ಶಿವಮೊಗ್ಗ,ಫೆ.೧೩: ಹಿಂದುಳಿದ ವರ್ಗಕ್ಕೆ ಅವಹೇಳನ ಮಾಡಿದ ರಾಹುಲ್ ಗಾಂಧಿಯವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಇಂದು ಶಿವಮೂರ್ತಿ ಸರ್ಕಲ್‌ನಲ್ಲಿ ರಾಹುಲ್ ಗಾಂಧಿಯವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ರಾಹುಲ್‌ಗಾಂಧಿಯವರು ಅಸಂಬದ್ದ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಈಗ ಹಿಂದುಳಿದ ವರ್ಗ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಬರದಲ್ಲಿ ಕರ್ನಾಟಕದಲ್ಲಿ ಗಾಣಿಗ ಸಮಾಜ ಹಿಂದುಳಿದ ವರ್ಗಕ್ಕೆ ಸೇರಿದಿಲ್ಲ ಅರ್ಥಹೀನ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
ತೇಲಿ ಸಮಾಜ ಎಂದರೇ ಕರ್ನಾಟಕದಲ್ಲಿ ಗಾಣಿಗ ಸಮಾಜ ಎಂದು ಅರ್ಥ. ಈ ಸಮಾಜ ಬಹಳ ಹಿಂದುಳಿದ ಸಮಾಜವಾಗಿದೆ. ಇಂತಹ ಸಮಾಜದಿಂದ ಬಂದಂತಹ ಪ್ರಧಾನಮಂತ್ರಿ ಮೋದಿ ಎಂಬುವುದು ಹೆಮ್ಮೆ ಪಡುವ ವಿಷಯ. ಆದರೆ, ರಾಹುಲ್ ಅವರು ಇದನ್ನು ತಿಳಿಯದೇ ಅವಹೇಳನ ಮಾಡಿದ್ದಾರೆ ಎಂದು ದೂರಿದರು.
೧೯೯೪ರಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ತೇಲಿ ಅಥವಾ ಗಾಣಿಗ ಸಮಾಜವನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿದ್ದಾರೆ. ಇದನ್ನು ಖುದ್ದು ಅಂದಿನ ಕಾಂಗ್ರೆಸ್ಸ್ ಉಪಮುಖ್ಯಮಂತ್ರಿಗಳೇ ಸ್ಪಷ್ಟ ಪಡಿಸಿದ್ದಾರೆ. ನಂತರ ಕೇಂದ್ರ ೧೯೯೯ರಲ್ಲಿ ಗಾಣಿಗ ಸಮಾಜವನ್ನು ಕೇಂದ್ರ ಓಬಿಸಿ ಲಿಸ್ಟ್‌ನಲ್ಲಿ ಸೇರಿಸಿದ್ದಾರೆ ಎಂದರು.
ಆದ್ದರಿಂದ ಪ್ರಧಾನಮಂತ್ರಿಗಳಿಗೂ ಹಾಗೂ ಹಿಂದುಳಿದ ವರ್ಗಕ್ಕೂ ಅವಹೇಳನ ಮಾಡಿರುವ ರಾಹುಲ್‌ಗಾಂಧಿಯವರು ಈ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ, ಪ್ರಮುಖರಾದ ಟಿ.ಡಿ.ಮೇಘರಾಜ್, ಆರ್.ಕೆ.ಸಿದ್ರಾಮಣ್ಣ, ಮೋಹನ್‌ರೆಡ್ಡಿ, ಶಿವರಾಜ್, ಸಿ.ಎಚ್.ಮಾಲತೇಶ್, ಸುಧಾಕರ್, ಕುಪ್ಪೇಂದ್ರ, ಪ್ರದೀಪ್ ಹೊನ್ನಪ್ಪ, ಪುರುಷೋತ್ತಮ, ವಿಕಾಸ್, ಪ್ರಭಾಕರ್, ರಂಗನಾಥ್, ವಿನ್ಸಟ್ ರೂಡ್ರಿಗಸ್, ವೀರಭದ್ರಪ್ಪ ಪೂಜಾರಿ, ಸುರೇಖಾ ಮುರಳೀಧರ್, ದರ್ಶನ್, ಹರೀಶ್, ರಾಮು, ಓಂಗಣೇಶ್ ಶೇಟ್, ಅಣ್ಣಪ್ಪ ಮುಂತಾದವರು ಇದ್ದರು.