾರು 50-55 ವರ್ಷದ ಅಪರಿಚಿತ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಮೆಗ್ಗಾನ್
ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿರುವುದು ತಿಳಿದುಬಂದಿದೆ. ಶವವನ್ನು ಮೆಗ್ಗಾನ್ ಆಸ್ಪತ್ರೆಯ
ಶವಾಗಾರದಲ್ಲಿರಿಸಲಾಗಿದೆ. ಈತನ ಚಹರೆ ಸುಮಾರು 05.07 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ತೆಳ್ಳನೆಯ ಮೈಕಟ್ಟು, ಕೋಲುಮುಖ ಹೊಂದಿದ್ದು, ಮೃತನ ಬಲಪಕ್ಕೆಯಲ್ಲಿ ರಾಗಿಕಾಳೂ ಗಾತ್ರದ ಕಪ್ಪುಮಚ್ಚೆ ಇರುತ್ತದೆ. ತಲೆಯಲ್ಲಿ 3 ಇಂಚು ಉದ್ದದ ಕಪ್ಪು
ಬಿಳಿ ಮಿಶ್ರಿತ ಕೂದಲು ಇರುತ್ತದೆ. ಮೃತನ ಮೈಮೇಲೆ ತಿಳಿ ನೀಲಿ ಬಣ್ಣದ ಕಪ್ಪು ಗೆರೆಗಳುಳ್ಳ ಅರ್ಧತೋಳಿನ ಶರ್ಟ್ ಹಾಗೂ ಕಂದು ಬಿಳಿ ಮಿಶ್ರಿತ ಚೌಕುಳಿಯ ತುಂಬು ತೋಳಿನ ಶರ್ಟ್, ಕಡುನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ಈ ಮೃತನ ವಾರಸ್ಸುದಾರರು ಅಥವಾ ವಿಳಾಸ ಪತ್ತೆಯಾಗಿರುವುದಿಲ್ಲ. ಈ ವ್ಯಕ್ತಿಯ ವಾರಸ್ಸುದಾರರು ಪತ್ತೆಯಾದಲ್ಲಿ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.