ಶಿವಮೊಗ್ಗ,ಏ.08:
ಹೌದು ನಾನು ಈಶ್ವರಪ್ಪನಂತಹ ಭಾರತೀಯ ಜನತಾ ಪಕ್ಷದ ಹಿರಿಯರ ಗರಡಿಯಲ್ಲಿ ಬೆಳೆದ ಹುಡುಗ ಇಂದು ಎಂದು ಶಿವಮೊಗ್ಗ ಶಾಸಕ ಚನ್ನಬಸಪ್ಪ ಇಂದಿಲ್ಲಿ ಹೇಳಿದರು.
ಅವರಿಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ
ಪಕ್ಷದ ಚೌಕಟ್ಟುಗಳನ್ನು, ಅಲ್ಲಿನ ವರ್ಚಸ್ಸುಗಳನ್ನು, ಹಿಂದುತ್ವದ ಮಜಲುಗಳನ್ನು ತಿಳಿಹೇಳಿಕೊಟ್ಟವರಲ್ಲಿ ಈಶ್ವರಪ್ಪ ಸಹ ಅತಿ ಮುಖ್ಯ ಸ್ಥಾನದಲ್ಲಿ ನಿಲ್ಲುವಂತಹವರು. ಈಗ ಭಾರತೀಯ ಜನತಾ ಪಕ್ಷದ ವಿರುದ್ಧವಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವುದು ನಿಜಕ್ಕೂ ನಮಗೆ ಆತಂಕ ಹಾಗೂ ಬೇಸರವನ್ನು ತಂದಿದೆ ಎಂದರು.
ರಾಜಕೀಯ ಪಕ್ಷ ಅದರ ಸಿದ್ಧಾಂತ, ರಾಷ್ಟ್ರೀಯತೆ ಬೇರೆ. ಮಠದ ಹಾಗೂ ಧರ್ಮದ ಸಂಸ್ಕೃತಿಯೇ ಬೇರೆ, ರಾಜಕೀಯ ಪಕ್ಷ ಮಠದ ಸಂಸ್ಕೃತಿಯಲ್ಲ. ಇಲ್ಲಿ ಗುರುಹಿರಿಯರು ಎಂಬ ಭಾವನೆ ಮುಖ್ಯವಾಗುವುದಿಲ್ಲ. ಒಂದು ರಾಜಕೀಯ ಪಕ್ಷದ ಹಾಗೂ ದೇಶದ ಭವಿಷ್ಯದ ದೃಷ್ಟಿಯಿಂದ ಯೋಚಿಸಿದಾಗ ರಾಜಕೀಯ ಪಕ್ಷವೇ ಮುಖ್ಯವಾಗುತ್ತದೆ ಹೊರತು ಗುರು ಪರಂಪರೆಯಲ್ಲ ಎಂದು ಪತ್ರಕರ್ತರು ಕೇಳಿದ ಸಾಲು ಸಾಲಿನ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದರು.
ಈಶ್ವರಪ್ಪ ಅವರು ಚುನಾವಣಾ ಅಂಕಣದಿಂದ ಹೊರಬಂದು ರಾಷ್ಟ್ರೀಯ ಪಕ್ಷವನ್ನು ಮೋದಿಜಿ ಅವರನ್ನು ಬೆಂಬಲಿಸಲು ನಮ್ಮ ಜೊತೆ ಬರುತ್ತಾರೆ ಎಂಬ ನಂಬಿಕೆ ಈಗಲೂ ನಮಗಿದೆ ಇಲ್ಲಿ ವ್ಯಕ್ತಿಗಿಂತ ಪಕ್ಷ ಹಾಗೂ ರಾಷ್ಟ್ರದ ಹಿತ ಮುಖ್ಯ ಎಂದು ಚನ್ನಬಸಪ್ಪ ಹೇಳಿದರು.