ಶಿವಮೊಗ್ಗ,ಫೆ.೧೩: ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರನ್ನು ಹಿಯಾಳಿಸಿರುವ ಚಕ್ರವರ್ತಿ ಸೂಲಿಬೆಲೆ ಮತ್ತು ಪುನಿತ್ ಕೆರೆಹಳ್ಳಿಯವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಕ್ಕೇರಿ ರಮೇಶ್ ನೇತೃತ್ವದಲ್ಲಿ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನವಿ ಸಲ್ಲಿಸಲಾಯಿತು.


ಕರ್ನಾಟಕ ಸರ್ಕಾರ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಕುರಿತು ಕಳೆದ ಕೆಲ ದಿನಗಳ ಹಿಂದೆ ಚಕ್ರವರ್ತಿ ಸೂಲಿಬೆಲೆ ಅವರು ನೀಡಿರುವ ಹೇಳಿಕೆ ಶಾಲಾ ಮಕ್ಕಳಲ್ಲಿ ಧಾರ್ಮಿಕ ಪ್ರತಿಕೂಲ ಪರಿಣಾಮ ಬೀರುವಂತಾಗಿದೆ. ಸಮಾಜದ ಸ್ವಾಸ್ಥವನ್ನು ಶಾಂತಿಯನ್ನು ಭಂಗತರುವಂತೆ ಅವರು ಮಾತನಾಡಿದ್ದಾರೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಎರಡು ಪರೀಕ್ಷೆಗಳು ಒಟ್ಟಿಗೆ ಇರುವುದರಿಂದ ಬೆಳಿಗ್ಗೆ ಮತ್ತು ಮಧ್ಯಾಹ್ನ ವಿಭಾಗ ಮಾಡಲಾಗಿದೆ ಅಷ್ಟೇ. ಇಷ್ಟು ಸಣ್ಣ ವಿಷಯವನ್ನು ಅವರು ನೋಡುವ ರೀತಿಯೇ ಬೇರೆಯಾಗಿದೆ ಎಂದು ದೂರಿದರು.


ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ಕೆರೆಹಳ್ಳಿ ಎಂಬಾತ ಮಧುಬಂಗಾರಪ್ಪನವರ ಬಗ್ಗೆ ಏಕವಚನ ಮತ್ತು ತುಚ್ಛಶಬ್ಧಗಳಿಂದ ಅವಹೇಳನಕಾರಿಯಾಗಿ ಮಾತನಾಡಿರುತ್ತಾನೆ. ಈ ಇಬ್ಬರ ವಿರುದ್ಧವೂ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.


ಈ ಸಂದರ್ಭದಲ್ಲಿ ಪ್ರಮುಖರಾದ ಕುಮಾರ್, ರಾಘವೇಂದ್ರ, ಪ್ರಶಾಂತ್, ದಿವಾಕರ್, ಧರ್ಮರಾಜ್, ಮಂಜು, ಡಾ.ತಾನಾಜೀ, ಗಾಜನೂರು ನಾಗರಾಜ್ ಮುಂತಾದವರು ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!