ಶಿವಮೊಗ್ಗ,ಫೆ.೦೬: ಶಿವಮೊಗ್ಗ ತಾಲ್ಲೂಕಿನಲ್ಲಿ ಅಕ್ರಮ ಮರಳು ಮಾರಾಟ ದಂಧೆ ನಡೆಯುತ್ತಿರುವುದನ್ನು ಖಂಡಿಸಿ ಅಗತ್ಯ ಕ್ರಮಕ್ಕಾಗಿ ಆಗ್ರಹಿಸಿ ಇಂದು ಕನ್ನಡ ಕಾರ್ಮಿಕರ ರಕ್ಷಣ ವೇದಿಕೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.


ಶಿವಮೊಗ್ಗ ತಾಲ್ಲೂಕಿನ ಹಾಡೋನಹಳ್ಳಿ ಕೆಳಗಿನಹನಸವಾಡಿ, ಗುರುಪುರ, ಪಿಳ್ಳಂಗೆರೆ, ಮಂಡಗದ್ದೆ, ಸಕ್ರೆಬೈಲು, ನಿಂಬೆಗುಂದಿ, ನಾಗಸಮುದ್ರ, ಹೊಳೆಹೊನ್ನೂರು, ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಆರಗ ಮುಂತಾದ ಅನೇಕ ಕಡೆಗಳಲ್ಲಿ ಮರಳು ಮಾರಾಟ ಅಕ್ರಮ ದಂಧೆ ನಡೆಯುತ್ತಿದೆ. ರಾತ್ರೋರಾತ್ರಿ ಹಿಟಾಚಿ, ಜೆಸಿಬಿ ಇವುಗಳನ್ನು ಒಳಗೆ ಇಳಿಸಿ ಲಾರಿಗಳ ಮೂಲಕ ದಂಧೆಕೋರರು ಅಪಾರ ಪ್ರಮಾಣದಲ್ಲಿ ಮರಳನ್ನು ಕೊಳ್ಳೆಹೊಡೆಯುತ್ತಿದ್ದಾರೆ ಎಂದು ಪ್ರತಿಭಟನಕಾರಾರರು ದೋರಿದರು.


ಮರಳು ಮಾರಾಟ ದಂಧೆ ನಡೆಯುತ್ತಿದ್ದರು ಕೂಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಕಣ್ಣು ಮುಚ್ಚಿಕುಳಿತಿದೆ. ಅಕ್ರಮ ಮರಳು ದಂಧೆ ನಿಲ್ಲಿಸಬೇಕು. ಮರಳು ಟೆಂಡರ್‌ನ್ನು ಹರಾಜು ಹಾಕಬೇಕು. ನಾಗರೀಕರಿಗೆ ಸುಲಭ ಧರದಲ್ಲಿ ಮರಳು ಸಿಗುವಂತಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.


ಈ ಸಂದರ್ಭದಲ್ಲಿ ರಕ್ಷಣಾ ವೇದಿಕೆಯ ಅಧ್ಯಕ್ಷ ವಾಟಾಳ್ ಮಂಜುನಾಥ್, ಪ್ರಮುಖರಾದ ನಿತಿನ್‌ರೆಡ್ಡಿ, ಲೋಕೇಶ್, ಪ್ರ್ಯಾಕ್ಲಿನ್ ಸಾಲೋಮನ್, ರಾಘವೇಂದ್ರ ಸೇರಿದಂತೆ ಹಲವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!