ಶಿವಮೊಗ್ಗ,ಫೆ.06:

ಜನನ ಪ್ರಮಾಣ ಪತ್ರದಲ್ಲಿ ತಿದ್ದುಪಡಿಗೆ 1000 ರೂ. ಲಂಚಕ್ಕೆ ಬೇಡಿಕೆ ಇಟ್ಟ ಹಿನ್ನಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಜನನ ಮತ್ತು ಮರಣ ಪ್ರಮಾಣಪತ್ರ ವಿತರಣೆ ವಿಭಾಗದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಸರಿಯಷ್ಟೆ.

ಇಲ್ಲಿ ಎಫ್ ಡಿ ಎ ನಾಗರಾಜ್ ಅವರ ವಿರುದ್ದ ದೂರು ದಾಖಲಿಸಿ ಇಡೀ ಘಟನೆಯ ತನಿಖೆಗೆ ಮುಂದಾಗಿದ್ದಾರೆ. ಆದರೆ ಈ ದಾಳಿ ಕೇವಲ ಕೆಲವರ ಹಿತಾಸಕ್ತಿ ಆದರಿಸಿದೆ ಎನ್ನಲಾಗಿದೆ.


ಗಿರೀಶ್ ಜೆ. ಎನ್ನುವವರು 2 ದಿನಗಳ ಹಿಂದೆ ಜನನ ಪ್ರಮಾಣ ಪತ್ರದ ತಿದ್ದುಪಡಿಗೆ ಅರ್ಜಿ ಸಲ್ಲಿಸುವಾಗ ವಿಭಾಗದ ಎಫ್‌ಡಿಎ ನಾಗರಾಜ್ ಅವರು 2 ಪ್ರತಿ ನೀಡಲು 1000 ನೀಡುವಂತೆ ಸೂಚಿಸಿದ್ದು, ಅವರಿಗೆ 1000 ರೂ. ನೀಡುವುದನ್ನು ಮತ್ತು ಅವರು ಆಡಿದ ಮಾತುಗಳನ್ನು

ದೂರುದಾರ ಗಿರೀಶ್ ಅವರು ಮೊಬೈಲ್‌ನಲ್ಲಿ ದಾಖಲಿಸಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರೆನ್ನಲಾಗಿತ್ತು. ಅದರ ಆಧಾರದ ಮೇಲೆ ಇಂದು ಲೋಕಾಯುಕ್ತ ಪೊಲೀಸರು ಡಿ.ವೈ.ಎಸ್.ಪಿ. ಉಮೇಶ್ ಈಶ್ವರ್‌ನಾಯಕ್ ನೇತೃತ್ವದಲ್ಲಿ

ಪಾಲಿಕೆಯ ಜನನ ಮರಣ ವಿಭಾಗಕ್ಕೆ ಭೇಟಿ ನೀಡಿ. ದಾಖಲೆಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಇನ್ಸ್‌ಫೆಕ್ಟರ್ ಸುರೇಶ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ಇಡೀ ಘಟನೆಯ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದೆ. ಕೆಲವರ ಸ್ವ ಹಿತಾಸಕ್ತಿ ಇದಕ್ಕೆ ಕಾರಣವಾದರೆ, ಅವರ ವಿರುದ್ದವೂ ದೂರು ದಾಖಲಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!