ಶಿವಮೊಗ್ಗ,ಏ.08:ಭಾರತೀಯ ಜನತಾ ಪಕ್ಷದ ಕಟ್ಟಾಳು, ಆ ಪಕ್ಷವನ್ನು ಕಟ್ಟಿದ ನಾಯಕ, ಮಾಜಿ ಉಪಮುಖ್ಯಮಂತ್ರಿ ಕೆ ಎಸ್. ಈಶ್ವರಪ್ಪ ಈಗ ಪಕ್ಷಕ್ಕೆ ಸೆಡ್ಡು ಹೊಡೆದಿರುವುದು ಒಂದು ರೀತಿಯ ಪಗಡೆ ಆಟವಿದ್ದಂತೆ ಎಂದು
ಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನ ಕುಮಾರ್ ಇಂದಿಲ್ಲಿ ಹೇಳಿದರು.
ಈಶ್ವರಪ್ಪ ಅವರು ಈ ಚುನಾವಣೆಯಲ್ಲಿ ಒಂದು ಪಗಡೆ ಆಟದ ದಾಳವಾಗಿ ಬಳಕೆಯಾಗಿದ್ದಾರೆ. ಅವರು ನಾಮಪತ್ರ ಸಲ್ಲಿಸಲಿ, ಆಮೇಲೆ ಅವರನ್ನು ಬಳಕೆ ಮಾಡಿಕೊಂಡವರು ಯಾರು ಎಂದು ಹೇಳುತ್ತೇನೆ ಎಂದು ಪ್ರಸನ್ನ ಕುಮಾರ್ ಹೇಳಿದರು.
ಇಂದಿನ ದಿನಮಾನಗಳಲ್ಲಿ ನಿಜಕ್ಕೂ ಪಕ್ಷದ ವಿರುದ್ಧ ಧ್ವನಿಯೆತ್ತದ ಈಶ್ವರಪ್ಪ ಅವರು ಈಗ ಕೇವಲ ದಾಳವಾಗಿ ಬಳಕೆಯಾಗಿರುವುದು ದುರಂತವೇ ಹೌದು.ಇದು ನನ್ನ ವೈಯುಕ್ತಿಕ ಅಭಿಪ್ರಾಯವಷ್ಟೇ ಎಂದು ಹೇಳಿದರು.